ಗದಗ ಜನತಾ ದರ್ಶನದಲ್ಲಿ ಹಿರಿಯಜ್ಜಿಯ ಗತ್ತು: ಬಲಗೈನಿಂದ ಹ್ಯಾಂಡ್ ಶೇಕ್ ಮಾಡು ಅಂತಾ ಡಿಸಿಗೆ ಗದರಿದ ಅಜ್ಜಿ!

By Govindaraj S  |  First Published Sep 18, 2024, 4:35 PM IST

ರೋಣ ಶಾಸಕ‌ಜಿ ಎಸ್ ಪಾಟೀಲ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ .ಪಂ ಸಿಇಓ ಭರತ್ ಎಸ್  ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಜನತಾ ದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಲಗೈನಿಂದ ಹ್ಯಾಂಡ್ ಶೇಕ್ ಮಾಡು ಅಂತಾ ಜಿಲ್ಲಾಧಿಕಾರಿಗೇ ಪ್ರೀತಿಯಿಂದ ಅಜ್ಜಿ ಗದರಿದ ಘಟನೆ ನಡೆದಿದೆ.


ಗದಗ (ಸೆ.18): ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಗದಗ ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ತಾಲೂಕಾವಾರು ಅರ್ಜಿ ಸ್ವೀಕಾರಕ್ಕೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಲು ಮುಂದಾದರು. 

ರೋಣ ಶಾಸಕ‌ಜಿ ಎಸ್ ಪಾಟೀಲ್, ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿ .ಪಂ ಸಿಇಓ ಭರತ್ ಎಸ್  ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಜನತಾ ದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಲಗೈನಿಂದ ಹ್ಯಾಂಡ್ ಶೇಕ್ ಮಾಡು ಅಂತಾ ಜಿಲ್ಲಾಧಿಕಾರಿಗೇ ಪ್ರೀತಿಯಿಂದ ಅಜ್ಜಿ ಗದರಿದ ಘಟನೆ ನಡೆದಿದೆ.

Tap to resize

Latest Videos

undefined

ಜನತಾ ದರ್ಶನದಲ್ಲಿ ಹಿರಿಯಜ್ಜಿಯೊಬ್ಬರು ಮನವಿಯನ್ನು ಸಲ್ಲಿಸಿ ಸಚಿವ ಎಚ್ ಕೆ ಪಾಟೀಲ, ಶಾಸಕ ಜಿಎಸ್ ಪಾಟೀಲರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ. ಅನಂತರ ಮುಂದೆ ಬಂದು ಡಿಸಿಗೂ ಹ್ಯಾಂಡ್ ಶೇಕ್ ಮಾಡಲು ಬಂದಾಗ ಬಲಗೈನಲ್ಲಿ ನೀರಿನ ಲೋಟ ಇದ್ದಕಾರಣ ಎಡಗೈನಿಂದ ಮುಂದೆ ಮಾಡಿದ ಡಿಸಿ ಗೋವಿಂದ ರೆಡ್ಡಿಗೆ ಪ್ರೀತಿಯಿಂದ ಗದರಿ ಬಲಗೈ ಮುಂದೆ ಮಾಡು ಎಂದ ಅಜ್ಜಿ ಹೇಳಿದ್ದಾರೆ, ಡಿಸಿಗೆ ಹ್ಯಾಂಡ್ ಶೇಕ್ ಮಾಡಿ, ಭದ್ರತೆಗೆ ಬಂದಿದ್ದ ಪೊಲೀಸರಿಗೆ ತಲೆ ಮೇಲೆ ಕೈಇಟ್ಟು ಅಜ್ಜಿ ಪ್ರೀತಿ ತೋರಿದ್ದಾರೆ. 

ಮುನಿರತ್ನರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡುತ್ತೇವೆ ಎಂದು ಬಿಜೆಪಿ ಹೇಳಬೇಕಿತ್ತು: ಸಚಿವ ಎಚ್.ಕೆ.ಪಾಟೀಲ

ಅಲ್ಲದೇ ಆಶೀರ್ವಾದ ಬೇಡ ಅಂತಾ ಹೇಳಿದ ಪೊಲೀಸರಿಗೂ ಅಜ್ಜಿ ಗದರಿದ್ದಾರೆ. ಮುಗ್ಧ ಅಜ್ಜಿಯ ಗತ್ತಿಗೆ ಜನತಾ ದರ್ಶನ ಸ್ಟನ್ ಆಗಿತ್ತು. ಇನ್ನು ಅಮ್ಮನವರ ಮಂದಿರಕ್ಕೆ ಜಾಗ ಕೇಳಲು ಅಜ್ಜಿ ಗದಗ ನಗರದ ರಾಚೂಟೇಶ್ವರ ನಗರದ ನಿವಾಸಿ ಭೈರಮ್ಮ ಬಂದಿದ್ದಾರೆ. ಜಾಗವನ್ನು ಶೀಘ್ರ ಮಂಜೂರು ಮಾಡಿಸೋದಾಗಿ ಹೇಳಿದಕ್ಕೆ ಅಜ್ಜಿ ಖುಷ್ ಆಗಿದ್ದಾರೆ.

click me!