ಭೀಕರ ಅಪಘಾತ: ದೇವರ ದರ್ಶನಕ್ಕೆ ತಮಿಳುನಾಡಿಗೆ ಹೋಗುತ್ತಿದ್ದ ಐವರ ದುರ್ಮರಣ

By Kannadaprabha News  |  First Published Dec 22, 2020, 9:23 AM IST

ಗಂಭೀ​ರ​ವಾಗಿ ಗಾಯ​ಗೊಂಡಿ​ರುವ 16 ಮಂದಿಯ ಪೈಕಿ 8 ಜನರ ಸ್ಥಿತಿ ಚಿಂತಾ​ಜ​ನ​ಕ​| ತಮಿ​ಳು​ನಾಡು, ಕರ್ನಾ​ಟಕ ಗಡಿ ಭಾಗ​ದ​ಲ್ಲಿ​ರುವ ದಬ್ಬಗುಳೇಶ್ವರ ದೇವರ ದರ್ಶ​ನಕ್ಕೆ ತೆರ​ಳುತ್ತಿ​ದ್ದ​ ಭಕ್ತರು| 


ರಾಮ​ನ​ಗ​ರ/ಕನಕಪುರ(ಡಿ.22): ಟ್ರ್ಯಾಕ್ಟರ್‌ ಪಲ್ಟಿ ಹೊಡೆದ ಪರಿಣಾಮ ದೇವರ ದರ್ಶ​ನಕ್ಕೆ ತೆರಳುತ್ತಿದ್ದ ಕನ​ಕ​ಪುರ ಮೂಲದ ಐವರು ಮಹಿ​ಳೆ​ಯರು ಮೃತಪಟ್ಟು, 16 ಮಂದಿ ಗಂಭೀರವಾಗಿ ಗಾಯ​ಗೊಂಡಿರುವ ಧಾರುಣ ಘಟನೆ ತಮಿ​ಳು​ನಾಡು, ಕರ್ನಾ​ಟ​ಕದ ಗಡಿ ಭಾಗ​ದಲ್ಲಿ ಸೋಮ​ವಾರ ನಡೆ​ದಿದೆ. 

ಕನ​ಕ​ಪುರ ತಾಲೂಕು ಕೆರ​ಳಾ​ಳು​ಸಂದ್ರ ಗ್ರಾಮದ ಪುಟ್ಟಲಿಂಗಮ್ಮ(60), ಹೊಸಬೊಮ್ಮ(60), ಗೌರಮ್ಮ(75), ಮಂಗಳಮ್ಮ(25), ಈರಮ್ಮ(85) ಮೃತರು. ಗಂಭೀ​ರ​ವಾಗಿ ಗಾಯ​ಗೊಂಡಿ​ರುವ 16 ಮಂದಿಯ ಪೈಕಿ 8 ಜನರ ಸ್ಥಿತಿ ಚಿಂತಾ​ಜ​ನ​ಕ​ವಾ​ಗಿದೆ.

Tap to resize

Latest Videos

ಜಾಲಿರೈಡ್ ಹೋಗಿದ್ದ ಮೂವರು ಯುವಕರ ದುರಂತ ಸಾವು

ಕೆರ​ಳಾ​ಳು​ಸಂದ್ರ ಗ್ರಾಮದ ಸುಮಾರು 25 ಮಂದಿ ಸೋಮ​ವಾರ ಬೆಳಗ್ಗೆ ತಮಿ​ಳು​ನಾಡು, ಕರ್ನಾ​ಟಕ ಗಡಿ ಭಾಗ​ದ​ಲ್ಲಿ​ರುವ ದಬ್ಬಗುಳೇಶ್ವರ (ದಬ್ಬಗುಳಿಯ ಬಸವೇಶ್ವರ) ದೇವರ ದರ್ಶ​ನಕ್ಕೆ ತೆರ​ಳುತ್ತಿ​ದ್ದ​ರು. ದೇವಸ್ಥಾನಕ್ಕೆ 4 ಕಿ.ಮೀ. ದೂರ​ವಿದ್ದಾಗ ಟ್ರ್ಯಾಕ್ಟರ್‌ ಚಾಲ​ಕನ ನಿಯಂತ್ರಣ ತಪ್ಪಿ ರಸ್ತೆ ತಿರು​ವಿ​ನಲ್ಲಿ ಮೂರು ಸುತ್ತು ಪಲ್ಟಿ ಹೊಡೆ​ದಿದೆ.
 

click me!