ಬದುಕಿತು ಬಡ ಜೀವ: ನೀರಿನ ತೊಟ್ಟಿ​ಯಲ್ಲಿ ಬಿದ್ದಿದ್ದ ಚಿರ​ತೆ ಮರಿ ರಕ್ಷ​ಣೆ

By Kannadaprabha NewsFirst Published Apr 2, 2020, 3:25 PM IST
Highlights

ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವಲಯದಿಂದ ತಪ್ಪಿಸಿಕೊಂಡಿತ್ತು ಬಿಳಿಕಲ್‌ ಅರಣ್ಯ ವ್ಯಾಪ್ತಿಯಲ್ಲಿ ಪತ್ತೆ|ತೋಟದಲ್ಲಿರುವ ಸಿಮೆಂಟ್‌ ತೊಟ್ಟಿಗೆ ಚಿರ​ತೆ ಮರಿ| ಅರಣ್ಯ ಸಿಬ್ಬಂದಿ ಕಾರ್ಯಾಚರಣೆ| 

ಕನಕಪುರ(ಏ.02): ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವಲಯದಿಂದ ತಪ್ಪಿಸಿಕೊಂಡು ಬಂದಿದ್ದ ಚಿರತೆ ಮರಿಯನ್ನು ರಕ್ಷಿಸಿ ಮತ್ತೆ ಅರಣ್ಯಕ್ಕೆ ಬಿಟ್ಟ ಘಟನೆ ತಾಲೂಕಿನ ಬಿಳಿಕಲ್‌ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.

ಕನಕಪುರ ಸಾಮಾಜಿಕ ಅರಣ್ಯ ವಲಯ ವ್ಯಾಪ್ತಿಗೆ ಒಳಪಡುವ ಕೆರಳಾಳುಸಂದ್ರ ಗ್ರಾಮದಲ್ಲಿರುವ ರಾಧಾಕೃಷ್ಣ ಅಡಿಗಾಸ್‌ ತೋಟದಲ್ಲಿರುವ ಸಿಮೆಂಟ್‌ ತೊಟ್ಟಿಗೆ ಬನ್ನೇರುಘಟ್ಟ ಅರಣ್ಯ ವಲಯದಿಂದ ತಪ್ಪಿಸಿಕೊಂಡು ಬಂದಿದ್ದ ಸುಮಾರು ಒಂದೂವರೆ ವರ್ಷದ ಗಂಡು ಚಿರತೆ ರಾತ್ರಿ ವೇಳೆ ತೊಟ್ಟಿಗೆ ಬಿದಿದ್ದು, ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ತೋಟದ ಸಿಬ್ಬಂದಿ ಅರಣ್ಯ ಇಲಾಖೆಗೆ ಕರೆ ಮಾಡಿ ವಿಷಯ ತಿಳಿಸಿದ್ದರಿಂದ ಆರ್‌ಎಫ್‌ಒ ದಿನೇಶ್‌ ಮಾರ್ಗದರ್ಶನದಲ್ಲಿ ಎ.ಸಿ.ಎಫ್‌. ಸೀಮಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅರಣ್ಯ ಸಿಬ್ಬಂದಿ ತೊಟ್ಟಿಗೆ ಏಣಿ-ಬಲೆಯನ್ನು ಹಾಕಿ ಚಿರತೆ ಮೇಲೆ ಹತ್ತಲು ಅವಕಾಶ ಮಾಡಿಕೊಟ್ಟರು.

ಕೊನೆಗೂ ಬೋನಿಗೆ ಬಿದ್ದ ಚಿರತೆ: ನಿಟ್ಟುಸಿರು ಬಿಟ್ಟ ಜನತೆ

ಬಲೆಯ ಮುಖಾಂತರ ಮೇಲೆ ಬಂದ ಚಿರತೆಯನ್ನು ಅರಣ್ಯ ಸಿಬ್ಬಂದಿ ಸಿಡಿಮದ್ದುಗಳನ್ನು ಸಿಡಿಸಿ ಮತ್ತೆ ಬನ್ನೇರುಘಟ್ಟ ಅರಣ್ಯ ವಲಯಕ್ಕೆ ಓಡಿಸಿದರು.ಕಾರ್ಯಾಚರಣೆಯಲ್ಲಿ ಡಿ.ಆರ್‌.ಒ. ದೇವರಾಜು, ರೋಟರಿ ಸಂಸ್ಥೆ ಮರಸಪ್ಪರವಿ, ಅರಣ್ಯ ಇಲಾಖೆ ಸಿಬ್ಬಂದಿ ರಾಜು, ಶಿವರಾಜು, ಮಾದಪ್ಪ, ಮಂಜು, ವಾಹನ ಚಾಲಕ ಚಂದ್ರು ಇದ್ದರು.
 

click me!