ಜಿಲ್ಲಾ ಸರ್ಜನ್ ಗೆ ಮೊದಲ ಕೋವಿಡ್ ಲಸಿಕೆ ಇಂಜೆಕ್ಟ್

By Kannadaprabha News  |  First Published Jan 17, 2021, 7:34 AM IST

ತುಮಕೂರಿನಲ್ಲಿ ಮೊದಲ ಕೊರೋನಾ ಲಸಿಕೆಯನ್ನು ಜಿಲ್ಲಾ ಸರ್ಜನ್‌ಗೆ ನೀಡಲಾಗಿದೆ. ಲಸಿಕೆ ಪಡೆದ ಬಳಿಕ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. 


ತುಮಕೂರು(ಜ.17):  ಜಿಲ್ಲೆಯಾದ್ಯಂತ ಶನಿವಾರ 13 ಕೇಂದ್ರಗಳಲ್ಲಿ ಕೋವಿಶೀಲ್ಡ್‌ ಲಸಿಕೆ ಕಾರ್ಯಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ತುಮಕೂರು ನಗರದಲ್ಲಿ ಜಿಲ್ಲಾಸ್ಪತ್ರೆ, ಶ್ರೀದೇವಿ ಆಸ್ಪತ್ರೆ, ಕೋತಿ ತೋಪು ಹಾಗೂ ಕ್ಯಾತ್ಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ 11 ಗಂಟೆಗೆ ತುಮಕೂರಿನ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದಲ್ಲಿ ಲಸಿಕಾ ವಿತರಣಾ ಆಭಿಯಾನ ಆರಂಭವಾಯಿತು. 

ಮೊದಲನೆಯವರಾಗಿ ಜಿಲ್ಲಾ ಸರ್ಜನ್‌ ಡಾ. ವೀರಭದ್ರಯ್ಯ ಲಸಿಕೆ ಹಾಕಿಸಿಕೊಂಡರೆ ಎರಡನೆಯವರಾಗಿ ಡಿಹೆಚ್‌ಓ ನಾಗೇಂದ್ರಪ್ಪ ಲಸಿಕೆ ಹಾಕಿಸಿಕೊಂಡರು. ಜಿಲ್ಲೆಯಲ್ಲಿ ಮೊದಲ ದಿನ 13 ಲಸಿಕಾ ಕೇಂದ್ರಗಳಿಂದ 1,174 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿತ್ತು. ಇದರಲ್ಲಿ 839 ಜನರಿಗೆ ಮೊದಲ ದಿನ ಲಸಿಕೆ ಹಾಕಲಾಗಿದೆ. ಸೋಮವಾರದಿಂದ ಮತ್ತೆ ಲಸಿಕಾ ಅಭಿಯಾನ ಶುರುವಾಗಲಿದೆ.

Tap to resize

Latest Videos

ಲಸಿಕೆ ಪಡೆದ ಬಳಿಕ ಯಾವುದೇ ಸಮಸ್ಯೆಯಾಗಿಲ್ಲ. ತಾವು ಫಿಟ್ ಆಗಿರವುದಾಗಿ ಅವರು ಹೇಳಿದರು. 

ಬೆಂಗ್ಳೂರಿನ 8 ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ ...

ತುಮಕೂರು ಜಿಲ್ಲೆಯ ಎಲ್ಲಾ 13 ಕೇಂದ್ರಗಳಲ್ಲಿ ಲಸಿಕಾ ಅಭಿಯಾನವನ್ನು ಹಬ್ಬದ ರೀತಿ ಮಾಡಲಾಯಿತು. ಲಸಿಕಾ ಕೇಂದ್ರದ ಮುಂದೆ ನರ್ಸ್‌ಗಳು ರಂಗೋಲಿ ಬಿಡಿಸಿ ಫಲಾನುಭವಿಗಳನ್ನು ಸ್ವಾಗತಿಸಿದರು. ಪ್ರಧಾನಿ ಮೋದಿ ಅವರ ಭಾಷಣ ಮುಗಿಯುತ್ತಿದ್ದಂತೆ ಲಸಿಕಾ ಅಭಿಯಾನ ಶುರುವಾಯಿತು. ತುಮಕೂರು ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ ಡಿಹೆಚ್‌ಓ, ಡಿಎಸ್‌ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳೆಲ್ಲಾ ಚಪ್ಪಾಳೆ ತಟ್ಟುವ ಮೂಲಕ ಈ ಅಭಿಯಾನವನ್ನು ಆರಂಭಿಸಿದರು. ಸದ್ಯ 12 ಸಾವಿರ ಲಸಿಕೆಗಳು ಆಗಮಿಸಿದ್ದು ಸೋಮವಾರದಿಂದ ಜಿಲ್ಲೆಯ 132 ಕೇಂದ್ರಗಳಲ್ಲೂ ಲಸಿಕಾ ಅಭಿಯಾನ ಆರಂಭವಾಗಲಿದೆ.

click me!