ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಪತ್ನಿಯರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಸಿದ್ದಾಪುರ ಸಮೀಪದ ಅರೆಕಾಡುವಿನ ಬಳಂಜಿಗೆರೆಯಲ್ಲಿ ನಡೆದಿದೆ.
ಮಡಿಕೇರಿ(ಜ.05): ಒಂದೇ ಮನೆಯಲ್ಲಿ ವಾಸವಾಗಿದ್ದ ಇಬ್ಬರು ಪತ್ನಿಯರ ನಡುವಿನ ಕಲಹ ಕೊಲೆಯಲ್ಲಿ ಅಂತ್ಯ ಕಂಡ ಘಟನೆ ಸಿದ್ದಾಪುರ ಸಮೀಪದ ಅರೆಕಾಡುವಿನ ಬಳಂಜಿಗೆರೆಯಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ದಯಾನಂದ್ ಎಂಬಾತ ಆಶೀಖಾ ಗುಪ್ತ ಮತ್ತು ವಸಿಖಾದೇವಿ (26) ಎಂಬ ಇಬ್ಬರು ಪತ್ನಿಯರೊಂದಿಗೆ ತೋಟದ ಲೈನ್‌ಮನೆಯಲ್ಲಿ ವಾಸವಾಗಿದ್ದ. ಅರೆಕಾಡು ಸಮೀಪದ ಬಳಂಜಿಗೆರೆಯ ಟಾಟಾ ಸಂಸ್ಥೆಗೆ ಸೇರಿದ ಕಾಫಿ ತೋಟದಲ್ಲಿ ಇವರು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಹೆಂಡತಿಯರು ಹಾಗೂ 3 ಮಕ್ಕಳೊಂದಿಗೆ ಒಟ್ಟಿಗೆ ಸಂಸಾರ ನಡೆಸುತಿದ್ದರು.
ಹೂತಿಟ್ಟಿದ್ದ ಮಾಟದ ವಸ್ತು ಪತ್ತೆಹಚ್ಚಿದ ಬಸವ..! ಪವಾಡದ ಮೇಲೊಂದು ಪವಾಡ
ಮೊದಲನೇ ಪತ್ನಿ ಆಶೀಖಾ ಗುಪ್ತ ಶನಿವಾರ ಸಂಜೆ ತೋಟದಿಂದ ಕೆಲಸ ಮುಗಿಸಿ ಮನೆಗೆ ಬಂದಾಗ ವಸಿಖಾದೇವಿಯೊಂದಿಗೆ ಕ್ಷುಲ್ಲಕ ವಿಚಾರಕ್ಕೆ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿದ್ದು, ಆಶೀಖಾ ಗುಪ್ತ ಏಕಾಏಕಿ ಕತ್ತಿಯಿಂದ ವಸಿಖಾದೇವಿಯ ಕುತ್ತಿಗೆ ಭಾಗಕ್ಕೆ ಕಡಿದ್ದಾಳೆ.
ಕತ್ತಿ ಏಟಿನಿಂದ ಕುತ್ತಿಗೆ ಮತ್ತು ಕೈ ಭಾಗಕ್ಕೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ವಸೀಖಾದೇವಿಯನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಕೊಲೆ ಆರೋಪಿ ಆಶೀಖಾ ಗುಪ್ತಳನ್ನು ಬಂಧಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
KRSನಲ್ಲಿ ಪ್ರವಾಸಿಗರಿಗೆ ಬೆಲೆ ಏರಿಕೆ ಬಿಸಿ..! ಎಂಟ್ರಿ ಫೀಸ್‌ನಲ್ಲಿ ಭಾರೀ ಹೆಚ್ಚಳ