ಬಾಲಕಿಗೆ ಬಲವಂತದ ಬಾಲ್ಯ ವಿವಾಹ : ಮಗುವಿಗೆ ಜನ್ಮ ನೀಡಿದ ಬಳಿಕ ಬೆಳಕಿಗೆ

By Kannadaprabha News  |  First Published Aug 24, 2021, 11:00 AM IST
  • ಬಾಲಕಿಯೊಬ್ಬಳಿಗೆ ಒಂದು ವರ್ಷದ ಹಿಂದೆ ಬಲವಂತದಿಂದ ವಿವಾಹ 
  • ಆಕೆಯ ಪತಿ ಹಾಗು ದಲಿತ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ  ಪ್ರಕರಣ

ಮದ್ದೂರು (ಆ.24): ಬಾಲಕಿಯೊಬ್ಬಳಿಗೆ ಒಂದು ವರ್ಷದ ಹಿಂದೆ ಬಲವಂತದಿಂದ ವಿವಾಹ ಮಾಡಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಪತಿ ಹಾಗು ದಲಿತ ಮುಖಂಡ ಸೇರಿದಂತೆ ನಾಲ್ವರ ವಿರುದ್ಧ ಬೆಸಗರಹಳ್ಳಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 

Latest Videos

undefined

ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದ ನಿವಾಸಿ ಬಾಲಕಿಯ ಪತಿ ಪ್ರವೀಣ್ ಕುಮಾರ್  ದಲಿತ ಮುಖಂಡ  ಮರಳಿಗ ಶಿವರಾಜು, ಇದೇ ಗ್ರಾಮದ ಅಟೊ ಚಾಲಕ ಚನ್ನೆಶ್ ಹಾಗು ನಂದನ್ ವಿರುದ್ಧ ಪೊಲೀಸರು   ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಐಪಿಸಿ 376ರ ಅನ್ವಯ ಪೋಕ್ಸೊ ಪ್ರಕರಣ ದಾಖಲು ಮಾಡಿದ್ದರು. ನಂತರ ಅರೊಪಿಗಳಾದ ಮರಳಿಗ ಶಿವರಾಜು, ಚನ್ನೇಶ್ ಹಾಗು ನಂದನ್ ಅವರು ಕೊಡಿಯಾಲದಲ್ಲಿರುವ ಪತಿ ಪ್ರವೀಣ್ ಕುಮಾರ್ ಮನೆಗೆ ಬಿಟ್ಟು ಹೋಗಿದ್ದರು. 

ಕೊರೋನಾ ಕಾಲ​ದಲ್ಲಿ ಹೆಚ್ಚು​ತ್ತಿ​ವೆ ಬಾಲ್ಯವಿವಾಹ !

ನಂತರ ಮರಳಿಗ ಗ್ರಾಮದ ಬಾಲಕಿಯ ಪೋಷಕರು  ತಮ್ಮ ಪುತ್ರಿ ಬಾಲ್ಯ ವಿವಾಹ ಆಗಿ ಗ್ರಾಮದಿಂದ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ್ದರು. 

ಬಾಲ್ಯ ವಿವಾಹದ ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಿ ಎಸ್ ರಾಜೇಶ್ವರಿ ಅ.11 ರಂದು ಪೊಲೀಸರಿಗೆ ದೂರು ನೀಡಿ ಆಪ್ತ ಸಮಾಲೊಚನೆಗೆ ಒಳಪಡಿಸಲು ಬಾಲಕಿ ಮತ್ತು ಆಕೆಯ ಪೋಷಕರನ್ನು ಇಲಾಖೆ ಅಧಿಕಾರಿಗಳ ಮುಂದೆ ಹಾಜರು ಪಡಿಸುವಂತೆ ಕೋರಿದರು. 

ಬಳಿಕ ಪೊಲೀಸರು ಆ.18 ರಂದು ಬಾಲಕಿಯನ್ನು ನಾಗಮಂಗಲ ಟೌನ್ ಪ್ರವಾಸ ಮಂದಿರದ ಬಳಿ ಮಗುವಿನೊಂದಿಗೆ ಇರುವುದನ್ನು ಪತ್ತೆ ಹಚ್ಚಿ ವಶಕ್ಕೆ ತೆಗೆದುಕೊಂಡರು. ಬಳಿಕ ವಿಚಾರಣೆ ನಡೆಸಿದಾಗ ಆಟೋ ಚಾಲಕ ಚನ್ನೇಶ್ ಹಾಗೂ ನಂದನ್ ಬಲವಂತವಾಗಿ ಪ್ರವೀಣ್ ಜೊತೆ ವಿವಾಹ ಮಾಡಿದ್ದಾಗಿ ಹೇಳಿದರು. 

ಇಲ್ಲಿನ ನರ್ಸಿಂಗ್ ಹೋಮ್ ಒಂದರಲ್ಲಿ ಗಂಡು ಮಗುವಿಗೆ ಆಕೆ ಜನ್ಮ ನೀಡಿರುವ ವಿಚಾರವು ಬೆಳಕಿಗೆ ಬಂದಿದೆ. 

click me!