ಚಿಕ್ಕಮಗಳೂರು: ಸೌಲಭ್ಯ ಕಲ್ಪಿಸುವಂತೆ ಐವರು ಮಾಜಿ ನಕ್ಸಲರಿಂದ ಡಿಸಿ ಮೀನಾ ನಾಗರಾಜ್‌ಗೆ ಮನವಿ

By Govindaraj S  |  First Published Sep 18, 2024, 7:27 PM IST

ಭೂಮಿ, ವಸತಿ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಮಾಜಿ ನಕ್ಸಲರು , ನಾಗರೀಕ ಹಿತರಕ್ಷಣಾ ವೇದಿಕೆಯ ಅಡಿಯಲ್ಲಿ ಕೆಲ ಸಂಘಟನೆಯ ಪ್ರಮುಖರ ನಿಯೋಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. 
 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಸೆ.18): ಭೂಮಿ, ವಸತಿ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಸರಕಾರ ಕೂಡಲೇ ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿ ಮಾಜಿ ನಕ್ಸಲರು , ನಾಗರೀಕ ಹಿತರಕ್ಷಣಾ ವೇದಿಕೆಯ ಅಡಿಯಲ್ಲಿ ಕೆಲ ಸಂಘಟನೆಯ ಪ್ರಮುಖರ ನಿಯೋಗ ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಶರಣಾಗತಿ ಪ್ಯಾಕೇಜ್ ಅಡಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಬಂದವರಿಗೆ ಎಂಟು ವರ್ಷವಾದರೂ ಯಾವುದೇ ಸೌಲಭ್ಯ ಸಿಕ್ಕಿಲ್ಲ ಎಂದು ಮಾಜಿ ನಕ್ಸಲರ ಅಳಲು ತೋಡಿಕೊಂಡಿದ್ದಾರೆ. 

Tap to resize

Latest Videos

ಸೌಲಭ್ಯ ಕಲ್ಪಿಸುವಂತೆ ಮಾಜಿ ನಕ್ಸಲರಿಂದ ಡಿಸಿಗೆ ಮನವಿ: ಸರ್ಕಾರ ಕೊಟ್ಟ ಮಾತು ಮರೆತೆ ಬಿಟ್ಟಿದೆ ಅನ್ನೋ ನೋವು..!. ಈ ಸುಖಕ್ಕೆ ಯಾಕಾದ್ರೂ ಶರಣಾದ್ವಿ ಅನ್ನೋ ಮನಸ್ಥಿತಿ..!. ಹೀಗೆ ಒಂದರ ಮೇಲೆ ಒಂದರಂತೆ ತಮ್ಮ ನೋವು ತೋಡಿಕೊಂಡಿದ್ದು  ಬೇರ್ಯಾರು ಅಲ್ಲ ದಶಕಗಳ ಕಾಲ ಅಡವಿಯಲ್ಲಿ ಅವಿತು ಕೆಂಪು ಉಗ್ರರಾಗಿ ಶರಣಾಗಿರೋ ಮಾಜಿ ನಕ್ಸಲರು. ಹೌದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಛೇರಿಗೆ ಮಾಜಿ ನಕ್ಸಲರ ನೇತೃತ್ವದ ತಂಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸೌಲಭ್ಯಕ್ಕಾಗಿ ಮನವಿ ಸಲ್ಲಿಸಿದರು. ಮಾಜಿ ನಕ್ಸಲರಾದ ಸಿರಿಮನೆ ನಾಗರಾಜ್, ನಿಲಗುಳಿ ಪದ್ಮನಾಭ್, ನೂರ್ ಶ್ರೀಧರ್, ಶಿವು, ಪರಶುರಾಮ ಜೊತೆಗೆ ಕೆಲ ಸಂಘಟನೆ ಪ್ರಮುಖರು ಇದ್ದರು. 

