ಹೂಗಳ ದರ ಹೆಚ್ಚಳ, ತರಕಾರಿ ಬೆಲೆಯೂ ಕೊಂಚ ಹೆಚ್ಚಳ, ಹಣ್ಣುಗಳ ಬೆಲೆ ಯಥಾಸ್ಥಿತಿ
ಬೆಂಗಳೂರು(ಅ.28): ಹೆಚ್ಚಿದ ಚಳಿಯಿಂದಾಗಿ ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವ ಕಾರಣ ದೀಪಾವಳಿ ಬಳಿಕವೂ ಹೂವುಗಳ ದರ ಕಡಿಮೆಯಾಗಿಲ್ಲ. ತರಕಾರಿ ಬೆಲೆ ಕೂಡ ಕೊಂಚ ಹೆಚ್ಚೇ ಇದ್ದು, ಹಣ್ಣುಗಳ ಬೆಲೆ ಯಥಾಸ್ಥಿತಿಗೆ ಬಂದಿದೆ. ಹೂವುಗಳ ದರ ಹಬ್ಬದ ಬಳಿಕ ಇಳಿಕೆಯಾಗುವ ಬದಲು ಹೆಚ್ಚಿನ ದರದಲ್ಲೆ ಮುಂದುವರಿದೆ. ನಗರದ ಪ್ರಮುಖ ಮಾರುಕಟ್ಟೆಗಳಿಗೆ ಹೂವುಗಳ ಪೂರೈಕೆ ಕಡಿಮೆ ಆಗಿರುವುದು ಇದಕ್ಕೆ ಕಾರಣವಾಗಿದೆ. ಚಳಿಗಾಲದ ಅಂತ್ಯದವರೆಗೆ ಇದೇ ದರ ಮುಂದುವರಿವ ಸಾಧ್ಯತೆ ಇದೆ ಎಂದು ವರ್ತಕರು ತಿಳಿಸಿದ್ದಾರೆ.
ಕೆ.ಆರ್.ಮಾರುಕಟ್ಟೆ ವ್ಯಾಪಾರಿ ನಾಗರಾಜ ಮಾತನಾಡಿ, ರಾಜ್ಯದಲ್ಲಿ ಹೆಚ್ಚಿನ ಚಳಿ, ಮಂಜಿನ ವಾತಾವರಣದಿಂದಾಗಿ ಹೂವುಗಳ ಮಾರುಕಟ್ಟೆಗೆ ಬರುವುದು ತೀರಾ ಕಡಿಮೆಯಾಗಿದೆ. ಅಲ್ಲದೆ, ತಮಿಳುನಾಡು ಸೇರಿ ಇತರೆಡೆಯಿಂದ ಬರುವ ಹೂವುಗಳು ಎಂದಿನಂತೆ ಬರುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿಯೇ ಇದೆ ಎಂದು ತಿಳಿಸಿದರು.
ಅಬ್ಬಬ್ಬಾ.. 1161 ಕೆಜಿ ತೂಕದ ಕುಂಬಳಕಾಯಿ ಬೆಳೆದು ಸೂಪರ್ ಬೌಲ್ ಪ್ರಶಸ್ತಿ ಗೆದ್ದ ರೈತ..!
ಇನ್ನು, ಸಹಜವಾಗಿ ಹಬ್ಬದ ಬಳಿಕ ತರಕಾರಿ ದರ ಒಂದೆರಡು ದಿನ ಕೊಂಚ ಹೆಚ್ಚಿನ ದರದಲ್ಲೆ ಮುಂದುವರಿಯಲಿದೆ. ವ್ಯಾಪಾರಿ ರಾಧಾಕೃಷ್ಣ ಮಾತನಾಡಿ ತರಕಾರಿ ಪೂರೈಕೆ ಕಡಿಮೆಯಾಗಿರುವುದು, ಹಿಂದಿನ ದಾಸ್ತಾನು ಹೆಚ್ಚಿರುವುದು ಬೆಲೆ ಇಳಿಯದಿರಲು ಕಾರಣ. ಒಂದೆರಡು ದಿನದಲ್ಲಿ ಮಾರುಕಟ್ಟೆಗೆ ಹೆಚ್ಚಿನ ತರಕಾರಿ ಬರುತ್ತಿದ್ದಂತೆ ದರವೂ ಯಥಾಸ್ಥಿತಿಗೆ ಮರಳಲಿದೆ ಎಂದರು.
ಹಣ್ಣುಗಳ ದರ ಕೊಂಚ ಸಾಮಾನ್ಯವಾಗಿದ್ದು, ಸೇಬು .70ರಿಂದ 120, ಕಿತ್ತಳೆ .60- .80, ಆಮದಿತ ದ್ರಾಕ್ಷಿ .220- .320, ಮುಸಂಬಿ .60, ದಾಳಿಂಬೆ .150-.200 ಇದೆ. ದರ ಇಳಿಕೆಯಾಗಿದ್ದು, ಹಬ್ಬದ ಬಳಿಕ ವ್ಯಾಪಾರ ಕಡಿಮೆಯಾಗಿದೆ ಎಂದು ರಸ್ಸೆಲ್ ಮಾರುಕಟ್ಟೆಯ ವ್ಯಾಪಾರಿ ಸಾದಿಕ್ ತಿಳಿಸಿದರು.
ಹೂವುಗಳ ದರ (ಕೆಜಿ)
ಮಲ್ಲಿಗೆ 1000
ಸುಗಂಧರಾಜ 120-160
ಕನಕಾಂಬರ 1500
ಸೇವಂತಿಗೆ 180
ಚೆಂಡು ಹೂ 100
ತಾವರೆ 20
ತರಕಾರಿ ದರ
ಬೀನ್ಸ್ 80
ಕ್ಯಾರೆಟ್ 70
ಕ್ಯಾಪ್ಸಿಕಂ 80-.60
ಸೌತೆಕಾಯಿ 16-18
ಬಟಾಟೆ 26
ಈರುಳ್ಳಿ 28
ಟೊಮೆಟೋ 25