ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವೆರೆಸ್ಟ್ ಹತ್ತಿದ ಹೊನ್ನಾಳಿ ಮೂಲದ ಅರಣ್ಯ ರಕ್ಷಕ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದಾನೆ.
ವರದಿ: ವರದರಾಜ್, ದಾವಣಗೆರೆ
ದಾವಣಗೆರೆ (ಏ.30): ಸಾಧನೆ ಮಾಡಬೇಕೆನ್ನುವ ಛಲವಿರುವವರಿಗೆ ಗುರಿ ಎಷ್ಟೆ ದೊಡ್ಡದಿದ್ದರು ಅದನ್ನು ಸಾಧಿಸಿ ಕೀರ್ತಿ ಪತಾಕೆ ಹಾರಿಸುತ್ತಾರೆ ಎಂಬುದಕ್ಕೆ ಇಲ್ಲೊಬ್ಬ ಪರ್ವತಾರೋಹಿ ಸಾಕ್ಷಿಯಾಗಿದ್ದಾರೆ. ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವೆರೆಸ್ಟ್ (Mount Everest) ಹತ್ತಿದ ಹೊನ್ನಾಳಿ ಮೂಲದ ಅರಣ್ಯ ರಕ್ಷಕ (Forest Guard) ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದಾನೆ. ಕಳೆದ ತಿಂಗಳು ಆಫ್ರಿಕಾ ಖಂಡದಲ್ಲಿ ಬರುವ ಮೌಂಟ್ ಕಿಲಿಮಾಂಜರ್ ಪರ್ವತ (Kilimanjaro Mountain) ಶಿಖರವನ್ನು ಏರಿ ತಾನೊಬ್ಬ ಸಾಹಸಿ ಚಾರಣಿಗ ಎಂಬುದನ್ನು ಪ್ರೂ ಮಾಡಿದ್ದಾರೆ.
ದಾವಣಗೆರೆ (Davanagere) ಜಿಲ್ಲೆ ಹೊನ್ನಾಳಿ ತಾಲ್ಲೂಕ್ ಚಿಕ್ಕಬಾಸೂರಿನ ಯುವಕನ ಸಾಧನೆ ನಮ್ಮ ಎಷ್ಟೋ ಯುವಕರಿಗೆ ಸ್ಪೂರ್ತಿಯಾಗಿದೆ. ಚಿಕ್ಕಬಾಸೂರಿನಂತಹ ಕುಗ್ರಾಮದಲ್ಲಿ ಹುಟ್ಟಿ ಜಗತ್ತಿನ ಅತ್ಯಂತ ಎತ್ತರದ ಪರ್ವತ ಶಿಖರ ಮೌಂಟ್ ಎವೆರೆಸ್ಟ್ ಹತ್ತಿದ್ದಾನೆ ಎಂದರೆ ಯಾರು ನಂಬುವುದಿಲ್ಲ. ಹೊನ್ನಾಳಿ ಸಾಮಾಜಿಕ ವಲಯ ಅರಣ್ಯದಲ್ಲಿ ಫಾರೆಸ್ಟ್ ಗಾರ್ಡ್ ಆಗಿರುವ ವಿಕ್ರಂ (Vikram) ಪರ್ವತಾರೋಹಣದಲ್ಲಿ ತ್ರೀವಿಕ್ರಮನಾಗಿದ್ದಾನೆ. ಸುಮಾರು 12 ದಿನ ಚಾರಣ ಮಾಡಿ ಅಪ್ರಿಕಾ ಖಂಡದ ಕಿಲಿಮಾಂಜರೋ ಪರ್ವತ ಶಿಖರ 5895 ಮೀಟರ್ ಏರಿ ಹುಬ್ಬೇರುವ ಸಾಧನೆ ಮಾಡಿದ್ದಾನೆ.
Davanagere: ನೂತನ ಮನೆಗೆ ನರೇಂದ್ರ ಮೋದಿ ಹೆಸರಿಟ್ಟ ಕಟ್ಟಾ ಅಭಿಮಾನಿ..!
