ಮುಂಬೈ-ಕಲಬುರಗಿ ವಿಮಾನ ಸಂಚಾರ ಆರಂಭ

By Kannadaprabha News  |  First Published Mar 26, 2021, 7:20 AM IST

ಮುಂಬೈ ಹಾಗೂ ಕಲಬುರಗಿ ನಡುವೆ ವಿಮಾನ ಸೇವೆ ಆರಂಭವಾಗಿದೆ. ಅಧಿಕೃತವಾಗಿ ಕಲಬುರಗಿಯಿಂದ ಮುಂಬೈಗೆ ವಿಮಾನಗಳು ಸಂಚಾರ ಮಾಡಿವೆ. 


ಕಲಬುರಗಿ (ಮಾ.26):  ರಾಷ್ಟ್ರದ ವಾಣಿಜ್ಯ ರಾಜಧಾನಿ ಮುಂಬೈ ಹಾಗೂ ಕಲ್ಯಾಣ ನಾಡಿನ ಹೆಬ್ಬಾಗಿಲು, ತೊಗರಿ ಕಣಜ ಕಲಬುರಗಿ ಮಧ್ಯೆ ಅಲಯನ್ಸ್‌ ಏರ್‌ ಸಂಸ್ಥೆಯು ನೇರ ವಿಮಾನ ಸಂಚಾರ ಸೇವೆಯನ್ನು ಗುರುವಾರದಿಂದ ಆರಂಭಿಸಿತು.

ಮುಂಬೈನಿಂದ ಹೊರಟ ಮೊದಲ ವಿಮಾನ ಬೆಳಗ್ಗೆ 9. 07 ಗಂಟೆಗೆ ಕಲಬುರಗಿ ನಗರದ ಸರಡಗಿ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿತು. ಇದರೊಂದಿಗೆ 8 ಮಂದಿ ಪ್ರಯಾಣಿಕರು ಬಂದರು. ಇದೇ ವಿಮಾನ ಸರಿಯಾಗಿ 9.40ಕ್ಕೆ ಕಲಬುರಗಿಯಿಂದ ಗಗನಕ್ಕೆ ಚಿಮ್ಮಿತು. ಇದರಲ್ಲಿ 22 ಪ್ರಯಾಣಿಕರು ಮೊದಲ ಬಾರಿಗೆ ಕಲಬುರಗಿಯಿಂದ ಮುಂಬೈಗೆ ಪ್ರಯಾಣ ಬೆಳೆಸಿದರು.

Tap to resize

Latest Videos

ವಿಮಾನ ಪ್ರಯಾಣದಲ್ಲಿ ಡೆಲಿವರಿ: ಬಾನೆತ್ತರದಲ್ಲಿ ಜನಿಸಿದ ಹೆಣ್ಣುಮಗು

ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಜಾಸ್ತಿ ಇದ್ದ ಕಾರಣ ಕೋವಿಡ್‌ ನೆಗೆಟಿವ್‌ ಪ್ರಮಾಣ ಪತ್ರ ತರದ ಪ್ರಯಾಣಿಕರಿಗೆ ನಿಲ್ದಾಣದಲ್ಲೇ ಕೋವಿಡ್‌- 19 ಸೋಂಕಿನ ಪರೀಕ್ಷೆಗಾಗಿ ಆರ್‌ಟಿಸಿಪಿಸಿಆರ್‌ ಪರೀಕ್ಷೆ ನಡೆಸಲಾಯ್ತು. ಪ್ರಯಾಣಿಕರಿಂದ ಗಂಟಲು ದ್ರವ ಸ್ಥಳದಲ್ಲೇ ಪಡೆದು ಅವರ ಸಂಪರ್ಕ ವಿಳಾಸಗಳನ್ನು ಕಲೆ ಹಾಕಲಾಯ್ತು.

ವಿಮಾನ ಇಳಿದ ಕೂಡಲೇ ಅಗ್ನಿಶಾಮಕ ವಾಹನಗಳ ಮೂಲಕ ವಿಮಾನಕ್ಕೆ ಸಾಂಪ್ರದಾಯಿಕ ವಾಟರ್‌ ಸೆಲ್ಯೂಟ್‌ ನೀಡಲಾಯ್ತು. ವಾರದ ಎಲ್ಲಾ 7 ದಿನಗಳೂ ಮುಂಬೈ- ಕಲಬುರಗಿ ಮಧ್ಯೆ ವಿಮಾನ ಸೇವೆ ಲಭ್ಯವಿರಲಿದೆ. ಈಗಾಗಲೇ ಕಲಬುರಗಿಯಿಂದ ಬೆಂಗಳೂರು, ತಿರುಪತಿ, ನವದೆಹಲಿ ಹಿಂಡನ್‌ ಗೆ ವಿಮಾನ ಸೇವೆ ನಡೆಯುತ್ತಿದೆ. ಈ ಸೇವೆಯ ಸರಣಿಗೆ ಇದೀಗ ಮುಂಬೈ ಮಹಾನಗರದ ವೈಮಾನಿಕ ಸಂಪರ್ಕ ಹೊಸ ಸೇರ್ಪಡೆಯಾಗಿದೆ.

click me!