ಲಾಂಗು ಮಚ್ಚು ಹಿಡಿದು ದೋಚಲು ಸಂಚು : ಐವರು ರೌಡಿಗಳ ಸೆರೆ

Published : Dec 07, 2019, 08:10 AM IST
ಲಾಂಗು ಮಚ್ಚು ಹಿಡಿದು ದೋಚಲು ಸಂಚು : ಐವರು ರೌಡಿಗಳ ಸೆರೆ

ಸಾರಾಂಶ

ಲಾಂಗು ಮಚ್ಚು ಹಿಡಿದು ಸಾರ್ವಜನಿಕರಿಂದ ದೋಚಲು ಯತ್ನಿಸುತ್ತಿದ್ದ ಐವರು ರೌಡಿಗಳನ್ನು ಬಂಧಿಸಲಾಗಿದೆ.

ಬೆಂಗಳೂರು [ಡಿ.07]: ನಗರದ ಅಮೃತಹಳ್ಳಿ ಸಮೀಪ ಸಾರ್ವಜನಿಕರಿಗೆ ಜೀವ ಬೆದರಿಕೆ ಹಾಕಿ ದರೋಡೆ ಹೊಂಚು ಹಾಕುತ್ತಿದ್ದ ಐವರು ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್‌, ಮಲ್ಲಿಕಾರ್ಜುನ್‌, ಮಂಜುನಾಥ್‌, ಮಂಜೇಶ್‌ ಹಾಗೂ ಗಂಗಾಧರ್‌ ಬಂಧಿತರು. ಆರೋಪಿಗಳಿಂದ ಮಾರಾಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. 

ಲುಂಬಿನಿ ಗಾರ್ಡನ್‌ ಸರ್ವಿಸ್‌ ರಸ್ತೆಯ ಬಳಿ ಈ ಐದು ಮಂದಿ ಗುಂಪು ಕಟ್ಟಿಕೊಂಡು ಮಾರಕಾಸ್ತ್ರಗಳನ್ನು ಹಿಡಿದು ಸಾರ್ವನಿಕರಿಂದ ಹಣ, ಆಭರಣ ದೋಚಲು ಸಂಚು ರೂಪಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಹಿಂದೆಯೂ ಈ ಐವರ ಮೇಲೆ ಅನೇಕ ಪ್ರಕರಣಗಳು ದಾಖಲಾಗಿದ್ದು ಇದೀಗ ಬಂಧಿಸಿ ವಿಚಾರಣೆ ನಡೆಸಲಾಗಿದೆ.

PREV
click me!

Recommended Stories

ಪರಿಷತ್ತಿನಲ್ಲಿ ಬಸವರಾಜ ಹೊರಟ್ಟಿ ಬದಲಾವಣೆ ಇಲ್ಲ, ಈ ಕುರಿತು ಚರ್ಚೆ ಆಗಿಲ್ಲ: ಸಲೀಂ ಅಹ್ಮದ್
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು