ಗದಗನಲ್ಲಿ ಗಮನ ಸೆಳೆದ ಫಲಪುಷ್ಪ ಪ್ರದರ್ಶನ: ಹೂವಿನ ಚಿತ್ತಾರದಲ್ಲಿ ಅರಳಿದ ಸಾಂಸ್ಕೃತಿಕ ರಾಯಭಾರಿ ಬಸವಣ್ಣ..!

By Girish Goudar  |  First Published Feb 11, 2024, 9:30 PM IST

ಗದಗ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನಗರ ವಿವೇಕಾನಂದ ಭವನದಲ್ಲಿ ಆಯೋಜನೆಗೊಂಡಿರೋ ಫಲ ಫುಷ್ಪ ಪ್ರದರ್ಶನ ಜನರ ಆಕರ್ಷಣೀಯ ಕೇಂದ್ರವಾಗಿದೆ.. ಮೂರು ದಿನಗಳ ಕಾಲ ನಡೆಯೋ ಫಲ ಪುಷ್ಪ ಪ್ರದರ್ಶನ ವಿವಿಧ ಬಗೆಯ ಹೂ, ಹಣ್ಣುಗಳಲ್ದೆ ವಿವಿಧ ಬಗೆಯ ಚಿತ್ತಾಕರ್ಷಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ.


ಗಿರೀಶ್ ಕಮ್ಮಾರ, ಏಷ್ಯಾನೆಟ್ ಸುವರ್ಣ ನ್ಯೂಸ್, ಗದಗ

ಗದಗ(ಫೆ.11): ಕಣ್ಣಿಗೆ ಮುದ ನೀಡುವ ಫ್ಲಾವರ್ಸ್.. ಒಂದಕ್ಕೊಂದು ಪೈಪೋಟಿ ನೀಡುವ ವಿವಿಧ ಬಗೆಯ ಕಲರಫುಲ್ ಹೂವುಗಳು.. ಸಿರಿಧಾನ್ಯದಲ್ಲಿ ರೂಪುಗೊಂಡ ಸಂವಿಧಾನ ಶಿಲ್ಫಿ.. ಗದಗ ನಗರದಲ್ಲಿ ಆಯೋಜನೆಗೊಂಡಿರೋ ಫಲ ಪುಷ್ಪ ಪ್ರದರ್ಶನದ ಹೈಲೈಟ್ ಗಳಿವು.. ಗದಗ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ವತಿಯಿಂದ ನಗರ ವಿವೇಕಾನಂದ ಭವನದಲ್ಲಿ ಆಯೋಜನೆಗೊಂಡಿರೋ ಫಲ ಫುಷ್ಪ ಪ್ರದರ್ಶನ ಜನರ ಆಕರ್ಷಣೀಯ ಕೇಂದ್ರವಾಗಿದೆ.. ಮೂರು ದಿನಗಳ ಕಾಲ ನಡೆಯೋ ಫಲ ಪುಷ್ಪ ಪ್ರದರ್ಶನ ವಿವಿಧ ಬಗೆಯ ಹೂ, ಹಣ್ಣುಗಳಲ್ದೆ ವಿವಿಧ ಬಗೆಯ ಚಿತ್ತಾಕರ್ಷಕ ಕಲಾಕೃತಿಗಳು ಗಮನ ಸೆಳೆಯುತ್ತಿವೆ..

Tap to resize

Latest Videos

undefined

ಹೂವಿನಲ್ಲಿ ಅಲಂಕೃತಗೊಂಡ ಸೆಲ್ಫಿ ಸ್ಯಾಂಡ್ ಬಹುತೇಕ ಜನರನ್ನ ಆಕರ್ಷಿಸ್ತು.. ಹೂವಿನಲ್ಲಿ ಅಲಂಕಾರಗೊಂಡ ಚಿಟ್ಟೆ, ಸಂಗೀತ ಪರಿಕರಗಳು ನೋಡುಗರನ್ನ ಜನ ನೋಡು ಖುಷಿ ಪಟ್ರು.. ವೀರನಾರಾಯಣ ದೇವಸ್ಥಾನವನ್ನ ಹೂವಿನಲ್ಲೇ ಅಲಂಕೃತಗೊಳಿಸಿ ಸಿದ್ಧಪಡಿಸಿದ್ದು ಜನರು ದೇವಸ್ಥಾನದ ಮಾದರಿ ಎದ್ರು ನಿಂತು ಫೋಟೋ ಸೆರೆ ಹಿಡ್ಕೊಂಡ್ರು.. ಕಲ್ಲಂಗಡಿಯಲ್ಲಿ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಮಹನೀಯರ ಆಕೃತಿ ಕೆತ್ತಲಾಗಿದೆ.. ಪುಟ್ಟರಾಜ ಕವಿಗವಾಯಿಗಳ ಆಕೃತಿ, ಕ್ರಿಕೆಟ್ ಪಟು ಸುನಿಲ್ ಜೋಷಿ, ಸಂಗೀತ ದಿಗ್ಗಜ ಭೀಮಸೇನ ಜೋಷಿಯ ಕಲಾಕೃತಿಗಳು ಪ್ರದರ್ಶನಕ್ಕೆ ಮೆರಗು ನೀಡಿದ್ವು. ಸಿರಿಧಾನ್ಯದಲ್ಲಿ ಅರಳಿನಿಂತ ಕನ್ನಡಾಂಬೆ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪೂರ್ತಿಗಳು ಚಿತ್ತಾಕರ್ಷಕವಾಗಿದ್ವು. 

ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ, ಅವಳಿ ಮಕ್ಕಳು ಸಾವು ಆರೋಪ; ಆಸ್ಪತ್ರೆ ಎದುರು ಕುಟುಂಬಸ್ಥರು ಪ್ರತಿಭಟನೆ

10/ 20 ವರ್ಷಗಳಷ್ಟು ಹಳೆಯದಾದ ಚಿಕ್ಕ ಚಿಕ್ಕ ಮರಗಳು ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದ್ವು.. ಬೋನ್ಸಾಯ್ ಮಾದರಿ ಅಂದ್ರೆ ದೊಡ್ಡ ಮರಳ ಕುಬ್ಜ ರೂಪದ ಮರಗಳು ನೋಡುಗರ ಗಮನ ಸೆಳೆದ್ವು.. ಸುಮಾರು 80 ಕ್ಕೂ ಹೆಚ್ಚು ಬಗೆಯ ಬೋನ್ಸಾಯ್ ಮರಗಳನ್ನ ಪ್ರದರ್ಶನದಲ್ಲಿ ಇಡಲಾಗಿದೆ.. ಆಲ, ಈಚಲ, ನೆಲ್ಲಿ, ಅರಳಿ ಮರಗಳ ಕುಬ್ಜರೂಪಗಳು ನೋಡಿದ ಜನರು ಖುಷಿ ಪಟ್ರು.. ಇಷ್ಟೆಲ್ಲ ಅಲ್ದೆ, ಫಲ ಪುಷ್ಪ ಪ್ರದರ್ಶನದಲ್ಲಿ ಮತ್ಸ್ಯ ಲೋಕವೂ ಸೃಷ್ಟಿಯಾಗಿತ್ತು.. ಬಗೆ ಬಗೆಯ ಹೂವುಗಳನ್ನ ಕಣ್ತುಂಬಿಕೊಂಡ ಜನ, ಮೀನುಗಳ ಲೋಕ ಎಂಟ್ರಿಯಾಗಿ ಕಲರ್ ಕಲರ್ ಮೀನುಗಳನ್ನೂ ನೋಡಿ ಸಂಭ್ರಮಿಸಿದ್ರು.. 

ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆದಿರುವ ತಾಳೆ, ಸೇವಂತಿಗೆ, ಚೆಂಡು ಹೂವು, ಲಿಂಬೆ, ಹೂಕೋಸು, ಟೊಮ್ಯಾಟೊ, ಹುಣಸೆ, ಪಪ್ಪಾಯಿ, ಕಪ್ಪು ದ್ರಾಕ್ಷಿ, ದ್ರಾಕ್ಷಿ, ಪೇರಳ, ಚಿಕ್ಕು, ಮಾವು, ನುಗ್ಗೆಕಾಯಿ, ಹೀರೇಕಾಯಿ, ಬಾಳೆ, ಯಾಲಕ್ಕಿ ಬಾಳೆ, ಈರುಳ್ಳಿ, ಚಕ್ಕೋತಾ, ಗೋಡಂಬಿ, ವಿಳ್ಯೆದೆಲೆ ಸೇರಿ ವಿವಿಧ ತರಕಾರಿ, ಹಣ್ಣುಗಳು, ಹೂವುಗಳು ಸಾರ್ವಜನಿಕರನ್ನು ಆಕರ್ಷಿಸಿದವು. ರಾಮ ಫಲ, ಸೀತಾ ಫಲ, ಸ್ಟಾರ್ ಫ್ರುಟ್ಸ್ ಗಮನ ಸೆಳೆದವು.

ಒಟ್ನಲ್ಲಿ ಮೂರುದಿನಗಳ ಕಾಲ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ.. ವೀಕೆಂಟ್ ನಲ್ಲಿ ಫ್ಯಾಮಿಲಿ ಜೊತೆ ಬರ್ತಿರೋ ಜನ ಪ್ರದರ್ಶನ ನೋಡಿ ಎಂಜಾಯ್ ಮಾಡಿದ್ರು.

click me!