ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ.ಸುಧಾಕರ್ ಮಧ್ಯೆ ಸಾಮರಸ್ಯ ಇಲ್ಲದ್ದರಿಂದಲೇ ಇಬ್ಬರ ಜಗಳನ್ನೂ ನೋಡಲಾಗದೇ, ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ನೀಡಿದ್ದಾರೆ ಎಂದು ವಿಪ ಸದಸ್ಯ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ದಾವಣಗೆರೆ(ಏ.19): ಆರೋಗ್ಯ ಸಚಿವ ಶ್ರೀರಾಮುಲು, ವೈದ್ಯಕೀಯ ಸಚಿವ ಡಾ.ಸುಧಾಕರ್ ಮಧ್ಯೆ ಸಾಮರಸ್ಯ ಇಲ್ಲದ್ದರಿಂದಲೇ ಇಬ್ಬರ ಜಗಳನ್ನೂ ನೋಡಲಾಗದೇ, ಶಿಕ್ಷಣ ಸಚಿವ ಸುರೇಶಕುಮಾರ್ ಅವರಿಗೆ ಸಿಎಂ ಯಡಿಯೂರಪ್ಪ ಜವಾಬ್ದಾರಿ ನೀಡಿದ್ದಾರೆ ಎಂದು ವಿಪ ಸದಸ್ಯ ಎಚ್.ಎಂ.ರೇವಣ್ಣ ಹೇಳಿದರು.
ನಗರದ ಬಾಪೂಜಿ ಅತಿಥಿ ಗೃಹದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರಾದ ರಾಮುಲು, ಡಾ.ಸುಧಾಕರ್ ಕೋವಿಡ್-19 ಸೋಂಕನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಇನ್ನು ಸಚಿವ ಸುರೇಶಕುಮಾರ ಹೆಲ್ತ್ ಕಿಟ್ ಬಂದೇ ಬಿಡ್ತು ಎನ್ನುತ್ತಾರೆ. ಆದರೆ, ಕಿಟ್ ಮಾತ್ರ ಈ ಕ್ಷಣದವರೆಗೂ ಬಂದಿಲ್ಲ ಎಂದರು.
ದಾವಣಗೆರೆಯ ವಿವಿಧೆಡೆ ಆಲಿಕಲ್ಲು ಸಮೇತ ಗಾಳಿ-ಮಳೆ
ಅತಿ ಹೆಚ್ಚು ಸೋಂಕು ಪ್ರಕರಣಗಳು ವರದಿಯಾದ ಮೈಸೂರಿನಲ್ಲಿ ವೈದ್ಯರು, ಆಶಾ ಕಾರ್ಯಕರ್ತೆಯರಿಗೆ ಅಗತ್ಯ ಕಿಟ್ ನೀಡದ್ದರಿಂದ ಅಲ್ಲಿನ ವೈದ್ಯರು, ಆಶಾ ಮಹಿಳೆಯರೂ ಸೋಂಕಿಗೆ ತುತ್ತಾಗುವ ಅಪಾಯವಿದೆ. ಇನ್ನೊಮ್ಮೆ ಲಾಕ್ ಡೌನ್ ಘೋಷಿಸಿದರೆ ವೈದ್ಯರು ಬದುಕುಳಿಯುತ್ತಾರೋ ಎಂಬುದನ್ನೂ ಊಹಿಸುವುದಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಕೊಳ ತಂದ ಕೊಳೆ: ಸುಧಾಕರ್ ರಾಜೀನಾಮೆಗೆ ಹೆಚ್ಚಿದ ಒತ್ತಡ...!
ಮಹಾಮಾರಿ ಸೋಂಕು ನಿಯಂತ್ರಿಸಲು ಕೇಂದ್ರ- ರಾಜ್ಯ ಸರ್ಕಾರಗಳ ಕ್ರಮಗಳಿಗೆ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಬೆಂಬಲ ನೀಡುತ್ತದೆ. 2 ಸಲ ಲಾಕ್ ಡೌನ್ ಘೋಷಿಸಿದಾಗಲೂ ಸಂಪೂರ್ಣ ಸಹಕಾರ ನೀಡಿದ್ದೇವೆ. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಐದು ಕಾರ್ಯಕ್ರಮ ರೂಪಿಸಿಲು ಕೇಂದ್ರಕ್ಕೆ ಸಲಹೆ ನೀಡಿದ್ದರು. ಸರ್ವಪಕ್ಷಗಳ ಸಭೆಯಲ್ಲಿ ನೀಡಿದ್ದ ಸಲಹೆ, ಕೆಪಿಸಿಸಿ ನೀಡಿದ್ದ 11 ಅಂಶಕ್ಕೂ ಉಭಯ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.