ನಾನು ಯಾರನ್ನಾದರೂ ಅವಾಚ್ಯ ಶಬ್ಧದಿಂದ ಬೈದಿದ್ದೀನಾ?. ಅವರ ಧರ್ಮವನ್ನ ಟಾರ್ಗೆಟ್ ಮಾಡಿ ಹೇಳಿಲ್ಲ. ಆದ್ರೆ ಹುಳುಕುಗಳನ್ನ ಎಕ್ಸ್ ಪೋಸ್ ಮಾಡಿದ್ದೇನೆ. ವೈಯಕ್ತಿಕವಾಗಿ ಯಾರನ್ನೂ ನಿಂದನೇ ಮಾಡಿಲ್ಲಾ. ಹಿಂದೂಗಳ ಭೂಮಿಯನ್ನು ಕಬಳಿಸುವಂತದ್ದು ಅನೈತಿಕ ಕೆಲಸ. ಇದರ ಬಗ್ಗೆ ಮಾತನಾಡುವವರ ಮೇಲೆ ಕೇಸ್ ಹಾಕ್ತಿದ್ದಾರೆ, ಇದು ತಾಲಿಬಾನ್ ಸರ್ಕಾರ. ಇದರ ನೇತೃತ್ವವನ್ನ ಸಿದ್ದರಾಮಯ್ಯನವರು ವಹಿಸಿದ್ದಾರೆ ಅನುಮಾನವೇ ಬೇಡ: ಮಾಜಿ ಸಂಸದ ಪ್ರತಾಪ್ ಸಿಂಹ
ಹಾವೇರಿ(ನ.07): ಶಹಾಪುರಕ್ಕೆ ಹೋದೆ ಕೇಸ್ ಹಾಕಿದ್ರು, ಪುನೀತ್ ಕೆರೆಹಳ್ಳಿ ವಿಚಾರದಲ್ಲೂ ಕೇಸ್ ಹಾಕಿದ್ರು. ಮಾಗಡಿ ರೋಡ್ ಹಾಗೂ ದಾವಣಗೆರೆಯಲ್ಲೂ FIR ಹಾಕಿದ್ರು. ವಕ್ಫ್ ಆಸ್ತಿಯಲ್ಲಿ ರೈತರಿಗೆ ಹಿಂದೂಗಳಿಗೆ ಅನ್ಯಾಯ ಆಗ್ತಿದೆ. ಇದನ್ನೂ ಮಾತನಾಡಬಾರದಾ? ಎಂದು ತಮ್ಮ ಮೇಲೆ ಕೇಸ್ ಹಾಕಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಗರಂ ಆಗಿದ್ದಾರೆ.
ಇಂದು(ಗುರುವಾರ) ಶಿಗ್ಗಾಂವಿ ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, ನಾನು ಯಾರನ್ನಾದರೂ ಅವಾಚ್ಯ ಶಬ್ಧದಿಂದ ಬೈದಿದ್ದೀನಾ?. ಅವರ ಧರ್ಮವನ್ನ ಟಾರ್ಗೆಟ್ ಮಾಡಿ ಹೇಳಿಲ್ಲ. ಆದ್ರೆ ಹುಳುಕುಗಳನ್ನ ಎಕ್ಸ್ ಪೋಸ್ ಮಾಡಿದ್ದೇನೆ. ವೈಯಕ್ತಿಕವಾಗಿ ಯಾರನ್ನೂ ನಿಂದನೇ ಮಾಡಿಲ್ಲಾ. ಹಿಂದೂಗಳ ಭೂಮಿಯನ್ನು ಕಬಳಿಸುವಂತದ್ದು ಅನೈತಿಕ ಕೆಲಸ. ಇದರ ಬಗ್ಗೆ ಮಾತನಾಡುವವರ ಮೇಲೆ ಕೇಸ್ ಹಾಕ್ತಿದ್ದಾರೆ, ಇದು ತಾಲಿಬಾನ್ ಸರ್ಕಾರ. ಇದರ ನೇತೃತ್ವವನ್ನ ಸಿದ್ದರಾಮಯ್ಯನವರು ವಹಿಸಿದ್ದಾರೆ ಅನುಮಾನವೇ ಬೇಡ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹಿಂದೂಗಳ ಜಮೀನು 'ವಕ್ಫ್ ಆಸ್ತಿ' ಅಂತಾರಲ್ಲ ಅದೇನು ಸೌದಿಯ ಮುಲ್ಲಾಗಳು ಕೊಟ್ಟ ಆಸ್ತಿನಾ?: ಪ್ರತಾಪ್ ಸಿಂಹ ವಾಗ್ದಾಳಿ
