ದಾವಣಗೆರೆಯ ವಿವಿಧೆಡೆ ಶನಿವಾರ ಸುರಿದ ಭಾರೀ ಮಳೆ, ಗಾಳಿ, ಗುಡುಗು- ಸಿಡಿಲಿನ ಆರ್ಭಟಕ್ಕೆ ಹಲವಾರು ಮರಗಳು ಧರೆಗುರುಳಿದ್ದು, ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೀಡಾದರೆ, ತೋಟದ ಬೆಳೆಗಳಿಗೆ, ಬಿತ್ತನೆಗೆ ಸಿದ್ಧರಾಗಿದ್ದ ರೈತರಿಗೆ ಅನುಕೂಲವಾದಂತಾಗಿದೆ.
ದಾವಣಗೆರೆ(ಏ.19): ನಗರ, ಜಿಲ್ಲೆಯ ವಿವಿಧೆಡೆ ಶನಿವಾರ ಸುರಿದ ಭಾರೀ ಮಳೆ, ಗಾಳಿ, ಗುಡುಗು- ಸಿಡಿಲಿನ ಆರ್ಭಟಕ್ಕೆ ಹಲವಾರು ಮರಗಳು ಧರೆಗುರುಳಿದ್ದು, ಕಟಾವಿಗೆ ಬಂದಿದ್ದ ಬೆಳೆಗಳು ಹಾನಿಗೀಡಾದರೆ, ತೋಟದ ಬೆಳೆಗಳಿಗೆ, ಬಿತ್ತನೆಗೆ ಸಿದ್ಧರಾಗಿದ್ದ ರೈತರಿಗೆ ಅನುಕೂಲವಾದಂತಾಗಿದೆ.
ಚನ್ನಗಿರಿಯಲ್ಲಿ ಮಧ್ಯಾಹ್ನ ಸುಮಾರು 1 ಗಂಟೆಗೂ ಅಧಿಕ ಹೊತ್ತು ಭಾರಿ ಮಳೆಯಾಗಿದ್ದರಿಂದ ಲಾಕ್ ಡೌನ್ ಜೊತೆಗೆ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರು ಶುದ್ಧ ವಾತಾವರದಲ್ಲಿ ತಣ್ಣನೆಯ ಅನುಭವ ಪಡೆಯುವಂತಾಯಿತು. ಹೊನ್ನಾಳಿಯಲ್ಲೂ ಶನಿವಾರ ಜೋರು ಮಳೆಯಾಗಿದೆ.
ಆಹಾರದ ಕಿಟ್ ಕೇಳಿದ ಬಡ ಮಹಿಳೆಗೆ ಮನಸೋ ಇಚ್ಛೆ ಥಳಿಸಿದ ಪಾಪಿಗಳು..!
ದಾವಣಗೆರೆ ತಾಲೂಕಿನಲ್ಲೂ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಜೋರಾಗಿ ಮಳೆಯಾಗಿದೆ. ಅದರಲ್ಲೂ ಹೆಬ್ಬಾಳ್, ಆನಗೋಡು, ನೇರ್ಲಿಗೆ, ಗುಡ್ಡದಹಳ್ಳಿ ಇತರೆಗೆ ಕಡೆಗಳಲ್ಲಿ ಭಾರೀ ಜೋರು ಮಳೆಯ ಜೊತೆಗೆ ಆಲಿಕಲ್ಲು ಮಳೆಯಾಗಿದೆ. ಗುಡ್ಡದಹಳ್ಳಿಯಲ್ಲಿ ಹೆಂಚಿನ ಮನೆ ಮುಂದಿನ ತೆಂಗಿನ ಮರವು ಪಕ್ಕದ ಮನೆಯ ಆರ್‌ಸಿಸಿ ಮನೆ ಮೇಲೆ ಬಿದ್ದಿದ್ದರಿಂದ ಹೆಂಚಿನ ಮನೆಯಲ್ಲಿದ್ದವರು ಅದೃಷ್ಟವಶಾತ್ ಬಚಾವಾಗಿದ್ದಾರೆ.
ಗದಗನಲ್ಲಿ 3ನೇ ಕೊರೋನಾ ಪ್ರಕರಣ: ಜಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಟೆಸ್ಟ್ ಆರಂಭ
ಮೆಕ್ಕೆಜೋಳ ಹೊಡೆಸಲು ಮುಂದಾಗಿದ್ದ ರೈತರಿಗೆ, ರಾಗಿ ಬೆಳೆ, ಬತ್ತದ ಬೆಳೆ ಕೈಗೆ ಬಂದ ರೈತರಿಗೆ ಜೋರು ಮಳೆ, ಆಲಿಕಲ್ಲು ಹೊಡೆತದಿಂದಾಗಿ ಸಾಕಷ್ಟುಹಾನಿಯಾಗಿದೆ. ಬಾಳೆ ತೋಟಗಳೂ ಆಲಿಕಲ್ಲು ಹೊಡೆತ, ಜೋರು ಮಳೆಯಿಂದಾಗಿ ಹಾನಿಗೆ ತುತ್ತಾಗಿವೆ. ಜೋರು ಮಳೆಯಿಂದಾಗಿ ತೋಟದ ಬೆಳೆಗಳು ಚೇತರಿಸಿಕೊಂಡಿದ್ದು, ಬಿತ್ತನೆ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.