ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಡವಿ ಸಿಪಿಲೆ ಪಕ್ಷಿ!

Kannadaprabha News   | Asianet News
Published : Apr 01, 2021, 02:50 PM IST
ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅಡವಿ ಸಿಪಿಲೆ ಪಕ್ಷಿ!

ಸಾರಾಂಶ

ಪಶ್ಚಿಮಘಟ್ಟ ಮತ್ತು ದಟ್ಟ ಕಾನನಗಳಲ್ಲಿ ಕಾಣಸಿಗುವ ಅಡವಿ ಸಿಪಿಲೆ ಪಕ್ಷಿ| ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ| ಕ್ಯಾಮೆರಾದಲ್ಲಿ ಪಕ್ಷಿ ಫೋಟೋ ಸೆರೆ ಹಿಡಿದ ಕಮಲಾಪುರದ ಪಕ್ಷಿ ವೀಕ್ಷಕ ಜಿ.ಎ. ಶಬರೀಶ| 

ಹೊಸಪೇಟೆ(ಏ.01):  ಪಶ್ಚಿಮಘಟ್ಟ ಮತ್ತು ದಟ್ಟ ಕಾನನಗಳಲ್ಲಿ ಕಾಣಸಿಗುವ ಅಡವಿ ಸಿಪಿಲೆ ಪಕ್ಷಿಯೊಂದು ಹಂಪಿ ಕನ್ನಡ ವಿವಿಯಲ್ಲಿ ಪತ್ತೆಯಾಗಿದೆ.

ಕಮಲಾಪುರದ ಪಕ್ಷಿ ವೀಕ್ಷಕ ಜಿ.ಎ. ಶಬರೀಶ ಕ್ಯಾಮೆರಾದಲ್ಲಿ ಇದರ ಫೋಟೋ ತೆಗೆದಿದ್ದಾರೆ. ಈ ಭಾಗದಲ್ಲಿ ಪಕ್ಷಿ ಕಂಡುಬಂದಿರುವುದು ಇದೇ ಮೊದಲ ಬಾರಿಯಾಗಿದೆ.

ಪಂಚಮಸಾಲಿಗರ 2ಎ ಸೌಲಭ್ಯಕ್ಕಾಗಿ ನೇಣಿಗೇರಲು ಸಿದ್ಧ: ಕಾಶಪ್ಪನವರ

ಸಿಪಿಲೆ ಪ್ರಭೇದಗಳಲ್ಲೇ ಈ ಅಡವಿ ಸಿಪಿಲೆ (ಕುಂಡೆಕುಸ್ಕ) ಪಕ್ಷಿಯ ರೆಕ್ಕೆ ವಿಶಿಷ್ಟ ಸಂರಚನೆಯಿಂದ ಕೂಡಿದೆ. ಮರಗಳಲ್ಲಿ ಗೂಡುಕಟ್ಟುವ ಇದು ದಟ್ಟ ಅರಣ್ಯಗಳಲ್ಲಿ ಕಾಣಸಿಗುತ್ತಿದ್ದು ಬಯಲುಸೀಮೆಯ ಈ ಪ್ರದೇಶದಲ್ಲಿ ಕಂಡುಬಂದಿರುವುದು ಅಚ್ಚರಿಯಾಗಿದೆ ಎಂದು ಪಕ್ಷಿ ವೀಕ್ಷಕ ಮತ್ತು ಉರಗಪ್ರೇಮಿ ಪಂಪಯ್ಯಸ್ವಾಮಿ ಮಳೆಮಠ ತಿಳಿಸಿದ್ದಾರೆ.
 

PREV
click me!

Recommended Stories

ಉಡುಪಿ: ಧರ್ಮ-ಸಂವಿಧಾನ ಬೇರೆಯಲ್ಲ:-ಪವನ್ ಕಲ್ಯಾಣ ಬಣ್ಣನೆ
ಪಬ್ಬಲ್ಲಿ ಮೊಬೈಲ್‌ ತರಲುಹೋದ ಕನ್ನಡಿಗ ಬಲಿ, ಗೋವಾ ಪಬ್ ದುರಂತಕ್ಕೆ ಕಾರಣವೇನು?