‘1 ಮರ ಕಡಿದರೆ 10 ಗಿಡ ನೆಡಿ’ ಯೋಜನೆ ರಾಜ್ಯಕ್ಕೆ ವಿಸ್ತರಣೆ

Kannadaprabha News   | Asianet News
Published : Jul 12, 2021, 07:08 AM IST
‘1 ಮರ ಕಡಿದರೆ 10 ಗಿಡ ನೆಡಿ’ ಯೋಜನೆ  ರಾಜ್ಯಕ್ಕೆ ವಿಸ್ತರಣೆ

ಸಾರಾಂಶ

ಉಡುಪಿಯಲ್ಲಿ ಆರಂಭವಾಗಿರುವ, ಅರಣ್ಯ ಇಲಾಖೆ ಹೊಸ ಕಾರ್ಯಕ್ರಮ 1 ಮರ ಕಡಿದಲ್ಲಿ 10 ಸಸಿಗಳನ್ನು ನೆಡುವ ಕಾರ್ಯಕ್ರಮ

 ಉಡುಪಿ (ಜು.12):  ಉಡುಪಿಯಲ್ಲಿ ಆರಂಭವಾಗಿರುವ, ಅರಣ್ಯ ಇಲಾಖೆಗೊಳಪಟ್ಟ1 ಮರ ಕಡಿದಲ್ಲಿ 10 ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ ಎಂದು ರಾಜ್ಯ ಅರಣ್ಯ ಮತ್ತು ಕನ್ನಡ - ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.

ಭಾನುವಾರ ಇಲ್ಲಿನ ಬ್ರಹ್ಮಾವರ-ಸೀತಾನದಿ ರಸ್ತೆಯ ಅಗಲೀಕರಣಕ್ಕೆ ಕಡಿಯಲಾದ 1014 ಮರಗಳ ಬದಲಿಗೆ 10,000 ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 1 ಮರದ ಬದಲಿಗೆ 10 ಸಸಿಗಳನ್ನು ನೆಡುವುದು ಇಲಾಖೆಯ ಬಹಳ ಹಳೆಯ ನಿಯಮ, ಆದರೆ ಪಾಲನೆಯಾಗುತ್ತಿಲ್ಲ.

ಮನಿ ಪ್ಲಾಂಟ್‌ಗೆ ನೀರಿನ ಜೊತೆ ಸ್ವಲ್ಪ ಹಾಲು ಹಾಕಿ: ಯಾಕೆ ಗೊತ್ತಾ?

 ರಾಜ್ಯದಲ್ಲಿ ಎಲ್ಲೆಲ್ಲಿ ಅರಣ್ಯ ಇಲಾಖೆಯ ಮರಗಳನ್ನು ಕಡಿಯಲಾಗಿದೆಯೋ ಅಲ್ಲೆಲ್ಲ, ಕಡಿದವರಿಂದಲೇ ಹಣವನ್ನು ಕಟ್ಟಿಸಿಕೊಂಡು, ಈ ನಿಯಮವನ್ನು ಜಾರಿಗೊಳಿಸುವುದಕ್ಕೆ ವಿಶೇಷ ಕಾರ್ಯಕ್ರಮ ಇಲಾಖೆಯಿಂದ ಹಾಕಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾದ ರಘುಪತಿ ಭಟ್‌, ವಿ. ಸುನೀಲ್‌ ಕುಮಾರ್‌ ಇದ್ದರು.

PREV
click me!

Recommended Stories

ಬಿಜೆಪಿ ಒಪ್ಪಿದರೆ ಡಿಜೆ, ಐಟಂ ಸಾಂಗ್‌ಗೆ ಬ್ರೇಕ್? ಸದನದಲ್ಲಿ ಕೇಳಿಬಂತು ಒತ್ತಾಯ
ಆರಂಭಗೊಂಡ ಮೂರೇ ದಿನಕ್ಕೆ ಇಂದಿರಾ ಕ್ಯಾಂಟೀನ್ ಬಂದ್!