ರಾತ್ರಿ 2 ಗಂಟೆಗೆ ಹೊತ್ತಿ ಉರಿದ ಕೆನರಾ ಬ್ಯಾಂಕ್..! ಎಲ್ಲವೂ ಭಸ್ಮ

By Suvarna News  |  First Published Feb 9, 2020, 12:31 PM IST

ಮಂಡ್ಯದ ಕೆನರಾ ಬ್ಯಾಂಕ್‌ ಕಟ್ಟಡ ರಾತ್ರೋ ರಾತ್ರಿ ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದ್ದು, ರಾತ್ರಿ ವೇಳೆ ಘಟನೆ ನಡೆದುದರಿಂದ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.


ಮಂಡ್ಯ(ಫೆ.09): ಮಂಡ್ಯದ ಕೆನರಾ ಬ್ಯಾಂಕ್‌ ಕಟ್ಟಡ ರಾತ್ರೋ ರಾತ್ರಿ ಹೊತ್ತಿ ಉರಿದು ಸಂಪೂರ್ಣ ನಾಶವಾಗಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ವ್ಯಾಪಕವಾಗಿ ಹರಡಿರುವ ಸಾಧ್ಯತೆ ಇದ್ದು, ರಾತ್ರಿ ವೇಳೆ ಘಟನೆ ನಡೆದುದರಿಂದ ಬೆಂಕಿ ನಂದಿಸಲು ಸಾಧ್ಯವಾಗಿರಲಿಲ್ಲ.

"

Tap to resize

Latest Videos

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆರಣಿಯಲ್ಲಿ‌ ಘಟನೆ ನಡೆದಿದ್ದು, ಆಕಸ್ಮಿಕ ಬೆಂಕಿ ತಗುಲಿ ಬ್ಯಾಂಕ್ ಕಟ್ಟಡ ಹೊತ್ತಿ ಉರಿದಿದೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಸಾಮೂಹಿಕ ವಿವಾಹಕ್ಕೆ ಹೆಗಡೆ, ಸುಧಾಮೂರ್ತಿ, ಯಶ್ ರಾಯಭಾರಿ

ರಾತ್ರಿ 2 ಗಂಟೆ ವೇಳೆಗೆ ಹೊತ್ತಿಕೊಂಡ ಬೆಂಕಿ ವ್ಯಾಪಕವಾಗಿ ಇಡೀ ಕೊಠಡಿಯನ್ನಾವರಿಸಿತ್ತು. ಬೆಂಕಿ ಕೊಠಡಿ ಹೊರಗೂ ವ್ಯಾಪಿಸುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಬೆಳ್ಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!