ತೆಪ್ಪ, ಕಬಡ್ಡಿ ಆಯ್ತು ಈಗ ಕ್ರಿಕೆಟ್ ಆಟ: ಇದು ಬಿಜೆಪಿ ಶಾಸಕರ ಹುಚ್ಚಾಟ..!

Published : Aug 11, 2019, 07:50 PM ISTUpdated : Aug 11, 2019, 07:52 PM IST
ತೆಪ್ಪ, ಕಬಡ್ಡಿ ಆಯ್ತು ಈಗ ಕ್ರಿಕೆಟ್ ಆಟ: ಇದು ಬಿಜೆಪಿ ಶಾಸಕರ ಹುಚ್ಚಾಟ..!

ಸಾರಾಂಶ

ಮಳೆ, ಪ್ರವಾಹದಿಂದ ಕರ್ನಾಟದ ಹಲವು ಜಿಲ್ಲೆಗಳು ನೀರಿನಲ್ಲಿ ತೇಲಾಡುತ್ತಿವೆ. ಆದ್ರೆ ನಮ್ಮ ಜನಪ್ರತಿನಿಧಿಗಳು ಮಾತ್ರ ಇದ್ಯಾವುದು ಸಂಬಂಧವಿಲ್ಲದಂತೆ ಕಬಡ್ಡಿ, ಕ್ರಿಕೆಟ್ ಆಡುತ್ತಾ ಮಜಾ ಮಾಡುತ್ತಿದ್ದಾರೆ. 

ರಾಯಚೂರು, [ಆ.11]: ರಾಜ್ಯದಲ್ಲಿ ಭೀಕರ ನೆರೆ ಹಿನ್ನೆಲೆಯಲ್ಲಿ ಒಂದು ಕಡೆ ಜನರ ಸಾವು ಬದುಕಿನಲ್ಲಿ ಹೋರಾಡುತ್ತಿದ್ದರೆ, ಮತ್ತೊಂದೆಡೆ ಜನರ ಸಮಸ್ಯೆಗೆ ಸ್ಪಂದಿಸಬೇಕಿದ್ದ ಆಡಳಿತ ಪಕ್ಷದ ಶಾಸಕರು ಫುಲ್ ಎಂಜಾಯ್ ಮಾಡುತ್ತಿದ್ದಾರೆ. 

ಬಿಜೆಪಿ ಶಾಸಕ ಬಳ್ಳಾರಿಯಲ್ಲಿ ಕಬಡ್ಡಿ ಆಡಿದ್ರೆ, ಮತ್ತೊಂದೆಡೆ ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಕ್ರಿಕೆಟ್ ಆಡುತ್ತಾ ಜಾಲಿ ಮೂಡಲ್ಲಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹದಿಂದ ನದಿ ತೀರದ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ವೇಳೆ ಡಾ.ಶಿವರಾಜ ಪಾಟೀಲ್ ಬೆಂಬಲಿಗರೊಂದಿಗೆ ಕ್ರಿಕೆಟ್ ಆಡಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೇಣುಕಾಚಾರ್ಯ ತೆಪ್ಪದ ನಾಟಕ; ಶ್ರೀರಾಮುಲು ಕಬಡ್ಡಿ ಆಟ; ಸಾರ್ಥಕವಾಯ್ತು ಶಾಸಕರೇ!

ರಾಯಚೂರು ನಗರ ಕ್ಷೇತ್ರ ವ್ಯಾಪ್ತಿಗೆ ನದಿ ತೀರದ ಗ್ರಾಮಗಳು ಬಾರದಿದ್ದರೂ ಮಾನವೀಯತೆ ದೃಷ್ಟಿಯಿಂದ ಸಂಕಷ್ಟದಲ್ಲಿರುವ ಜನರ ಬಗ್ಗೆ ಕಾಳಜಿ ವಹಿಸದ ಶಾಸಕರು, ಪ್ರವಾಹಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡದೆ ನಿರ್ಲಕ್ಷೃ ವಹಿಸಿದ್ದಾರೆ. ಕ್ಷೇತ್ರದಲ್ಲಿ ಇದ್ದರೂ ಬೆಂಬಲಿಗರೊಂದಿಗೆ ಕ್ರಿಕೆಟ್ ಆಟದಲ್ಲಿ ತಲ್ಲೀನರಾಗಿರುವ ಶಾಸಕರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ  ಟೀಕೆಗಳು ವ್ಯಕ್ತವಾಗುತ್ತಿವೆ.

ಹುಟ್ಟುಹಾಕಿ ಬೈಸಿಕೊಂಡ ರೇಣುಕಾ: ಚೆಕ್ ಕೊಟ್ಟು ಭೇಷ್ ಎನಿಸಿಕೊಂಡ ಅಂಜಲಿ ನಿಂಬಾಳ್ಕರ್

ಮತ್ತೋರ್ವ ಬಿಜೆಪಿ ಶಾಸಕ ಮೊಣಕಾಲು ಮಟ್ಟ ಇಲ್ಲದ ನೀರಿನಲ್ಲಿ ತೆಪ್ಪಕ್ಕೆ ಹುಟ್ಟುಹಾಕಿ ಫೋಟೋಗೆ ಫೋಸ್ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದೆ. ಇಷ್ಟೇ ಅಲ್ಲದೇ ಮೂಡಿಗೇರೆ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ನೆರೆ ಸಂತ್ರಸ್ತರಿಗೆ ನಿಂದಿಸಿ ದರ್ಪ ಮೆರೆದಿದ್ದಾರೆ.

ಕ್ರಿಕೆಟ್, ಕಬಡ್ಡಿ ಸೇರಿಂದತೆ ಅವರಿಗೆ ಇಷ್ಟವಾದ ಆಟಗಳನ್ನು ಆಡಲಿ ಯಾರು ಬೇಡ ಅಂತಾರೇ, ಅವರ ಸ್ವಾತಂತ್ರವನ್ನು ಕಸಿದುಕೊಳ್ಳಲು ನಾವು ಯಾರು ಅಲ್ವಾ..? ಆದ್ರೆ ರಾಜ್ಯದಲ್ಲಿ ಪರಿಸ್ಥಿತಿ ಹೇಗಿದೆ..? ನಮ್ಮ ಜವಾಬ್ದಾರಿ ಎನು..? ಎನ್ನುವುದನ್ನು ಜನಪ್ರತಿನಿಧಿಗಳಿಗೆ ಸ್ವಲ್ಪ ಅರಿವು ಇರಬೇಕು ಅಷ್ಟೇ.

PREV
click me!

Recommended Stories

NIMHANS MindNote app: ಮಾನಸಿಕ ಆರೋಗ್ಯಕ್ಕೆ ನಿಮ್ಹಾನ್ಸ್ ಮೈಂಡ್‌ ನೋಟ್‌ ಆ್ಯಪ್: ಈಗ ಕನ್ನಡದಲ್ಲಿ!
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಮಳವಳ್ಳಿಗೆ ಆಗಮನ ನಿರೀಕ್ಷೆ