ಅರಣ್ಯ ರಕ್ಷಕ ಪರ್ವತಾರೋಹಿ ಆಗಿದ್ದು ಹೇಗೆ: ಕಳೆದ ಏಳು ವರ್ಷಗಳ ಹಿಂದೆ ಅರಣ್ಯ ರಕ್ಷಕನಾಗಿ ಸೇವೆಗೆ ಸೇರಿಕೊಂಡ ವಿಕ್ರಂಗೆ ಪರ್ವಾತೋರೋಹಣ, ಟ್ರಕ್ಕಿಂಗ್‌ನಲ್ಲಿ ಅತೀವ ಆಸಕ್ತಿ. 2015-16 ಡಾರ್ಜಲಿಂಗ್ ಹಿಮಾಲಯ ಮೌಂಟೇನರಿಂಗ್ ಇನ್ಸಿಟ್ಟೂಟ್ ಟ್ರೈನಿಂಗ್ ಸೆಂಟರ್ ನಲ್ಲಿ ಪರ್ವತಾರೋಹಣದ ಬಗ್ಗೆ ಟ್ರೈನಿಂಗ್ ಪಡೆದು ಸಿಕ್ಕಿಂ ರೇನೆಕಾ ಪಿಕ್ ಹತ್ತಿ ನಂತರ ಕಾಂಚನ ಜುಂಗ್ ಪರ್ವತ ಏರಿದ ವಿಕ್ರಂ 50/50 ಬೆಂಗಳೂರು ಆಲ್ಟ್ರಾ ಮ್ಯಾರಾಥನ್, ಚಿಕ್ಕಮಗಳೂರಿನ ಪರ್ವತ ಶ್ರೇಣಿಗಳಲ್ಲಿ ನಡೆದು 80 /80 ಮಲೆನಾಡು ಮ್ಯಾರಾಥನ್ ಓಟವನ್ನು ಕ್ಲಿಯರ್ ಮಾಡಿದನು. ಮೌಂಟ್ ಶತೋಪಂತ್ ಶಿಖರವನ್ನು ಏರಲು 7075 ಮೀಟರ್ ಎರಡು ಸಲ ಟ್ರೈ ಮಾಡಿ ಹವಮಾನ್ ವೈಪರಿತ್ಯದಿಂದ ಕೇವಲ 80 ಮೀಟರ್ ಅಂತರದಿಂದ ವಾಪಸ್ಸಾಗಿದ್ದರು.
ಕಿಲಿಮಾಂಜರ್ ಪಯಣದ ಹಾದಿ ದುರ್ಗಮ: ಮಾರ್ಚ್ 29 ರಂದು ಹೊನ್ನಾಳಿಯಿಂದ ಹೊರಟು ಬೆಂಗಳೂರು ಆ ನಂತರ ಮುಂಬೈ ಮೂಲಕ ಆಫ್ರಿಕಾದ ನೈರೋಬಿ ತಲುಪಿದ ವಿಕ್ರಂ ತಾಂಜನೀಯ ಆಫ್ರಿಕದ ಕಿಲಿಮಾಂಜರೋ ಪರ್ವತವನ್ನು 10 ದಿನದಲ್ಲಿ ಏರಿ ಮತ್ತೊಂದು ಮೈಲುಗಲ್ಲನ್ನು ತಲುಪಿದ್ದಾರೆ. ಒಟ್ಟು ಭಾರತದಿಂದ ಆಂದ್ರಾ ಒಬ್ಬ, ತೆಲಂಗಾಣದಿಂದ ಇಬ್ಬರು , ಕರ್ನಾಟಕದಿಂದ ವಿಕ್ರಂ ಸೇರಿ ನಾಲ್ಕು ಜನ ಪರ್ವತಾರೋಹಿಗಳು ತಾಂಜಾನೀಯಾಕ್ಕೆ ಹೋಗಿದ್ದು ನಾಲ್ವರು ಕಿಲಿಮಾಂಜರೋ ಹತ್ತಿ ಯಶ ಸಾಧಿಸಿದ್ದಾರೆ.
