ಜಿಲ್ಲೆಯ ನಾಡದೋಣಿ ಮೀನುಗಾರರಿಗೆ ಕ್ಲಪ್ತ ಸಮಯದಲ್ಲಿ ಸೀಮೆ ಎಣೆæ್ಣ ಪೂರೈಕೆಗೆ ಆಗ್ರಹಿಸಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಸಾವಿರಾರು ಮಂದಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಸಿದರು.
ಉಡುಪಿ (ಡಿ.4) : ಜಿಲ್ಲೆಯ ನಾಡದೋಣಿ ಮೀನುಗಾರರಿಗೆ ಕ್ಲಪ್ತ ಸಮಯದಲ್ಲಿ ಸೀಮೆ ಎಣೆæ್ಣ ಪೂರೈಕೆಗೆ ಆಗ್ರಹಿಸಿ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಸಾವಿರಾರು ಮಂದಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹಕ್ಕೊತ್ತಾಯ ಪ್ರತಿಭಟನೆ ನಡೆಸಿದರು.
ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಮಾತನಾಡಿ, ಕರಾವಳಿಯ 3 ಜಿಲ್ಲೆæಗಳಿಗೆ ಪ್ರತಿ ತಿಂಗಳು 2400 ಕಿಲೋ ಲೀಟರ್ ಸೀಮೆ ಎಣ್ಣೆ, ಆಗಸ್ವ್‌ನಿಂದ 10 ತಿಂಗಳ ವರೆಗೆ ನೀಡಲು ಕೇಂದ್ರ ಸರಕಾರ ಆದೇಶಿಸಿದೆ. ಆದರೆ ನವಂಬರ್‌ನಲ್ಲಿ 3000 ಕೆ.ಎಲ…. ಸೀಮೆಎಣೆæ್ಣ ಬಿಡುಗಡೆಯಾಗಿದ್ದರೂ, ಇದುವರೆಗೆ ಮೀನುಗಾರಿಕೆಗೆ ಸಿಕ್ಕಿಲ್ಲ. ಇದರಿಂದ ಮೀನುಗಾರರು ಸಂಪಾದನೆ ಇಲ್ಲದೇ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಸೀಮೆ ಎಣೆæ್ಣ 15 ದಿನದೊಳಗೆ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
undefined
ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಕೇಂದ್ರದಿಂದ ಸಬ್ಸಿಡಿ ಸೀಮೆ ಎಣ್ಣೆ ಬಿಡಿಗಡೆಯಾಗದೇ ಈ ಸಮಸ್ಯೆಯಾಗಿದೆ. ರಾಜ್ಯ ಸರ್ಕಾರವು ಕೈಗಾರಿಕಾ ಸೀಮೆ ಎಣೆæ್ಣಯನ್ನು ಖರೀದಿಸಿ, ಅದನ್ನು ಸಬ್ಸಿಡಿ ದರದಲ್ಲಿ ನಾಡದೊಣಿ ಮೀನುಗಾರರಿಗೆ ನೀಡಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಾಧ್ಯವಿದೆ ಎಂದರು. ಬಳಿಕ ಅಪರ ಜಿಲ್ಲಾಾಧಿಕಾರಿ ವೀಣಾ ಅವರಿಗೆ ಮನವಿ ಸಲ್ಲಿಸಲಾಯಿತು.
ಮಾಜಿ ಸಚಿವ ವಿನಯಕುರ್ಮಾ ಸೊರಕೆ, ಮೀನುಗಾರಿಕಾ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಪ್ರಮುಖರಾದ ಜಯ ಸಿ.ಕೋಟ್ಯಾನ್, ರಮೇಶ್ ಕಾಂಚನ್, ಮದನ್ ಕುಮಾರ್, ರಾಮಚಂದ್ರ ಖಾರ್ವಿ, ಕುಮಾರ್ ಖಾರ್ವಿ, ಗೋಪಾಲ್ ಆರ್.ಕೆ., ಚಂದ್ರಕಾಂತ್ ಕರ್ಕೇರ, ಪುರಂದರ ಕೋಟ್ಯಾನ…, ಮಹಮ್ಮದ್ ಅಝೀಝ…, ಯಶವಂತ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು. ಪ್ರತಿಭಟನೆಗೆ ಸಾವಿರಾರು ಸಂಖ್ಯೆಯಲ್ಲಿ ಮೀನುಗಾರರು ಎಂಜಿಎಂ ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತೆæ್ರ ನಡೆಸಿ, ಅಲ್ಲಿ ಬಹಿರಂಗ ಸಭೆ ನಡೆಸಿದರು. ಮೂರು ತಿಂಗ್ಳಿಂದ ಸಿಗ್ತಿಲ್ಲ ಸೀಮೆಎಣ್ಣೆ; ನಾಡ ದೋಣಿ ಮೀನುಗಾರರ ಸಂಕಷ್ಟ ಕೇಳೋರಿಲ್ಲ!