ಶಿರಾ ಬಳಿ ಮದುವೆಗೆ ಹೊರಟಿದ್ದ ಬಸ್‌ ಪಲ್ಟಿ: ಐವರ ದುರ್ಮರಣ

By Kannadaprabha News  |  First Published Feb 19, 2021, 7:54 AM IST

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಮೇಕೆರಹಳ್ಳಿ ತಿರುವಿನಲ್ಲಿ ನಡೆದ ಘಟನೆ| ಮದುವೆ ಕಾರ್ಯಕ್ರಮಕ್ಕೆ ಹೊರಟ್ಟಿದ್ದರು| ಗಾಯಾಳುಗಳಿಗೆ ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ದಾಖಲು| 


ಶಿರಾ(ಫೆ.19): ಮದುವೆಗೆ ಹೊರಟಿದ್ದ ಬಸ್‌ವೊಂದು ಪಲ್ಟಿಯಾದ ಪರಿಣಾಮ ಐವರು ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರ್ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನಲ್ಲಿ ನಡೆದಿದೆ. 

ಶಿರಾ ತಾಲೂಕಿನ ಬುಕ್ಕಾಪಟ್ಟಣ ರಸ್ತೆಯ ಮೇಕೆರಹಳ್ಳಿ ತಿರುವಿನಲ್ಲಿ ಗುರುವಾರ ರಾತ್ರಿ 8 ಗಂಟೆಯ ಸಮಯದಲ್ಲಿ ಬಸ್‌ ಪಲ್ಟಿಯಾಗಿದೆ. ಬುಕ್ಕಾಪಟ್ಟಣದಲ್ಲಿ ನಡೆಯಲಿರುವ ಮದುವೆ ಕಾರ್ಯಕ್ರಮಕ್ಕೆ ತುಮಕೂರು ತಾಲೂಕಿನ ಶಂಬೇನಹಳ್ಳಿ ಗೊಲ್ಲರಹಟ್ಟಿ ಗ್ರಾಮದಿಂದ ಜನರು ಬಸ್‌ನಲ್ಲಿ ಹೊರಟ್ಟಿದ್ದರು. 

Tap to resize

Latest Videos

ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವವರಲ್ಲಿ ಶೇ.70 ರಷ್ಟು ಯುವಜನಾಂಗ; ಬೆಚ್ಚಿ ಬೀಳಿಸುತ್ತಿದೆ ವರದಿ!

ಬಸ್‌ ಪಲ್ಟಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಶಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ.
 

click me!