ವಿಕ್ರಂ ಪ್ರಕಾರ ಪರ್ವತಾರೋಹಣ ಎಂದರೆ ಅದು ಜೀವವನ್ನು ಪಣಕ್ಕಿಟ್ಟು ಮಾಡುವ ಒಂದು ಸಾಹಸ. ಆಫ್ರಿಕಾದ ಖಂಡ ಕಿಲಿಮಾಂಜರೋ ಹತ್ತುವುದಕ್ಕೆ ಮುನ್ನ ಬೇಸ್ ಕ್ಯಾಂಪ್‌ನಲ್ಲಿ 4400 ಮೀಟರ್ ಎತ್ತರದ ಕಿಬೋ ಹಟ್ ಪರ್ವತವನ್ನು ಏರಿ ದೇಹವನ್ನು ಪರ್ವತಾರೋಹಣಕ್ಕೆ ಸೆಟ್ ಮಾಡಿಕೊಳ್ಳಬೇಕಿದೆ. ಕಿಲಿಮಾಂಜರೋ ಪರ್ವತ ಶ್ರೇಣಿ ಮೊದಲಿಗೆ ಗ್ರೀನ್ ಫಾರೆಸ್ಟ್‌ನಲ್ಲಿ ಪಯಣ, ನಂತರ ಒಂದಿಷ್ಟು ಮರಳುಗಾಡು, ನಂತರ ನೈಟ್ ಟ್ರಕ್ಕಿಂಗ್ ಮಾಡಿ ಗುರಿ ಮುಟ್ಟಬೇಕಾಗುತ್ತದೆ. ಹಗಲಿನ ವೇಳೆ ಪ್ರಕರ ಬಿಸಿಲಿದ್ದರೆ ರಾತ್ರಿ ಆಗುತ್ತಲೇ ಸ್ನೊ ಪಾಲ್ಸ್ ಇರುತ್ತದೆ. ಮಾರಂಗೊ ಗೇಟ್, ಹೊರಾಂಬ್ ಹಟ್, ದಾಟಿ ಕಿಲಿಮಾಂಜರೋ 5895 ಮೀಟರ್ ತಲುಪಿದ್ದು ಅಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿದ ಸಂಭ್ರಮ ಜೀವನದ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು.
ಮೌಂಟ್ ಎವರೆಸ್ಟ್ ಏರಿದ ಕನ್ನಡಿಗರು: 2018 ರಲ್ಲಿ 8848 ಮೀಟರ್ ಎತ್ತರದ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿದ ವಿಕ್ರಂ ಜೀವನದಲ್ಲಿ ಕಂಡ ಕನಸನ್ನು ನನಸು ಮಾಡಿದರು. ವಿಕ್ರಂ ಹೇಳುವ ಪ್ರಕಾರ ಮೆನ್ ವಿಭಾಗದಲ್ಲಿ ಮೌಂಟ್ ಎವೆರೆಸ್ಟ್ ಏರಿದ ಪರ್ಸ್ಡ್ ಕನ್ನಡಿಗ ಎನ್ನುತ್ತಾರೆ. ಪ್ರಪಂಚದ ಅತ್ಯಂತ ಎತ್ತರದ ಶಿಖರ ಮೌಂಟ್ ಎವೆರೆಸ್ಟ್ 8848 ನ್ನು ಕರ್ನಾಟಕದ ಮೂವರು ಕ್ಲಿಯರ್ ಮಾಡಿರುವ ಬಗ್ಗೆ ಮಾಹಿತಿ ಇದೆ. ಶಿವಮೊಗ್ಗದ ಮೂಲದ ಮಹಿಳೆ ಉತ್ತರ ಪ್ರದೇಶದಲ್ಲಿ ನೆಲಸಿರುವ ಲೇಡಿ ಐಪಿಎಸ್ ಆಫೀಸರ್, ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಹುಬ್ಬಳ್ಳಿ ಗೀತಾ ನಾಗನಗೌಡರು ಇಬ್ಬರು ಮಹಿಳೆಯರು ಕರ್ನಾಟಕದಿಂದ ಮೌಂಟ್ ಎವರೆಸ್ಟ್ ಏರಿದ ಮಹಿಳೆರಾಗಿದ್ದಾರೆ. ಮೆನ್ಸ್ ವಿಭಾಗದಲ್ಲಿ ಹೊನ್ನಾಳಿ ವಿಕ್ರಂ ಮೌಂಟ್ ಎವೆರೆಸ್ಟ್ ಏರಿದ ದಾಖಲೆಗೆ ಪಾತ್ರರಾಗಿದ್ದಾರೆ.