ಮನವಿಯಲ್ಲಿ 2016 ಹಾಗೂ 2017ರಲ್ಲಿ ಸಮಾಜದ ಮುಖ್ಯ ವಾಹಿನಿಗೆ ಬಂದ್ರೆ ನಿಮಗೆ ಭೂಮಿ, ವಸತಿ, ಉದ್ಯೋಗ ಸೇರಿ ನಿಮ್ಮ ಮೇಲಿನ ಕೆ ಎಸ್ ಕ್ಲೋಸ್ ಮಾಡೋ ಜೊತೆಗೆ ಬರಪೂರ ಸೌಲಭ್ಯ ಕೊಡ್ತೀವಿ ಅಂತ ಸರ್ಕಾರ ನಂಬಿಸಿ ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ನಕ್ಸಲರನ್ನು ಸರ್ಕಾರ ಅಂದು ಶರಣಾಗುವಂತೆ ಮಾಡಿತ್ತು. ಶರಣಾಗಿದ್ದೆ ಬಂತು ಸರ್ಕಾರ ಕೊಟ್ಟ ಭರವಸೆ ಇಂದಿಗೂ ಕಡತಗಳಿಗಷ್ಟೇ ಸೀಮಿತವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.ಅಲ್ಲದೆ ಕಾಡಿನಲ್ಲಿ ಕುಳಿತು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರೋ ತಂಡ ಸರ್ಕಾರದ ಭರವಸೆ ನಂಬಿ ಬರುವುದು ಡೌಟ್, ಕೊಟ್ಟ ಮಾತಿನಂತೆ ನಮಗೆ ಸೌಲಭ್ಯ ಕೊಡಿ ಅಂತ ಚಿಕ್ಕಮಗಳೂರು ಡಿಸಿಗೆ ಮಾಜಿ ನಕ್ಸಲರು ಮನವಿ ಮಾಡುವ ಮೂಲಕ ಒತ್ತಾಯಿಸಿದ್ದಾರೆ.

ರಾಜಕೀಯ ಮಾಡುವುದು ಚುನಾವಣೆಗೆ ಮಾತ್ರ ಸೀಮಿತವಾಗಬೇಕು: ಕೇಂದ್ರ ಸಚಿವ ವಿ.ಸೋಮಣ್ಣ

ಕೇಸ್ ಕ್ಲೋಸ್ ಗೆ ಒತ್ತಾಯ: 2016ರಲ್ಲಿ ನಾಲ್ಕು ಜನ 2017ರಲ್ಲಿ ಮೂರು ಜನ ನಕ್ಸಲರು ಮುಖ್ಯ ವಾಹಿನಿಗೆ ಶರಣಾಗಿದ್ರು, ಈ ವೇಳೆ ಕನ್ಯಾಕುಮಾರಿ ಎಂಬ ನಕ್ಸಲ್ ಮಹಿಳೆ ಶರಣಾಗುವ ಮುನ್ನ ಪ್ರಕರಣಗಳನ್ನು ತುರ್ತಾಗಿ ಇತ್ಯರ್ಥ ಮಾಡಿ ಬಿಡುಗಡೆಗೊಳಿಸೋ ಭರವಸೆ ನೀಡಿದ್ರು. ಆದರೆ ಆಗಿದ್ದೇ ಬೇರೆ ಎಂಟು ವರ್ಷ ಕಳೆದರೂ ಆಕೆ ಜೈಲಿನಲ್ಲಿ ಕೊಳೆಯುವಂತಾಗಿದೆ. ಐದು ವರ್ಷ ಮಗು ಕೂಡ ಸೆರೆವಾಸ ಅನುಭವಿಸಿ ಇದೀಗ ಹೊರ ಬಂದಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ನಂಬಿ ನಕ್ಸಲ್ ಚಟುವಟಿಕೆ ಬಿಟ್ಟು ಆರೋಪದಿಂದ ಹೊರ ಬಂದ್ರು ನಮಗೆ ಸೌಲಭ್ಯವಿರಲಿ ಕನಿಷ್ಠ ನಾಗರಿಕ ಪರಿಹಾರಗಳನ್ನು ನೀಡಲು ಸರ್ಕಾರ ಮುಂದಾಗದಿರುವುದು ಮಾಜಿ ನಕ್ಸಲರಿಗೆ ಇನ್ನಿಲ್ಲದ ಸಿಟ್ಟು ತರಿಸಿದೆ. ಇದು ಕೊಟ್ಟ ಮಾತು ಇಟ್ಟ ಭರವಸೆ ಹುಸಿಯಾದ ಬೆನ್ನಲ್ಲೇ ಮಾಜಿ ನಕ್ಸಲರ ಮಕ್ಕಳಿಗೆ ಉಚಿತ ಶಿಕ್ಷಣ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿರೋ ನಕ್ಸಲ್ ಆರೋಪಿತರ ಪರ ನಾಗರೀಕ ನಿಯೋಗ ಎಚ್ಚರಿಕೆಯನ್ನು ನೀಡಿದೆ.

click me!