ಇಂದಿನಿಂದ ಕಾರವಾರದಲ್ಲಿ ಕಡಲಿಗಿಳಿಯುತ್ತೆ ಮೀನು ಬೇಟೆ ಬೋಟುಗಳು..!

By Kannadaprabha News  |  First Published May 7, 2020, 12:35 PM IST

ಮೀನುಗಾರರು ಸಿದ್ಧತೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವೇ ಅನುಮತಿ ನೀಡಿದರೂ ಬುಧವಾರ ಕಾರವಾರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿಲ್ಲ. ಗುರುವಾರ ಯಾಂತ್ರೀಕೃತ ಬೋಟುಗಳು ಕಡಲಿಗೆ ಇಳಿಯಲಿವೆ.


ಕಾರವಾರ(ಮೇ.07): ಮೀನುಗಾರರು ಸಿದ್ಧತೆ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಸರ್ಕಾರವೇ ಅನುಮತಿ ನೀಡಿದರೂ ಬುಧವಾರ ಕಾರವಾರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಿಲ್ಲ. ಗುರುವಾರ ಯಾಂತ್ರೀಕೃತ ಬೋಟುಗಳು ಕಡಲಿಗೆ ಇಳಿಯಲಿವೆ.

ಪರ್ಸೈನ್‌, ಟ್ರಾಲರ್‌ ಬೋಟುಗಳಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಓರಿಸ್ಸಾ, ಜಾರ್ಖಂಡ್‌ ಮೂಲದ ಯುವಕರು ತಮ್ಮ ತಮ್ಮ ಊರುಗಳಿಗೆ ಮರಳಿದ್ದಾರೆ. ಮೀನುಗಾರಿಕೆಗೆ ಕಾರ್ಮಿಕರ ಸಮಸ್ಯೆಯೂ ತಲೆದೋರಿದೆ.

Latest Videos

undefined

ಭಟ್ಕಳದಲ್ಲಿ ಒಂದೂವರೆ ತಿಂಗಳಲ್ಲಿ 22 ಜನರ ಸಾವು ಎಂದ ಸಂಸದ!

ಜತೆಗೆ ಡೀಸೆಲ್‌ ಸೇರಿದಂತೆ ಇನ್ನಿತರ ಪರಿಕರಗಳನ್ನು ಹೊಂದಿಸಿಕೊಳ್ಳುವಲ್ಲಿ ಬೋಟ್‌ ಮಾಲೀಕರು ಬ್ಯುಸಿಯಾದರು. ಮೀನುಗಾರಿಕೆಗೆ ತೆರಳುವವರಿಗೆ ವೈದ್ಯಕೀಯ ಪರೀಕ್ಷೆಯನ್ನೂ ಬುಧವಾರ ನಡೆಸಲಾಯಿತು.

ಕಾರವಾರದಲ್ಲಿ 200ಕ್ಕೂ ಹೆಚ್ಚು ಯಾಂತ್ರೀಕೃತ ಬೋಟುಗಳಿದ್ದರೂ ಎಲ್ಲ ಬೋಟುಗಳೂ ಮೀನುಗಾರಿಕೆ ನಡೆಸಲು ಅನುಕೂಲತೆಗಳನ್ನು ಹೊಂದಿಲ್ಲ. ಹಾಗಾಗಿ ಶೇ. 50 ರಷ್ಟುಬೋಟುಗಳು ಮೀನುಗಾರಿಕೆಗೆ ಇಳಿಯುವ ಸಾಧ್ಯತೆ ಇದೆ.

click me!