Chikkamagaluru: ಸಹಾಯಧನವಿಲ್ಲ, ಆರ್ಥಿಕ ಮುಗ್ಗಟ್ಟು, ಶಾಂತಿ ವ್ಯಸನ ಮುಕ್ತಿ ಕೇಂದ್ರ ಬಂದ್

By Suvarna News  |  First Published Dec 27, 2021, 1:05 PM IST

- ಕುಡುಕನಿಂದಲೇ ಆರಂಭವಾದ ಶಾಂತಿ ವ್ಯಸನ ಮುಕ್ತಿ ಕೇಂದ್ರ
- ಸಾವಿರಾರು ಕುಟುಂಬಕ್ಕೆ ಆಶಾಕಿರಣವಾಗಿದ್ದ ವ್ಯಸನ ಮುಕ್ತಿ ಕೇಂದ್ರ
- 4 ಸಾವಿರ ಮುಂದಿಗೆ ಈವರೆಗೂ ಚಿಕಿತ್ಸೆ, 3 ವರ್ಷ ಮಾತ್ರ ಸರ್ಕಾರದ ಸಹಾಯಧನ 


ಚಿಕ್ಕಮಗಳೂರು (ಡಿ. 27):  ಕುಡಿಯೋದೇ ನನ್ನ ವೀಕ್‌ನೆಸ್ ,ಆದ್ರೆ ನ್ಯಾಯಕ್ಕೆ ದುಡಿಯೋದೇ ನನ್ನ ಬಿಸಿನೆಸ್ ಇದು ಯುದ್ದಕಾಂಡ ಚಲನಚಿತ್ರದ ಹಾಡುಗಳ ಸಾಲು....ಬಹುಶಃ ಈ ಸಾಲಿನ ಹಾಡು ಈ ವ್ಯಕ್ತಿಗೆ ಹೇಳಿ ಮಾಡಿಸಿದ ರೀತಿನೇ ಇದೆ. ಹೌದು ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುಗ್ಗಲಮಕ್ಕಿ  ಗಣೇಶ್ .

"

Tap to resize

Latest Videos

ಇವರು ಕೂಡ ಕುಡಿತದ ಕಾಯಕದಲ್ಲೇ ಇದ್ದವರು. ಕುಡಿತದ ದುಷ್ಟಪರಿಣಾಮ ಅರಿತು, 1998 ರಲ್ಲೇ ಮದ್ಯದ ಅಮಲಿನಿಂದ ದೂರ ಉಳಿದರು. ಹೊರರಾಜ್ಯ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಸಂಚರಿಸಿದ ಗಣೇಶ್ ,ನಾನಾ ಕಡೆ ವ್ಯಸನ ಮುಕ್ತ ಕೇಂದ್ರಗಳಿಗೆ ಭೇಟಿ ನೀಡಿದರು. ಆ ವ್ಯಸನ ಮುಕ್ತಿ ಕೇಂದ್ರಗಳು ಮದ್ಯಮವರ್ಗ, ಬಡವರ ಪಾಲಿಗೆ ದೂರ ಉಳಿದಿತ್ತು. ಇದರಿಂದ ಕುಡುಕಿರಾಗಿದ್ದ ಮುಗ್ಗಲಮಕ್ಕಿ ಗಣೇಶ್ 2002ರಲ್ಲಿ  ಮಲೆನಾಡಿನಲ್ಲಿ ಶಾಂತಿ ವ್ಯಸನ ಮುಕ್ತಿ ಕೇಂದ್ರವನ್ನು ಆರಂಭಿಸಿದರು. 

2002 ರಿಂದ 2020 ರವೆಗೂ ನಿರಂತರವಾಗಿ ಶಾಂತಿ ವ್ಯಸನ ಮುಕ್ತಿ ಕೇಂದ್ರ ಮಲೆನಾಡಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿತು. ಸರಿಸುಮಾರು 4ಸಾವಿರ ಮಂದಿಗೂ ಅಧಿಕ ಜನರು ಕುಡಿತದ ಚಟದಿಂದ ದೂರ ಉಳಿದು ನೆಮ್ಮದಿ ಜೀವನವನ್ನು ಇಂದಿಗೂ ನಡೆಸುತ್ತಿದ್ದಾರೆ. ಇದರಲ್ಲೂ ನೂರಾರು ಮಂದಿ ಮಹಿಳೆಯರು ಕೂಡ ವ್ಯಸನ ಮುಕ್ತದಲ್ಲಿ ಚಿಕಿತ್ಸೆ ಪಡೆದಿದ್ದಾರೆ . ಕಳೆದ 18 ವರ್ಷದ ಅವಧಿಯಲ್ಲಿ 3 ವರ್ಷ ಕೇಂದ್ರ ಸರ್ಕಾರದ ಸಹಾಯಧನ ಸಿಕ್ಕಿದೆ. ಇನ್ನು ಉಳಿದ ವರ್ಷಗಳಲ್ಲಿ ಗಣೇಶ್ ತಮ್ಮ ಸ್ವಂತ ಹಣದಲ್ಲಿ ವ್ಯಸನ ಕೇಂದ್ರವನ್ನು ನಡೆಸಿದ್ದಾರೆ. ಇದರಿಂದ 40 ಲಕ್ಷಕ್ಕೂ ಅಧಿಕ ಸಾಲ ಹೊರೆ ಬಂದಿದೆ . ಇದರ ಪರಿಣಾಮ ಮುಗ್ಗಲಮಕ್ಕಿ ಗಣೇಶ್  ತಾತ ಮಾಡಿದ 5 ಎಕರೆ ಜಮೀನನ್ನು ಮಾರಾಟ ಮಾಡಿ ಸಾಲವನ್ನು ತೀರಿಸಿದ್ದಾರೆ. ಇಂದಿಗೂ ಮಲೆನಾಡಿನ ಬಡ  ಕೂಲಿ ಕಾರ್ಮಿಕರ ಮನೆಯಿಂದ ನಿತ್ಯ ಪೋನ್ ಬಂದರೂ ಏನು ಮಾಡಲಾಗದ್ದ ಸ್ಥಿತಿಯಲ್ಲಿ ಗಣೇಶ್ ಇದ್ದಾರೆ.

Chikkamagaluru: ಚಿಕ್ಕಮಗಳೂರು ಜಿಲ್ಲೆಯ ನಿರಾಶ್ರಿತರ ಬದುಕು ನಿರ್ಗತಿಕರಿಗಿಂತ ಕಡೆ..!
 
 ಮಲೆನಾಡಿನಲ್ಲಿ ಆರಂಭವಾಗಿದ್ದ ಆ ವ್ಯಸನ ಮುಕ್ತಿ ಕೇಂದ್ರ ಸಾವಿರಾರು ಕುಟುಂಬಗಳಿಗೆ ಆಶಾಕಿರಣವಾಗಿತ್ತು, ಇದರ ಪರಿಣಾಮ ಕೂಲಿ ಕಾರ್ಮಿಕರು ನೆಮ್ಮದಿ ಜೀವನವನ್ನ ನಡೆಸುತ್ತಿದ್ದಾರೆ. 2002ರಲ್ಲಿ ಆರಂಭಿಸಿದ ಶಾಂತಿ ವ್ಯಸನ ಮುಕ್ತಿ ಕೇಂದ್ರಕ್ಕೆ ಸರ್ಕಾರ ಸಹಾಯದ ಧನ ನಿಂತ ಪರಿಣಾಮ ಕೆಲ ತಿಂಗಳ ಹಿಂದೆ ಬಂದ್ ಆಗಿದೆ. 
 

click me!