
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಘಟಿಕೋತ್ಸವದಲ್ಲಿ ಪುತ್ರ ಚಿನ್ನದ ಪದಕ ಪಡೆಯುವ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳಲು ಮಧ್ಯಪ್ರದೇಶದಿಂದ ಬಂದಿದ್ದ ತಂದೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಕಲಬುರಗಿಯಲ್ಲಿ ನಡೆದಿದೆ.
ಸಿಯುಕೆಯಲ್ಲಿ ಅಧ್ಯಯನ ಮಾಡುತ್ತಿರುವ ಮಧ್ಯಪ್ರದೇಶದ ಉಜ್ಜಯಿನಿ ನಿವಾಸಿ ದಿವ್ಯಾಂಶು ಸಕ್ಸೇನಾ ಎಂಬ ವಿದ್ಯಾರ್ಥಿ ಇಲೆಕ್ಟಾನಿಕ್ಸ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದು ಡಬ್ಬಲ್ ಗೋಲ್ಡ್ ಮೆಡಲ್ ಬಾಚಿಕೊಂಡಿದ್ದ. ಬುಧವಾರ ನಡೆದ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ಅವರಿಂದ ಚಿನ್ನದ ಪದಕ ಪಡೆಯಬೇಕಿತ್ತು. ಆದರೆ, ಸಮಾರಂಭಕ್ಕೆ 4 ಗಂಟೆ ಬಾಕಿ ಇರುವಾಗಲೇ ದಿವ್ಯಾಂಶು ತಂದೆ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.
ಮಗನ ಚಿನ್ನದ ನಗು ಕಣ್ಣು ತುಂಬಿಕೊಳ್ಳಲು ಮಧ್ಯಪ್ರದೇಶದ ಉಜ್ಜಯಿನಿಯಿಂದ ಕಲಬುರಗಿಗೆ ಬಂದಿದ್ದ ತಂದೆ ಶಿವಕುಮಾರ್ ಹಾಗೂ ತಾಯಿ ಮಾಲತಿ ಅವರು ನಗರದಿಂದ 18 ಕಿ.ಮೀ. ದೂರದ್ಲಲಿರುವ ವಿವಿಯ ಕ್ಯಾಂಪಸ್‌ಗೆ ಬರುವಾಗ ಅವರು ಪ್ರಯಾಣಿಸುತ್ತಿದ್ದ ಆಟೋ ಪಲ್ಟಿ ಹೊಡೆದಿದ್ದು, ದುರಂತದಲ್ಲಿ ಶಿವಕುಮಾರ್ ತಲೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿನ್ನದ ಪಕಗಳಿಗೆ ಕೊರಳಿಗೆ ಹಾಕಿಕೊಂಡು ಸಂಭ್ರಮಿಸಬೇಕಿದ್ದ ದಿವ್ಯಾಂಶು ತಂದೆ ಶವದ ಮುಂದೆ ಕಣ್ಣೀರು ಹಾಕುವ ದುರಂತ ಕಂಡು ಆತನ ಸಹಪಾಠಿಗಳು ಸಹ ಕಣ್ಣೀರು ಹಾಕಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಮಹಿಳಾ ಮೀಸಲಾತಿ ವಿರೋಧಿ ಪಕ್ಷ : ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಇದನ್ನೂ ಓದಿ : ಬೆಂಗಳೂರು ನಗರದಲ್ಲಿ ಅಸಹನೀಯ ಬೇಸಿಗೆ, ಹೀಟ್ ಸ್ಟ್ರೋಕ್: ಅಂಗಾಂಗ ವೈಫಲ್ಯ ಭೀತಿ!