ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ದಿನಾಂಕ ಘೋಷಣೆ ಮಾಡಲಾಗಿದೆ. ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು ಆದರೆ ಇಲ್ಲೆಲ್ಲಾ ಚುನಾವಣೆ ನಡೆಯುತ್ತಿಲ್ಲ
ಚಿಕ್ಕಮಗಳೂರು (ಡಿ.02): ಈಗಾಗಲೇ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ಘೋಷಣೆಯಾಗಿದೆ. ಆದರೆ ಇಲ್ಲಿ ಮಾತ್ರ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿಯ ನಾಲ್ಕು ಗ್ರಾಮ ಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕರಿಸಲಾಗಿದೆ. ಚುನಾವಣೆಗೆ ಯಾರೂ ನಾಮಪತ್ರ ಸಲ್ಲಿಸುವಂತಿಲ್ಲ. ನಾಮಪತ್ರ ಸಲ್ಲಿಸಿದರೆ ಹಾರ ಹಾಕಿ ಸನ್ಮಾನ ಮಾಡಿ ಸಲ್ಲಿಸಿದವರ ಮನೆ ಮುಂದೆ ಧರಣಿ ನಡೆಸುವ ಎಚ್ಚರಿಕೆ ನೀಡಲಾಗಿದೆ.
ಆನ್ಲೈನ್ ಸೇರಿದಂತೆ ಯಾವ ವಿಧದಲ್ಲೂ ನಾಮಪತ್ರ ಸಲ್ಲಿಸುವಂತಿಲ್ಲ. ಕಡವಂತಿ, ಹುಯಿಗೆರೆ, ದೇವದಾನ, ಬಿದರೆ ಗ್ರಾಪಂನಲ್ಲಿ ಬ್ಯಾನರ್ ಅಳವಡಿಸಲಾಗಿದೆ.
ಡಿಸೆಂಬರ್ 22, 27ಕ್ಕೆ ಗ್ರಾಮ ಸಮರ: ಸೋಂಕಿತರಿಗೆ ಕೊನೆಯ 1 ತಾಸು ಮತದಾನಕ್ಕೆ ಅವಕಾಶ! ..
ಸರ್ಕಾರದ ಯೋಜನೆ ವಿರುದ್ಧ ಅನ್ನದಾತರು ಕಿಡಿಕಾರಿದ್ದು, ಹುಲಿ ಯೋಜನೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಚುನಾವಣೆ ಬಹಿಷ್ಕರಿಸಲು ಮುಂದಾಗಿದ್ದಾರೆ.
ಖಾಂಡ್ಯ ನಾಗರೀಕ ಹಿತರಕ್ಷಣಾ ವೇದಿಕೆ ಹಾಗೂ ಜನರಿಂದ ಈ ಬಗ್ಗೆ ತೀರ್ಮಾನವಾಗಿದ್ದು, ನಾಲ್ಕು ಗ್ರಾಪಂ ವ್ಯಾಪ್ತಿಯಲ್ಲಿ ಅಲ್ಲಲ್ಲೇ ಬ್ಯಾನರ್ ಹಾಕಿದ್ದಾರೆ.