ಚಿಕ್ಕಮಗಳೂರು: ಮಲೆನಾಡಿನಲ್ಲಿ ಕೆಎಫ್‌ಡಿ ಜೊತೆಗೆ ಡೆಂಗ್ಯೂ ಮಹಾಮಾರಿ

By Girish Goudar  |  First Published Feb 11, 2024, 9:02 PM IST

ಆರಂಭದಲ್ಲಿ ತೀವ್ರ ಸ್ವರೂಪ ರೂಪ ಪಡೆದಿರುವ ಕೆ ಎಫ್ ಡಿ ಗೆ ಶೃಂಗೇರಿಯ ಓರ್ವ ವೃದ್ಧ ಬಲಿಯಾಗಿದ್ರೆ. ಮತ್ತೊಂದು ಕಡೆ ಡೆಂಗ್ಯೂ ಗೆ ಚಿಕ್ಕಮಗಳೂರಿನ ಯುವತಿ ಬಲಿಯಾಗಿದ್ದಾಳೆ. ಕಾಡಂಚಿನ ತಾಲೂಕುಗಳಾದ ಕೊಪ್ಪ, ಎನ್ಆರ್ ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರ ರೂಪ ತಾಳಿದ್ದು 9 ಮಂದಿಯಲ್ಲಿ ಕಾಣಿಸಿಕೊಂಡಿದೆ. ಸದ್ಯ ನಾಲ್ವರು ಗುಣಮುಖರಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಅರಣ್ಯ ದಂಚಿನ ಗ್ರಾಮಸ್ಥರಲ್ಲಿ ಜಾಗೃತಿಯ ಜೊತೆಗೆ ಕೆ ಎಫ್ ಡಿ ರೋಗ ಹರದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ.
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.11): ಮಳೆಗಾಲ ಕಳೆದು ಚಳಿಗಾಲ ಆರಂಭವಾಗುತ್ತಿದ್ದಂತೆ ಕಾಫಿನಾಡು ಚಿಕ್ಕಮಗಳೂರು ಸಾಂಕ್ರಾಮಿಕ ರೋಗಗಳ ಗೂಡಾಗುತ್ತಿದೆ. ಒಂದು ಕಡೆ ಮಂಗನ ಕಾಯಿಲೆ ಮತ್ತೊಂದು ಕಡೆ ಡೆಂಗ್ಯೂ ಮಹಾಮಾರಿ ಸದ್ದಿಲ್ಲದೆ ಆವರಿಸುತ್ತಿದ್ದು ಎರಡು ರೋಗಕ್ಕೂ ಒಬ್ಬೊಬ್ಬರು ಬಲಿಯಾಗಿದ್ದಾರೆ. ಅಷ್ಟಕ್ಕೂ ಜಿಲ್ಲೆಗೆ ಎಂಟ್ರಿ ಕೊಟ್ಟಿರೋ ಮಾರಕ ರೋಗದ ಭೀತಿ ಎದುರಾಗಿದೆ. 

Latest Videos

undefined

ಒಂದು ಕಡೆ ಮಂಗನ ಕಾಯಿಲೆ ಮತ್ತೊಂದು ಕಡೆ ಡೆಂಗ್ಯೂ ಮಹಾಮಾರಿ : 

ಸ್ವಚ್ಛಂದ ಗಾಳಿ ಸುಂದರ ಪರಿಸರಕ್ಕೆ ಹೇಳಿ ಮಾಡಿಸಿದ ಜಿಲ್ಲೆ ಅಂದ್ರೆ ಅದು ಕಾಫಿನಾಡು ಚಿಕ್ಕಮಗಳೂರು. ಮಳೆಗಾಲ ಕಳೆದು ಇನ್ನೇನು ಚಳಿಗಾಲವು ಮುಗಿಯುವ ಸನ್ನಿಹಿತ ಎದುರಾಗಿದೆ. ಚಳಿಯೊಂದಿಗೆ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದಂತೆ ಕಾಫಿ ನಾಡಿಗೆ ಎರಡು ಮಹಾ ಮಾರಿಗಳು ಸದ್ದಿಲ್ಲದೆ ಎಂಟ್ರಿ ಕೊಟ್ಟಿದೆ. ಒಂದು ಮಲೆನಾಡಿನ ಮಾರಕ ಕಾಯಿಲೆ ಎಂದೇ ಹೆಸರು ಪಡೆದಿರುವ ಮಂಗನ ಕಾಯಿಲೆ ಮತ್ತೊಂದು ಕಡೆ ಮಾರಣಾಂತಿಕ ರೋಗ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. 

ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ: ಹಿಂದೂಪರ ಸಂಘಟನೆಯ 7 ಮಂದಿ ಬಂಧನ, ರುಮಾನ್ ವಿರುದ್ಧವೂ ಪ್ರತಿದೂರು

ಹೌದು ಆರಂಭದಲ್ಲಿ ತೀವ್ರ ಸ್ವರೂಪ ರೂಪ ಪಡೆದಿರುವ ಕೆ ಎಫ್ ಡಿ ಗೆ ಶೃಂಗೇರಿಯ ಓರ್ವ ವೃದ್ಧ ಬಲಿಯಾಗಿದ್ರೆ. ಮತ್ತೊಂದು ಕಡೆ ಡೆಂಗ್ಯೂ ಗೆ ಚಿಕ್ಕಮಗಳೂರಿನ ಯುವತಿ ಬಲಿಯಾಗಿದ್ದಾಳೆ. ಕಾಡಂಚಿನ ತಾಲೂಕುಗಳಾದ ಕೊಪ್ಪ, ಎನ್ಆರ್ ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರ ರೂಪ ತಾಳಿದ್ದು 9 ಮಂದಿಯಲ್ಲಿ ಕಾಣಿಸಿಕೊಂಡಿದೆ. ಸದ್ಯ ನಾಲ್ವರು ಗುಣಮುಖರಾಗಿದ್ದು ಜಿಲ್ಲಾ ಆರೋಗ್ಯ ಇಲಾಖೆ ಅರಣ್ಯ ದಂಚಿನ ಗ್ರಾಮಸ್ಥರಲ್ಲಿ ಜಾಗೃತಿಯ ಜೊತೆಗೆ ಕೆ ಎಫ್ ಡಿ ರೋಗ ಹರದಂತೆ ಎಚ್ಚರಿಕೆ ವಹಿಸಲು ಮುಂದಾಗಿದ್ದಾರೆ.

ಮಂಗನ ಕಾಯಿಲೆಗೆ ಲಸಿಕೆಯೇ ಇಲ್ಲ : 

ಇದೇ ವೇಳೆ ಗಾಯದ ಮೇಲೆ ಬರೆ ಎಂಬಂತೆ ಮಲೆನಾಡು ಬಯಲು ಸೀಮೆ ಎನ್ನದೆ ತೀವ್ರವಾಗಿ ನರಳುತ್ತಿರುವ ಕಾಯಿಲೆಗೆ ಓರ್ವ ಯುವತಿಯನ್ನ ಬಲಿ ಪಡೆದಿದೆ. ಕಳೆದ ಹಲವು ದಿನಗಳಿಂದ ಸಣ್ಣ ಸ್ವರೂಪದ ಸಮಸ್ಯೆಯಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಸಹರಾ ಡೆಂಗ್ಯೂ ಗೆ ಕೊನೆಯುಸಿರೆಳಿದ್ದಾಳೆ. ಜೊತೆಗೆ 10ನೇ ತರಗತಿ ವಿದ್ಯಾರ್ಥಿಗೂ ರೋಗ ದೃಡಪಟ್ಟಿದ್ದು ಜಿಲ್ಲೆಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ಈ ಎರಡು ರೋಗಗಳು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ.  ಜಿಲ್ಲೆಯಾದ್ಯಂತ ಫುಲ್ ಅಲರ್ಟ್ ಆಗಿದೆ ಆರೋಗ್ಯ ಇಲಾಖೆ.ಒಟ್ಟಾರೆ ಕಳೆದ ಏಳೆಂಟು ವರ್ಷಗಳಲ್ಲಿ ಈ ಸ್ವರೂಪದಲ್ಲಿ ಕಾಣಿಸಿಕೊಳ್ಳದ ಮಂಗನ ಕಾಯಿಲೆ ತನ್ನ ರೌದ್ರ ರೂಪ ತಾಳಿದ್ದು, ಲಸಿಕೆ ಇಲ್ಲದೇ ಇರುವುದು ಮಲೆನಾಡಿನ ತಾಲೂಕುಗಳಲ್ಲಿ ಜೀವ ಭಯ ತರಿಸಿದೆ. ಮತ್ತೊಂದು ಕಡೆ ಡೆಂಗ್ಯೂ ಮಹಾಮಾರಿ ಸದ್ದಿಲ್ಲದೆ ಅಟ್ಯಾಕ್ ಮಾಡುತ್ತಿದ್ದು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಬಲಿ ಪಡೆಯುವದ್ರಲ್ಲಿ ಆಶ್ಚರ್ಯವಿಲ್ಲ.

click me!