ಬಿಜೆಪಿಯಲ್ಲಿ ಇದ್ದ ವಾತಾವರಣದಲ್ಲಿ ಬದಲಾವಣೆ : ಕಾರಣ ಕೇಂದ್ರ ಸಚಿವ

By Kannadaprabha NewsFirst Published Jul 11, 2021, 3:49 PM IST
Highlights
  • ಭಾರತೀಯ ಜನತಾ ಪಕ್ಷದ ಜಿಲ್ಲಾ ಮಟ್ಟದ ವಲಯದಲ್ಲಿ ವಾತಾವರಣ ಬದಲು
  • ಬದಲಾವಣೆ ಕೇಂದ್ರಬಿಂದುವಾದ ಸಂಸದ ನಾರಾಯಣ ಸ್ವಾಮಿ
  • ಎಲ್ಲಾ ವಿಚಾರಕ್ಕೂ ಸೆಂಟ್ರಲ್ ಮಿನಿಸ್ಟರ್ ವಿಚಾರ ಪ್ರಸ್ತಾಪ 

ಚಿತ್ರದುರ್ಗ (ಜು.11): ಭಾರತೀಯ ಜನತಾ ಪಕ್ಷದ ಜಿಲ್ಲಾ ಮಟ್ಟದ ವಲಯದಲ್ಲಿ ನಿನ್ನೆ ಮೊನ್ನೆಯವರೆಗೂ ಇದ್ದ ವಾತಾವರಣ ಇದೀಗ ತುಸು ಬದಲಾಗಿದೆ. ಸಂಸದ ನಾರಾಯಣಸ್ವಾಮಿ ಅಂತಹದ್ದೊಂದು ಬದಲಾವಣೆ ಕೇಂದ್ರಬಿಂದುವಾಗಿದ್ದಾರೆ. 

ಸಂಸದರೆಂದರೆ  ಹೌದಾ ಲೋಕಲ್‌ನಲ್ಲಿ  ಏನು ಕೆಲಸ. ಅವರೇನಿದ್ದರೂ ಡೆಲ್ಲಿಗೆ ಮಾತ್ರ ಎಂದು ಸಿದ್ದ ಮಾದರಿಯ  ಪ್ರತಿಕ್ರಿಯೆಯೊಂದನ್ನು ಹರಿಯಬಿಡುತ್ತಿದ್ದವರು ಇದೀಗ ತುಸು  ಗಂಭೀರವಾಗಿದ್ದಾರೆ. ಮಾತು ಮಾತಿಗೂ  ನಮ್ ಎಂಎಲ್‌ ಇದ್ದಾರೆಂದು ಹೇಳುತ್ತಿದ್ದವರು ಏನೇ ಅದರೂ ಸೆಂಟ್ರಲ್ ಮಿನಿಸ್ಟರ್ ಗಮನಕ್ಕೆ ತರಬೇಕು ಎನ್ನುತ್ತಿದ್ದಾರೆ. 

ಭರವಸೆ ಪಟ್ಟಿ ತಂದರೆ ಮಾತ್ರ ಊರಿಗೆ ಪ್ರವೇಶ, ಸಚಿವ ನಾರಾಯಣ ಸ್ವಾಮಿಗೆ ಗೊಲ್ಲರಹಟ್ಟಿ ಜನರ ಡಿಮ್ಯಾಂಡ್!

ಸಂಸದ ಆನೇಕಲ್ ನಾರಾಯಣಸ್ವಾಮಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ  ನಂತರ ಜಿಲ್ಲೆಯಲ್ಲಿ ಅಗಿರುವ  ಬೆಳವಣಿಗೆಯಿದು. ಶಾಸಕರ ಅನುಯಾಯಿಗಳಾಗಿ ಗುರುತಿಸಿ ಕೊಂಡಿದ್ದ ಹಲವರು ದಿಢೀರೆಂದು ದೆಹಲಿಗೆ ವಿಮಾನ ಹತ್ತಿ ಪ್ರಮಾಣ  ವಚನ ಸ್ವೀಕಾರ ಕಾರ್ಯಕ್ರಮ ನೋಡಿ ಬಂದಿದ್ದಾರೆ. 

ಖುದ್ದು ಸಂಸದ ದೆಹಲಿ ನಿವಾಸದಲ್ಲಿ ಕಾದಿದ್ದು ನಾರಾಯಣಸ್ವಾಮಿ ಅವರಿಗೆ ಅಭಿನಂದಿಸಿ ಬಂದಿದ್ದಾರೆ. 

ಸದ್ಯದಲ್ಲಿ ಎದುರಾಗಲಿರುವ ಜಿಪಂ ಹಾಗೂ ತಾಪಂ ಚುನಾವಣೆಗಳು ನಾರಾಯಣಸ್ವಾಮಿ ಅವರ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿದೆ.. ಟಿಕೆಟ್ ಆಕಾಂಕ್ಷಿಗಳು ಗುಣಗಾನ ಅರಂಭಿಸಿದ್ದಾರೆ. ಟಿಕೆಟ್ ಬೇಕು ಎಂದರೆ ನಾರಾಯಣ ಸ್ವಾಮಿ ಹಿಡಿಯಬೇಕು ಎನ್ನುವಷ್ಟರ ಮಟ್ಟಿಗೆ ವಾತಾವರಣ ಬದಲಾಗಿದೆ. 

click me!