ಗೋಣಿಕೊಪ್ಪ ಪರಿಹಾರ ಕಿಟ್ ವಿತರಣೆ ವಿಚಾರದಲ್ಲಿ ಮಾನವ ಹಕ್ಕು ಸಮಿತಿ ಪದಾಧಿಕಾರಿಗಳು ಅಧಿಕಾರಿಗಳ ಜೊತೆ ಗಲಾಟೆ ಮಾಡಿಕೊಂಡ ಘಟನೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಪರಿಹಾರ ಕೇಂದ್ರದಲ್ಲಿ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು.
ಮಡಿಕೇರಿ(ಆ.18): ಗೋಣಿಕೊಪ್ಪ ಪರಿಹಾರ ಕಿಟ್ ವಿತರಣೆ ವಿಚಾರದಲ್ಲಿ ಮಾನವ ಹಕ್ಕು ಸಮಿತಿ ಪದಾಧಿಕಾರಿಗಳು ಅಧಿಕಾರಿಗಳ ಜೊತೆ ಗಲಾಟೆ ಮಾಡಿಕೊಂಡ ಘಟನೆ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಪರಿಹಾರ ಕೇಂದ್ರದಲ್ಲಿ ನಡೆದಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರುವಂತಾಯಿತು.
ಪರಿಹಾರ ಕೇಂದ್ರಕ್ಕೆ ಆಗಮಿಸಿದ ಮಾನವ ಹಕ್ಕು ಸಮಿತಿಯ ಪ್ರಮುಖರಾದ ಶಾಂತಿ ಅಚ್ಚಪ್ಪ, ಕುಸುಮಾವತಿ ಅವರು ಪಾಲಿಬೆಟ್ಟರಸ್ತೆ ಸೇತುವೆ ಸಮೀಪದ ಸಂತ್ರಸ್ತರಿಗೆ ಕೂಡಲೇ ಪರಿಹಾರ ಕಿಟ್ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ನೋಡೆಲ್ ಅಧಿಕಾರಿ ಸೀತಾಲಕ್ಷ್ಮಿ, ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಹರಿಹಾಯ್ದರು.
undefined
ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸ್ ಉಪನಿರೀಕ್ಷಕ ಶ್ರೀಧರ್ ಅವರ ಮೇಲೂ ಅನಾವಶ್ಯಕವಾಗಿ ಕಿರುಚಾಡಿದರು. ನಾನು ಸಂತ್ರಸ್ತೆ ನನಗೂ ತಕ್ಷಣ ಪರಿಹಾರ ಕಿಟ್ ವಿತರಿಸಬೇಕು ಎಂದು ಪೊನ್ನಮ್ಮ ಹಠ ಮಾಡಿದರು.
ಮಡಿಕೇರಿ: ಜಿಲ್ಲೆಯಾದ್ಯಂತ ಮಳೆ ಇಳಿಕೆ
ಅಲ್ಲದೇ ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದರು. ಇದನ್ನು ಸಹಿಸಲಾಗದೆ ನೋಡೆಲ್ ಅಧಿಕಾರಿ ಸೀತಾಲಕ್ಷ್ಮಿ ಪರಿಸ್ಥಿತಿ ತಣ್ಣಗಾಗುವವರೆಗೂ ಪೊಲೀಸ್ ಠಾಣೆಯಲ್ಲಿಯೇ ಕುಳಿತರು. ನಂತರ, ಕುಸುಮಾವತಿ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಸಿ.ಕೆ.ಬೋಪಣ್ಣ, ಗ್ರಾಪಂ ಸದಸ್ಯ ಜೆ.ಕೆ.ಸೋಮಣ್ಣ, ಮುರುಗ ಉಪಸ್ಥಿತರಿದ್ದರು.