ಮುಡಾ ಕೇಸ್ ನಲ್ಲಿ ಲೋಕಾಯುಕ್ತ ವಿಚಾರಣೆ ವಿಚಾರದ ಬಗ್ಗೆ ಮಾತನಾಡಿದ ಪ್ರತಾಪ್ ಸಿಂಹ, ನಾವು ಮೈಸೂರು ವರೆಗೂ ಪಾದಯಾತ್ರೆ ಮಾಡಿದ್ವಿ. ತಾರ್ಕಿಕ ಅಂತ್ಯ ಕಾಣುವ ವಾತಾವರಣ ಸೃಷ್ಟಿಯಾಯಿತು. ಬಳಿಕ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆಗಳು ಶುರುವಾದವು. ಇದಕ್ಕೆಲ್ಲ ನಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಯಡಿಯೂರಪ್ಪರನ್ನ ಅನ್ಯಾಯವಾಗಿ ಜೈಲಿಗೆ ಕಳಿಸಿದ್ರು. ಆಗ ಜೈಲಿಗೆ ಹೋಗಿಬಂದವರು ಎಂದು ಹಾದಿ ಬೀದಿಯಲ್ಲಿ ಸಿದ್ದರಾಮಯ್ಯನವರು ಯಡಿಯೂರಪ್ಪ ರನ್ನ ನೀಂದಿಸುತ್ತಿದ್ರು. ಇದೀಗ ಅವರೇ ಲೋಕಾಯುಕ್ತದಲ್ಲಿ ಹೋಗಿ ಕುಳಿತುಕೊಳ್ಳುವ ಪರಿಸ್ಥಿತಿ ಬಂದಿದೆ.. ರಿಸೈನ್ ಮಾಡದೇ ಕುರ್ಚಿಗೆ ಅಂಟಿಕೊಂಡು ಕುಳಿತುಕೊಂಡಿದ್ದಾರೆ. ಮತ್ತೆ ಜೈಲಿಗೆ ಹೋಗುವ ಆತಂಕವನ್ನು ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಮಾಡಿದ ಪಾಪಗಳಿಗೆ ಇವತ್ತು ಫಲ ಕೊಡುತ್ತಿವೆ ಎನ್ನಿಸುತ್ತಿದೆ ಎಂದಿದ್ದಾರೆ.
ವಕ್ಫ್ ಆಸ್ತಿ ವಿವಾದದಲ್ಲಿ ಸಚಿವ ಜಮೀರ್ ಅಹಮದ್ ಖಾನ್ ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಪ್ರತಾಪ್ ಸಿಂಹ, ಜಮೀರ್ ಅಹಮದ್ ಅವರನ್ನ ಹಿಂದೆ ಕುಮಾರಸ್ವಾಮಿ ಹತ್ತಿರ ಇಟ್ಕೊಂಡು ಹಾಳಾದ್ರು. ಈಗ ಸಿದ್ದರಾಮಯ್ಯನವರು ಹತ್ರಾ ಇಟ್ಕೊಂಡು ಹಾಳಾಗ್ತಿದ್ದಾರೆ. ಹಾಳಾಗೋಕೆ ಹೊರಟಿರೋರಿಗೆ ಆಲ್ ದಿ ಬೆಸ್ಟ್ ಹೇಳಬೇಕು ಅಷ್ಟೇ. ಜಮೀರ್ ಅಹಮದ್ ಜೊತೆಯಲ್ಲಿಟ್ಟುಕೊಂಡ್ರ, ಸಿದ್ದರಾಮಯ್ಯನವರು ತಮಗೆ ತಾವೇ ಚಪ್ಪಡಿನಾ ತಲೆಮೇಲೆ ಎಳೆದುಕೊಳ್ತಿದ್ದಾರೆ ಎಂದು ತಿಳಿಸಿದ್ದಾರೆ.