ಚಂದಾ ಎತ್ತಿ ಪರ್ವಾತೋರಹಣ: ವಿಕ್ರಂ ಮೌಂಟ್ ಎವೆರೆಸ್ಟ್ ಹಾಗು ಆಫ್ರಿಕಾದ ಕಿಲಿಮಾಂಜಾರೋ ಏರುವುದಕ್ಕೆ ಅವರಿಗೆ ಆರ್ಥಿಕವಾಗಿ ನೆರವಾಗಿದ್ದು ಅರಣ್ಯ ಇಲಾಖೆಯ ಮೇಲಾಧಿಕಾರಿಗಳು, ಜಾವದ್ ಅಕ್ತರ್, ಸಂಜಯ್ ಸರ್, ಡಿಎಫ್‌ಓ ರಾಘವೇಂದ್ರ ಸಹಕಾರ ಇದೆ. ಸ್ಥಳೀಯ ಶಾಸಕರು, ಸ್ನೇಹಿತರು. ಚಂದಾ ಎತ್ತಿ 3-4 ಲಕ್ಷ ಹಣ ಹೊಂದಿಸಿಕೊಂಡು ದೂರದ ಆಫ್ರಿಕಾದ ಕಾಂಟಿನೆಂಟಲ್ ಗೆ ವಿಕ್ರಂ ಹೋಗಿ ಬಂದಿದ್ದಾರೆ. 28 ವರ್ಷದ ಯುವಕ ವಿಕ್ರಂಗೆ ಸ್ಪೂರ್ತಿ ದೇವತೆ ಅವರ ತಾಯಿ. ಅವರ ಆರ್ಶೀವಾದ ದಿಂದ ಬೆಟ್ಟ ಹತ್ತಿದೆ ಎನ್ನುತ್ತಾರೆ.
ಬಾಡೂಟಕ್ಕೆ ಹೋದವನ ಬರ್ಬರ ಹತ್ಯೆ, ಜಿಮ್ ಬಾಡಿಗೆ ಚಾಕುವಿನಿಂದ ಚುಚ್ಚಿ ಕೊಲೆ
ಪರ್ವತಾರೋಹಿಯನ್ನು ಸನ್ಮಾನಿಸಿದ ಹೊನ್ನಾಳಿ ಶಾಸಕ ರೇಣುಕಾಚಾರ್ಯ: ಹೊನ್ನಾಳಿ ಸಾಮಾಜಿಕ ವಲಯ ಅರಣ್ಯ ರಕ್ಷಕ ತಾಂಜೇನಿಯಾ ದೇಶದಲ್ಲಿರುವ ಮೌಂಟ್ ಕಿಲಿಮಾಂಜರ್ ಪರ್ವತ ಏರಿದ ವಿಕ್ರಂ ಸಾಧನೆಗೆ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದ್ದಾರೆ. ಶಾಸಕ ರೇಣುಕಾಚಾರ್ಯ ಹೊನ್ನಾಳಿ ತಮ್ಮ ನಿವಾಸದಲ್ಲಿ ವಿಕ್ರಂರನ್ನು ಅಭಿನಂದಿಸಿದ ಹೊನ್ನಾಳಿಗೆ ಕೀರ್ತಿ ತಂದಿದ್ದಕ್ಕೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ. ಇನ್ನು ಮುಂದೆ ಇಂತಹ ಸಾಹಸ ಕೈಗೊಳ್ಳುವಾಗ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.
ಹೊನ್ನಾಳಿ ತಾಲ್ಲೂಕಿನ ಚಿಕ್ಕಬಾಸೂರು ತಾಂಡಾದಲ್ಲಿ ಹುಟ್ಟಿ ದೂರ ಶಿಕ್ಷಣದ ಮೂಲಕ ಪದವಿ ನಂತರ ಎಂಎ ಎಕಾನಮಿಕ್ಸ್ ಓದಿರುವ ವಿಕ್ರಂಗೆ ಅಡ್ವೆಂಚರ್ಸ್ ಲೈಪ್ ಇಷ್ಟವಂತೆ. ಅಡ್ವೆಂಚರ್‌ನ್ನೇ ದೇವರು ಎಂದು ನಂಬಿರುವ ವಿಕ್ರಂ ಪರಿಸರ ಜಾಗೃತಿ ಮೂಡಿಸಲು ಅರಣ್ಯ ರಕ್ಷಕ ಸೇವೆ ವೃತ್ತಿಯನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ.