2 ಪ್ರತ್ಯೇಕ ಅಪಘಾತದಲ್ಲಿ ಐವರು ದಾರುಣ ಸಾವು

Published : Jun 16, 2019, 09:57 PM ISTUpdated : Jun 16, 2019, 09:59 PM IST
2 ಪ್ರತ್ಯೇಕ ಅಪಘಾತದಲ್ಲಿ ಐವರು ದಾರುಣ ಸಾವು

ಸಾರಾಂಶ

ಇಂದು [ಭಾನುವಾರ] ವಿಜಯಪುರ ಮತ್ತು ರಾಯಚೂರಿನಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ. 

ವಿಜಯಪುರ/ರಾಯಚೂರು, [ಜೂ.16]: ಕಂಟೇನರ್ ಲಾರಿ ಹಾಗೂ ಏಸರ್ ಪಿಕಪ್ ನಡುವೆ ಮುಖಾಮುಖಿ‌ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಿಜಯಪುರ ‌ಜಿಲ್ಲೆಯ ದೇವರಹಿಪ್ಪರಗಿ ಬಳಿಯ ಎನ್ಎಚ್- 218 ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಏಸರ್ ಪಿಕಪ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಮೃತರು ಸಿಂದಗಿ ಪಟ್ಟಣದ ಮೂಲದವರು ಎಂದು ತಿಳಿದುಬಂದಿದೆ. ಆದರೆ, ಮೃತರು ಹೆಸರು ಲಭ್ಯವಿಲ್ಲ.

ಬೈಕ್​ಗೆ ಡಿಕ್ಕಿ ಹೊಡೆದ ಲಾರಿ
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮುದಬಾಳ ಕ್ರಾಸ್​ ಬಳಿ ಲಾರಿ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ಅವರಲ್ಲಿ ಓರ್ವನನ್ನು ಮಸ್ಕಿಯ ಗೋಪಾಲ್​ (25) ಎಂದು ಗುರುತಿಸಲಾಗಿದ್ದು, ಇನ್ನೋರ್ವನ ಗುರುತು ಪತ್ತೆಯಾಗಿಲ್ಲ. ಬೈಕ್​ ಮಸ್ಕಿಯಿಂದ ಲಿಂಗಸೂಗೂರು ಕಡೆಗೆ ಹೋಗುತ್ತಿತ್ತು. 

ಎದುರಿನಿಂದ ಬಂದ ಲಾರಿ ಡಿಕ್ಕಿಯಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಮಸ್ಕಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

PREV
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