‘ತಂದೆ ವಿರೋಧವಿದ್ರು ಟಿಕೆಟ್ ಕೊಟ್ಟೆ : ಆದ್ರೆ ಇವ್ನು ಬಿಜೆಪಿ ಹಣ ಪಡೆದು ನಾಟಕವಾಡಿದ’

Published : Nov 27, 2019, 02:04 PM ISTUpdated : Nov 27, 2019, 07:24 PM IST
‘ತಂದೆ ವಿರೋಧವಿದ್ರು ಟಿಕೆಟ್ ಕೊಟ್ಟೆ :  ಆದ್ರೆ ಇವ್ನು ಬಿಜೆಪಿ ಹಣ ಪಡೆದು ನಾಟಕವಾಡಿದ’

ಸಾರಾಂಶ

ನನ್ನ ತಂದೆ ವಿರೋಧವಿದ್ದರು ಟಿಕೆಟ್ ಕೊಟ್ಟು ಗೆಲ್ಲಿಸಿದ್ದಕ್ಕೆ ಬಿಜೆಪಿಯಿಂದ ಹಣ ಪಡೆದು ನಾಟಕವಾಡಿದ ಎಂದು ಮಾಜಿ ಸಿಎಂ ಕುಮಾರಸ್ವಾಮಿ, ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

"

ಮಂಡ್ಯ [ನ.27]: ಬಾಂಬೆ ಕಳ್ಳ ಎಂದೇ ಕರೆಸಿಕೊಳ್ಳುವ ಇವನಿಗೆ 2013ರಲ್ಲಿ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಲಾಗಿತ್ತು. ಆದ್ರೆ 2018ರಲ್ಲಿ ಮತ್ತೊಮ್ಮೆ ನನ್ನ ತಂದೆ ವಿರೋಧದ ನಡುವೆಯೂ ಟಿಕೆಟ್ ನೀಡಿ ಗೆಲ್ಲಿಸಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ನಾರಾಯಣ ಗೌಡ ವಿರುದ್ಧ ವಾಗ್ದಾಳಿ ನಡೆಸಿದರು. 

ಮಂಡ್ಯದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ 2019ರಲ್ಲಿ ನಾನು ಫೆಬ್ರವರಿಯಲ್ಲಿ ನಾನು ಬಜೆಟ್ ಸಿದ್ಧತೆ ಮಾಡಿಕೊಳ್ಳುತ್ತಿದ್ದೆ. ಆದರೆ ಇವನು ಹೋಗಿ ಬಾಂಬೆಯಲ್ಲಿ ನಾಟಕವಾಡಿ ಆಸ್ಪತ್ರೆ ಸೇರಿಕೊಂಡಿದ್ದ. ಬಿಜೆಪಿಯವರಿಂದ ಹಣಪಡೆದು ಮಲಗಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ನನ್ನ ಮೇಲೆ ನಾರಾಯಣ ಗೌಡ ಆರೋಪ ಮಾಡುತ್ತಿದ್ದು ಇದನ್ನು ದೇವರು ಮೆಚ್ಚುತ್ತಾನಾ. ಪ್ರವಾಹದಿಂದ ರೈತರ ಬೆಳೆ ಹಾನಿಯಾಗಿ ಬೀದಿಗೆ ಬಂದಿದ್ದರೆ ನಾರಾಯಣಗೌಡ ಸರ್ಕಾರ ಬೀಳಿಸಲು ಬಿಜೆಪಿ ಜೊತೆ ಸೇರಿದ್ದ ಎಂದರು. 

ಇನ್ನು ನಾರಾಯಣಗೌಡನಿಗೆ ಐದು ವರ್ಷಗಳ ಕಾಲ ಇರಲೆಂದು ಅಧಿಕಾರ ಕೊಟ್ಟಿದ್ದರು. ಯಡಿಯೂರಪ್ಪನವರ ಕುತಂತ್ರದಿಂದ ನನ್ನನ್ನ‌ ಕೆಳಗಿಳಿಸಿದ. ಕುರಿ ಕೋಳಿ ದನಗಳಂತೆ ಶಾಸಕರನ್ನ ಖರೀದಿ ಮಾಡಿದ್ದಾರೆ.
ಈ ಹಿಂದೆಯೂ ಶಾಸಕರನ್ನ ಖರೀದಿ ಮಾಡಿದ್ದರು. 17 ಶಾಸಕರ ರಾಜೀನಾಮೆಗೆ ಏನೇನು ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಪಾಪದ ಹಣವನ್ನು ಸಂಗ್ರಹಿಸಿ ಅಧಿಕಾರ ಹಿಡಿಯಲು ಹೊರಟಿದ್ದಾರೆ. ನಾನು ಪಾಪದ ಹಣ ಸಂಗ್ರಹಿಸಿ ಅಧಿಕಾರ ಉಳಿಸಿಕೊಳ್ಳಬಹುದಿತ್ತು ಆದರೆ ನಮ್ಮ ತಂದೆ ಅಂತಹ ಕೆಲಸವನ್ನ ಹೇಳಿಕೊಟ್ಟಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು. 

ಡಿಸೆಂಬರ್ 5ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು