ಲಲಿತ, ಶಾಸ್ತ್ರೀಯ ಕಲೆಗಳಿಗೆ ಜಾನಪದವೇ ಬೇರು: ಡಾ.ಕೃಪಾ ಫಡಕೆ

By Kannadaprabha NewsFirst Published Mar 6, 2023, 12:02 PM IST
Highlights

ಲಲಿತಕಲೆ ಮತ್ತು ಶಾಸ್ತ್ರೀಯ ಕಲೆಗಳಿಗೆ ಜಾನಪದವೇ ಬೇರು. ಜಾನಪದ ಕಲಿಕೆಗೆ ವಿಶೇಷ ಆಸಕ್ತಿ ಮತ್ತು ಕಟ್ಟುನಿಟ್ಟಿನ ಪಾಲನೆ ಅವಶ್ಯ ಎಂದು ನೃತ್ಯಗಿರಿ ಪ್ರದರ್ಶಕ ಕಲೆಗಳ ಕೇಂದ್ರ ನಿರ್ದೇಶಕಿ ವಿದುಷಿ ಡಾ.ಕೃಪಾ ಫಡಕೆ ಹೇಳಿದರು.

 ಮಂಡ್ಯ :  ಲಲಿತಕಲೆ ಮತ್ತು ಶಾಸ್ತ್ರೀಯ ಕಲೆಗಳಿಗೆ ಜಾನಪದವೇ ಬೇರು. ಜಾನಪದ ಕಲಿಕೆಗೆ ವಿಶೇಷ ಆಸಕ್ತಿ ಮತ್ತು ಕಟ್ಟುನಿಟ್ಟಿನ ಪಾಲನೆ ಅವಶ್ಯ ಎಂದು ನೃತ್ಯಗಿರಿ ಪ್ರದರ್ಶಕ ಕಲೆಗಳ ಕೇಂದ್ರ ನಿರ್ದೇಶಕಿ ವಿದುಷಿ ಡಾ.ಕೃಪಾ ಫಡಕೆ ಹೇಳಿದರು.

ನಗರದಲ್ಲಿರುವ ಪಿಇಎಸ್‌ ರಂಗ ಮಂದಿರದಲ್ಲಿ ನೃತ್ಯ ಕೃಪಾ ಕಲಾ ಶಾಲೆ ಆಯೋಜಿಸಿದ್ದ ನೃತ್ಯಧಾರ, ಜಾನಪದ ಲೋಕ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ಹಾಗೂ ರಕ್ತದಾನ-ನೇತ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿಮತ್ತು ಶಾಸ್ತ್ರೀಯ ಕಲೆಗಳಿಗೆ ಶಾರೀರಿಕ ಹಾವಭಾವ ಮುಖ್ಯ. ಆದರೆ, ಜಾನಪದಕ್ಕೆ ಅದರದ್ದೇ ಆದ ಸೊಗಡಿದೆ. ಸಹಜವಾಗಿದ್ದರೂ ಸೂಕ್ತ ತರಬೇತಿ ಅಗತ್ಯ ಎಂದು ನುಡಿದರು.

Latest Videos

ಸ್ಪರ್ಧಾತ್ಮಕ ಕಲಾಜಗತ್ತಿನಲ್ಲಿ ಕಲೆ ಅನಾವರಣಗೊಳ್ಳಬೇಕು. ಭತರನಾಟ್ಯ, ಶಾಸ್ತ್ರೀಯ ನ್ಯತ್ಯ ಕಲೆಗಳು ಜನರಿಂದ ಜನರಿಗೆ ವಿಸ್ತರಿಸಬೇಕು. ಸ್ಥಳೀಯ ನೃತ್ಯ ಕಲಾವಿದರು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವುದರೊಂದಿಗೆ ನಮ್ಮ ಕಲೆಗಳ ಮಹತ್ವವನ್ನು ವಿಶ್ವದಾದ್ಯಂತ ಪಸರಿಸಬೇಕು ಎಂದು ಆಶಿಸಿದರು.

ಸಾಹಿತಿ ಡಾ.ಪ್ರದೀಪಕುಮಾರ ಹೆಬ್ರಿ ಮಾತನಾಡಿ, ನೃತ್ಯ, ಕಲೆಗಳನ್ನು ಕಲಿಯುವವರು ಸಾಕಷ್ಟುಸಂಖ್ಯೆಯಲ್ಲಿದ್ದಾರೆ. ಆದರೆ, ಕಲಿಕೆಗೆ ಬೇಕಾಗಿರುವ ಅವಕಾಶಗಳು ಮತ್ತು ಸಂಪನ್ಮೂಲಗಳು ಅವರಿಗೆ ಲಭಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾಜದಲ್ಲಿ ಸಂಸ್ಕಾರ ಕಲಿಸುವ ಅಗತ್ಯವಿದೆ, ಗುರು-ಹಿರಿಯನ್ನು ಗೌರವಿಸುವುದು, ಹಿರಿಯ ಜೀವಗಳನ್ನು ಪೋಷಿಸುವ ವ್ಯವಧಾನ ಪ್ರಸ್ತುತ ಇಲ್ಲವಾಗಿದೆ, ನಮಗೆ ಬೇರಾಗಿರುವ ನಮ್ಮ ಹೆತ್ತವರನ್ನು ಕೈಬಿಡುತ್ತಿದ್ದೇವೆ, ದೊಡ್ಡ ದೊಡ್ಡ ಹುದ್ದೆಗಳನ್ನು ಕೊಡಿಸಿದ ತಂದೆ ತಾಯಿಯರನ್ನು ಹೊರದೂಡುತ್ತಿದ್ದೇವೆ ಎಂದು ವಿಷಾದಿಸಿದರು.

ಸಂಗೀತ, ನೃತ್ಯ, ಜಾನಪದ ಕಲೆಗಳನ್ನು ನಮ್ಮ ಜೀವನದ ಅವಿಭಾಜ್ಯ ಅಂಗಗಳೆಂದು ಪರಿಗಣಿಸುತ್ತಿಯೋ ಅದೇ ರೀತಿ ಎಲ್ಲಾ ಹಿರಿಯರಿಗೆ ಗೌರವ ತೋರಿಸಿದರೆ ಅವರ ಪ್ರಯತ್ನ ಸಾರ್ಥಕತೆ ಪಡೆಯುತ್ತದೆ ಎಂದು ನುಡಿದರು.

ನೃತ್ಯಕೃಪಾ ಕಲಾ ಶಾಲೆ ನೃತ್ಯ ತರಬೇತಿ ಪಡೆದ ವಿದ್ಯಾರ್ಥಿ ಸಮೂಹ ಜಾನಪದ ನೃತ್ಯ ಪದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ನೃತ್ಯಕೃಪಾ ಕಲಾ ಶಾಲೆಯ ನಿರ್ದೇಶಕಿ ವಿದುಷಿ ಚಂದನಾಮೋಹನ್‌, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಎಸ್‌.ಶಿವಪ್ರಕಾಶ್‌, ಕೀಲಾರ ಕೃಷ್ಣೇಗೌಡ, ಮೈಸೂರಿನ ನೃತ್ಯ ವಿದುಷಿ ನಾಗಶ್ರೀ ಫಣೀಂದ್ರ ಸೇರಿದಂತೆ ಇತರರಿದ್ದರು. 

ನಾವು ಯಾರಿಗೂ ಕಡಿಮೆ ಇಲ್ಲ

ವಿಶಾಖಪಟ್ಟಣಂ(ಏ.9): ಭರತನಾಟ್ಯ ಎಂಬುದು ಅಷ್ಟು ಸುಲಭದ ಕೆಲ ಅಲ್ಲ. ಅದಕ್ಕೆ ಸಾಕಷ್ಟು ಶ್ರಮ ಪ್ರತಿಭೆ ಬೇಕು. ಕೈಕಾಲು ಸರಿ ಇದ್ದವರೇ ಭರತನಾಟ್ಯದ ಕೆಲ ಭಂಗಿಗಳನ್ನು ಮಾಡಲು ಹೆಣಗುತ್ತಾರೆ. ಆದರೆ ಇಲ್ಲೊಂದು ವಿಶೇಷ ಚೇತನರ ಗುಂಪು ತಮ್ಮೆಲ್ಲಾ ದೌರ್ಬಲ್ಯವನ್ನು ಮೀರಿ ಭರತನಾಟ್ಯದ ಪ್ರದರ್ಶನ ನೀಡುವ ಮೂಲಕ ನೋಡುಗರನ್ನು ಬೆರಗಾಗಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷಚೇತನ ಭರತನಾಟ್ಯ ಕಲಾವಿದರು ಸೊಗಸಾದ ವಿಭಿನ್ನ ಭಂಗಿಗಳನ್ನು ಮಾಡುವ ಮೂಲಕ ತಾವು ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸಿದರು. ಗಾಲಿಕುರ್ಚಿಯ ಮೇಲೆ ಆರು ಹುಡುಗರು ಮತ್ತು ಶ್ರವಣದೋಷವುಳ್ಳ ಮೂವರು ಹುಡುಗಿಯರು 30 ನಿಮಿಷಗಳ ಪ್ರದರ್ಶನದೊಂದಿಗೆ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. 

ವಿಶಾಖಪಟ್ಟಣಂನಲ್ಲಿ ಮುಂಚೂಣಿಯಲ್ಲಿರುವ ಕೋವಿಡ್ ಕಾರ್ಯಕರ್ತರಿಗೆ ಗೌರವ ಸೂಚಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿ ಮೂಲದ  'ಡಬ್ಲ್ಯೂಎಒ' (WAO) ಮತ್ತು ನಟರಾಜ್ ಸಂಗೀತ ಮತ್ತು ನೃತ್ಯ ಅಕಾಡೆಮಿ ಆಯೋಜಿಸಿದ 13 ನೇ ಅಖಿಲ ಭಾರತ ನೃತ್ಯೋತ್ಸವದ ಇತ್ತೀಚೆಗೆ ಮುಕ್ತಾಯಗೊಂಡ ವೈಶಾಖಿ ನೃತ್ಯೋತ್ಸವದ ಭಾಗವಾಗಿ ಈ ಪ್ರದರ್ಶನ ನೀಡಲಾಯಿತು. ಭರತನಾಟ್ಯ ನೃತ್ಯಗಾರರು ಸೊಗಸಾದ ಭಂಗಿಗಳನ್ನು ಕ್ಲಾಸಿಕ್ ಹೆಜ್ಜೆಗಳನ್ನು ಕುಶಲತೆಯಿಂದ ನಿಧಾನವಾಗಿ ಮತ್ತು ಸ್ಥಿರವಾಗಿ ಮುದ್ರೆಗೆ ಬದಲಾಯಿಸಿದರು.

click me!