ವಿಜಯಪುರ: ಖಾಸಗಿ ಬಸ್‌ಗೆ ಬೆಂಕಿ, ಒಂದೇ ಕುಟುಂಬದ ಐವರ ದುರ್ಮರಣ

Suvarna News   | Asianet News
Published : Aug 12, 2020, 01:03 PM ISTUpdated : Aug 12, 2020, 01:04 PM IST
ವಿಜಯಪುರ: ಖಾಸಗಿ ಬಸ್‌ಗೆ ಬೆಂಕಿ, ಒಂದೇ ಕುಟುಂಬದ ಐವರ ದುರ್ಮರಣ

ಸಾರಾಂಶ

ಖಾಸಗಿ ಬಸ್‌ಗೆ ಬೆಂಕಿ| ಚಿತ್ರದುರ್ಗ ಜಿಲ್ಲೆಯ ಕೆ.ಆರ್​.ಹಳ್ಳಿ ಬಳಿ ನಡೆದ ಘಟನೆ| ಬಸ್​ನಲ್ಲಿ 32 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರ ಜೊತೆಗೆ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್ ಕೂಡ ಪ್ರಯಾಣ|

ವಿಜಯಪುರ(ಆ.12): ನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ವೊಂದು ಚಿತ್ರದುರ್ಗ ಜಿಲ್ಲೆಯ ಕೆ.ಆರ್​.ಹಳ್ಳಿ ಬೆಂಕಿಗಾಹುತಿಯಾಗಿ ಐವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮೃತರನ್ನ ಗಣೇಶನಗರದ ನಿವಾಸಿಗಳಾದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಶೀಲಾ ರವಿ (33), ಸ್ಪರ್ಶ (8), ಸಮೃದ್ಧ (5), ಕವಿತಾ ವಿನಾಯಕ (29 )ಹಾಗೂ ನಿಶ್ಚಿತಾ (3) ಎಂದು ಎಸ್ಪಿ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.

ಮುದ್ದೇಬಿಹಾಳ: ಶವಸಂಸ್ಕಾರಕ್ಕೆ ಉಕ್ಕಿ ಹರಿಯುವ ಹಳ್ಳ ಪರದಾಡಿದ ಗ್ರಾಮಸ್ಥರು!

ಟಿಕೆಟ್​ ಬುಕ್ಕಿಂಗ್ ಏಜೆನ್ಸಿ ಪ್ರಕಾರ ಬಸ್​ನಲ್ಲಿ 32 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರ ಜೊತೆಗೆ ಇಬ್ಬರು ಚಾಲಕರು ಹಾಗೂ ಓರ್ವ ಕ್ಲೀನರ್ ಕೂಡ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಬೆಂಕಿಗಾಹುತಿಗೊಳಗಾದ ಕುಕ್ಕೆಶ್ರೀ ಟ್ರಾವೆಲ್ಸ್​ ಬೆಂಗಳೂರು ಮೂಲದ ದೇವರಾಜ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ನಿನ್ನೆ(ಮಂಗಳವಾರ) ರಾತ್ರಿ 9 ಗಂಟೆಗೆ ಬಸ್ ವಿಜಯಪುರದಿಂದ ಹೊರಟಿದ್ದು, ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಎಸ್ಪಿ ಅನುಪಮ್ ಅಗರವಾಲ್ ಅವರು ತಿಳಿಸಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!