ಎತ್ತಿ ಹಾಕುವ ಕೆಟ್ಟ ವಿದ್ಯೆಯನ್ನು ಅಪ್ಪ ಮಗ ಹೆಣೆದಿದ್ದಾರೆ ಎಂದು ಏಕವಚನದಲ್ಲೇ ದೊಡ್ಡ ಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.
ದಾವಣಗೆರೆ [ನ.27]: ಉಪ ಚುನಾವಣೆ ಹಿನ್ನೆಲೆಯಲ್ಲಿ ಎತ್ತಿ ಹಾಕುವ ಕೆಟ್ಟ ವಿದ್ಯೆಯನ್ನು ಅಪ್ಪ, ಮಗ ಹೆಣೆದಿದ್ದಾರೆ ಎಂದು ವಿಪ ಸದಸ್ಯ,ಬಿಜೆಪಿಯ ಹಿರಿಯ ಮುಖಂಡ ಆಯನೂರು ಮಂಜುನಾಥ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನಗರದಲ್ಲಿ ಉತ್ತರ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಕ್ಕೆ 15ನ್ನೂ ಖಚಿತವಾಗಿ ಗೆಲ್ಲುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಸಮರ್ಥಿಕೊಂಡು ಬರುವ ಕೆಲಸವನ್ನು ಈ ಅಪ್ಪ, ಮಗ ಮಾಡುತ್ತಿದ್ದಾರಷ್ಟೇ ಎಂದರು.
ಒಂದು ಕಡೆ ಅನರ್ಹ ಶಾಸಕರನ್ನು ಸೋಲಿಸುತ್ತೇವೆಂದು ಹೇಳುತ್ತಾರೆ. ಮತ್ತೊಂದು ಕಡೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬೀಳುವುದಕ್ಕೆ ಬಿಡುವುದಿಲ್ಲವೆನ್ನುತ್ತಾರೆ. ಯಾಕಂದ್ರೆ, ಈ ಅಪ್ಪ-ಮಕ್ಕಳ ಪಕ್ಷದ ಬೆನ್ನಿನ ಮೇಲೆ ಯಡಿಯೂರಪ್ಪರನ್ನು ಕೂಡಿಸಿಕೊಳ್ಳಬೇಕಷ್ಟೇ ಎಂದು ವ್ಯಂಗ್ಯವಾಡಿದರು. ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳನ್ನೂ ಗೆಲ್ಲುವ ಜೊತೆಗೆ ಬಾಕಿ ಉಳಿದ ಮೂರೂವರೆ ವರ್ಷ ಕಾಲ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಸುಭದ್ರ ಆಡಳಿತ ನೀಡಲಿದೆ ಎಂದು ಆಯನೂರು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