ಹೋಂ ಕ್ವಾರಂಟೈನ್‌ ಉಲ್ಲಂಘನೆ: ಐವರು ಸರ್ಕಾರಿ ಕ್ವಾರಂಟೈನ್‌ಗೆ ಶಿಫ್ಟ್‌

By Kannadaprabha News  |  First Published May 20, 2020, 7:36 AM IST

ಜಿಯೋ ಫೆನ್ಸಿಂಗ್‌ ಅಳವಡಿಸಿ ಇವರೆಲ್ಲರ ಮೇಲೆ ನಿಗಾವಹಿಸಲಾಗಿತ್ತು| ಕೋವಿಡ್‌ ಸೋಂಕಿತರೊಂದಿಗೆ ಎರಡನೇ ಹಂತದ ಸಂಪರ್ಕ ಹೊಂದಿದ್ದ ಜನರನ್ನು ಗುರುತಿಸಿ ಜಿಲ್ಲೆಯಾದ್ಯಂತ ಹಲವಾರು ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ| 


ಧಾರವಾಡ(ಮೇ.20): ಹೋಂ ಕ್ವಾರಂಟೈನ್‌ ಉಲ್ಲಂಘಿಸಿ ಹೊರಗಡೆ ತಿರುಗಾಟ ನಡೆಸಿದ್ದ ಐವರನ್ನು ಮಂಗಳವಾರ ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕೋವಿಡ್‌ ಸೋಂಕಿತರೊಂದಿಗೆ ಎರಡನೇ ಹಂತದ (ಸೆಕೆಂಡರಿ) ಸಂಪರ್ಕ ಹೊಂದಿದ್ದ ಜನರನ್ನು ಗುರುತಿಸಿ ಜಿಲ್ಲೆಯಾದ್ಯಂತ ಹಲವಾರು ಜನರನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಜಿಯೋ ಫೆನ್ಸಿಂಗ್‌ ಅಳವಡಿಸಿ ಇವರೆಲ್ಲರ ಮೇಲೆ ನಿಗಾವಹಿಸಲಾಗಿತ್ತು. 

Tap to resize

Latest Videos

ಜಿಯೊ ಫೆನ್ಸಿಂಗ್‌ ವಲಯದಿಂದ ಹೊರಬಂದ ಕೂಡಲೇ ಕಂಟ್ರೋಲ್‌ ರೂಮಿಗೆ ಮಾಹಿತಿ ಲಭ್ಯವಾಗುತ್ತಿದೆ. ಈ ಮಾಹಿತಿ ಆಧರಿಸಿ ಈ ಹಿಂದೆಯೇ ನವಲೂರ ಪ್ರದೇಶದಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವವರ ಮನೆಗಳಿಗೆ ಮಹಾನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ನಿಯಮ ಉಲ್ಲಂಘಿಸದಿರಲು ಎಚ್ಚರಿಕೆ ನೀಡಿದರು. 

ಕೊರೋನಾ ಕಾಟ: 'ಬಸ್‌ ಟಿಕೆಟ್‌ ಕೊಡಲು ಆನ್‌ಲೈನ್‌ ವ್ಯವಸ್ಥೆಗೆ ಚಿಂತನೆ'

ಹಲವು ಎಚ್ಚರಿಕೆಗಳ ನಂತರವೂ ನಿರಂತರವಾಗಿ ಹೊರಗಡೆ ಸಂಚಾರ ನಡೆಸಿದ್ದ ಐವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ, ತಾಲೂಕು ಆರೋಗ್ಯಾಧಿಕಾರಿ ಡಾ. ಅಯ್ಯನಗೌಡ ಪಾಟೀಲ ಅವರ ನೇತೃತ್ವದಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆಯರ ತಂಡ ಅವರನ್ನು ಸರ್ಕಾರಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಿದರು.

click me!