'ಕುಮಾರಸ್ವಾಮಿ ಸರ್ಕಾರ ಬೀಳಲು ಸಿದ್ದರಾಮಯ್ಯನೇ ಕಾರಣ'

By Web DeskFirst Published Nov 30, 2019, 3:22 PM IST
Highlights

ಚುನಾವಣೆ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡೋದು ಸಹಜ| ಫಲಿತಾಂಶ ಬರುವವರೆಗೂ ಅವರವರು ಅಭಿಪ್ರಾಯ ನೀಡಲು ಸ್ವತಂತ್ರರಾಗಿದ್ದಾರೆ| ಸಿದ್ದರಾಮಯ್ಯ ಸರ್ಕಾರ ಬೀಳಿಸಿದ್ದು ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದ ಸಿಸಿ ಪಾಟೀಲ| 

ಧಾರವಾಡ(ನ.30): ಮೂರು ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡು ಚುನಾವಣೆ ನಡೆಸುತ್ತಿದ್ದೇವೆ. ನನ್ನ ಜೊತೆಗೆ ಹಿರಿಯ ನಾಯಕರಿದ್ದಾರೆ. ನೂರಕ್ಕೆ ನೂರರಷ್ಟು ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತದೆ. 15 ಕ್ಷೇತ್ರಗಳಲ್ಲಿ ಅಚ್ಚರಿಯ ಗೆಲುವು ಸಾಧಿಸುತ್ತೇವೆ ಹಾಗೆ ಶಿವಾಜಿನಗರದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿಸಿ ಪಾಟೀಲ ಅವರು ಹೇಳಿದ್ದಾರೆ. 

ಚುನಾವಣಾ ಫಲಿತಾಂಶದ ಬಳಿಕ ಕಾದು ನೋಡಿ ಎಂದು ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಮಾತನಾಡಿದ ಅವರು, ಅವರೇನು ಜೋತಿಷ್ಯಿಗಳಾ? ಫಲಿತಾಂಶ ಬರುವವರೆಗೂ ಅವರವರು ಅಭಿಪ್ರಾಯ ನೀಡಲು ಸ್ವತಂತ್ರರಾಗಿದ್ದಾರೆ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಸರ್ಕಾರ ಬೀಳಲು ಸಿದ್ದರಾಮಯ್ಯ ಅವರೇ ಕಾರಣರಾಗಿದ್ದಾರೆ. ಅವರೇ ಸರ್ಕಾರ ಬೀಳಿಸಿದ್ದು ಅಂತಾ ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿ.ಎಸ್ ಪುಟ್ಟರಾಜ ಆರೋಪಕ್ಕೆ ತಿರುಗೇಟು ನೀಡಿದ ಪಾಟೀಲ ಅವರು, ಚುನಾವಣೆ ಸಂದರ್ಭದಲ್ಲಿ ಒಬ್ಬರ ಮೇಲೆ ಒಬ್ಬರು ಆರೋಪ ಮಾಡೋದು ಸಹಜವಾಗಿರುತ್ತದೆ. ಎಲ್ಲಿ, ಯಾವ ರೀತಿ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದಾರೆ. ಹಿಂದೆ ಅವರ ಅಧಿಕಾರದಲ್ಲಿದ್ದಾಗ ಚುನಾವಣೆ ಆಗಿವೆ, ಅಧಿಕಾರಿಗಳು ಆವಾಗ ಏಜೆಂಟ್ ರಾಗಿದ್ದರಾ? ಅಧಿಕಾರಿಗಳ ಬಗ್ಗೆ ಹಾಗೇ ಮಾತನಾಡುವುದು ಸೂಕ್ತವಲ್ಲ ಎಂದು ತಿಳಿಸಿದ್ದಾರೆ. ಹಣ ಹಂಚಿಕೆ ಆರೋಪದ ಬಗ್ಗೆ ತುಟಿ ಪಿಟಿಕ್ ಅನ್ನದ ಸಿಸಿ

ಪಾಟೀಲ ಅವರು, ಹಣ ಹಂಚಿಕೆ ಬಗ್ಗೆ ನನಗೆ ಗೊತ್ತಿಲ್ಲ, ಹದಿನೈದು ಕ್ಷೇತ್ರಗಳನ್ನು ಗೆಲ್ಲುತ್ತೇವೆ. ಹಿಂದೆ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಇತ್ತು, ಅವರು ಎಂತಹ ಆಡಳಿತ ನೀಡಿದ್ರು ಅಂತ ಎಲ್ಲರಿಗೂ ಗೊತ್ತಿದೆ. ನಾವು ಅವರಿಗೆ ಕೂಡಲು ಬೇಡ ಅಂತ ನಾವು ಅಂದಿಲ್ಲ, ತಾವೇ ಬೇರೆಯಾಗಿದ್ದಾರೆ ಎಂದು ಹೇಳಿದ್ದಾರೆ. 

ಚುನಾವಣೆ ಬಳಿಕ ಯಡಿಯೂರಪ್ಪ ಅವರು ಇನ್ನಷ್ಟು ಪ್ರಬಲ ನಾಯಕರಾಗಲಿದ್ದಾರೆ.ನಾನು ಹತ್ತು ದಿನಗಳ ಕಾಲ ಕ್ಷೇತ್ರದಲ್ಲಿದ್ದೇನೆ. ಎಲ್ಲೋ ಒಂದಿಷ್ಟು ಸಣ್ಣ ಪುಟ್ಟ ದೂರುಗಳಿವೆ. ಆದರೆ ಅಂತಹ ಪ್ರತಿರೋಧ ನಮಗೆ ಕಂಡು ಬಂದಿಲ್ಲ,
ಹನಿಟ್ರ್ಯಾಪ್‌ನಲ್ಲಿ ಶಾಸಕರ ಭಾಗಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ತನ್ನದೆಯಾದ ಕ್ರಮ ಕೈಗೊಳ್ಳುತ್ತದೆ. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಆಗೋದಿಲ್ಲ, ಕಾನೂನು ಎಲ್ಲರಿಗೂ ಅಷ್ಟೇ ಎಂದು ಹೇಳಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ. 
 

click me!