
ಕಾಗವಾಡ(ನ.30): ರಾಜ್ಯದ 15 ಕ್ಷೇತ್ರಗಳಲ್ಲಿ ಉಪಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಅನರ್ಹರ ವಿರುದ್ಧ ವಾತಾವರಣ ರಾಜ್ಯದ 15 ಕ್ಷೇತ್ರಗಳಲ್ಲೂ ಇದೆ, 15 ಅನರ್ಹ ಅಭ್ಯರ್ಥಿಗಳನ್ನು ತಿರಸ್ಕರಿಸುವ ತೀರ್ಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಶನಿವಾರ ಕಾಗವಾಡ ಕ್ಷೇತ್ರದ ಕವಲಗುಡ್ಡದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯಲ್ಲೇ ಅನರ್ಹ ಅಭ್ಯರ್ಥಿಗಳಿಗೆ ಸರಿಯಾದ ಪ್ರೊತ್ಸಾಹ ಇಲ್ಲ, ಜನಸಾಮಾನ್ಯರಿಗೆ ಸರ್ಕಾರ ಇದೆ ಅಂತಾನೇ ಗೊತ್ತಿಲ್ಲ ಸ್ಥಿತಿ ಇದೆ. ಬಿಜೆಪಿ ಯಾವ ಕಸರತ್ತು ಈ ಚುನಾವಣೆಯಲ್ಲಿ ಕೆಲಸ ಮಾಡಲ್ಲ, ಒಂದೊಂದು ಕ್ಷೇತ್ರಕ್ಕೆ 25-30 ಕೋಟಿ ಹಣ ಸಾಗಾಣಿಕೆ ಪ್ರಾರಂಭವಾಗಿದೆ. ಬಿಜೆಪಿಯಿಂದ ಜನ ಹಣ ತಗೊಂಡು ಅವರಿಗೆ ಮತ ಹಾಕಲ್ಲ ಎಂದು ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಜ್‌ವೆಸ್ಟೆಂಡ್‌ನಿಂದ ಕುಮಾರಸ್ವಾಮಿ ಆಡಳಿತ ನಡೆಸುತ್ತಿದ್ದರು ಎಂದು ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ ಅವರು, ತಾಜ್‌ವೆಸ್ಟೆಂಡ್ ಅನ್ನೋದು ಎಲ್ಲರಿಗೂ ಮಂತ್ರ ಪಠನೆ ತರ ಆಗಿದೆ. ನಾನು ಮಧ್ಯಾಹ್ನ ಸಂದರ್ಭದಲ್ಲಿ ಅವಶ್ಯಕತೆ ಹಿನ್ನಲೆಯಲ್ಲಿ ಅದನ್ನು ಇಟ್ಟುಕೊಂಡಿದ್ದೇನೆ. ಈಗಲೂ ತಾಜ್‌ವೆಸ್ಟೆಂಡ್‌ನಲ್ಲಿ ರೂಮ್ ಇದೆ. ಶ್ರೀಮಂತ ಪಾಟೀಲ್ ಪ್ರತಿ ದಿನ ನನ್ನ ಹತ್ತಿರ ಬರುತ್ತಿದ್ದರು, ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಹತ್ತಿರ ಬರುತ್ತಿರಲಿಲ್ಲ, ಫ್ಯಾಕ್ಟರಿ ಕೋಜೆನ್ ಅನುಮತಿ, ಕೆಲಸದ ವಿಚಾರದಲ್ಲಿ ನನ್ನ ಹತ್ತಿರ ಬರುತ್ತಿದ್ದರು. ಇಂತಹ ವ್ಯಕ್ತಿಗಳು ಜನರನ್ನ ಲೂಟಿ ಹೊಡೆದಿದ್ದಾರೆ. ಇವರು ತಮ್ಮ ಅಭಿವೃದ್ಧಿ ಮಾಡಿಕೊಳ್ತಿದ್ದಾರೆ. ಕಾಗವಾಡ ಅಭಿವೃದ್ಧಿ ಅಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರ ಉಳಿಸೋದು, ಬೀಳಿಸೋದು ನನ್ನ ಕಡೆ ಇದೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅದನ್ನು ಡಿಸೆಂಬರ್ 9 ರ ನಂತರ ಹೇಳ್ತಿನಿ ಬನ್ನಿ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.