ಚಿಕ್ಕಮಗಳೂರಿನಲ್ಲಿ ಮನೆ ಮೇಲೆ ದಾಳಿ ಮಾಡಿದ ಪೊಲೀಸರು ಅಕ್ರಮ ಮಾಲನ್ನು ವಶಪಡಿಸಿಕೊಂಡಿದ್ದಲ್ಲದೇ ತಂದೆ ಮಗಳನ್ನು ಅರೆಸ್ಟ್ ಮಾಡಿದ್ದಾರೆ.
ಕಡೂರು (ಸೆ.25): ಮಾರಾಟ ಉದ್ದೇಶದಿಂದ ಮನೆಯಲ್ಲಿ ಗಾಂಜಾ ಸೊಪ್ಪು ದಾಸ್ತಾನು ಮಾಡಿದ್ದ ಇಬ್ಬರನ್ನು ಕಡೂರು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಗುರುವಾರ ಖಚಿತ ಮಾಹಿತಿ ಮೇರೆಗೆ ಸಬ್ ಇನ್‌ಸ್ಪೆಕ್ಟರ್ ವಿಶ್ವನಾಥ್ ಮತ್ತು ಸಿಬ್ಬಂದಿ ಪಟ್ಟಣದ ಈದ್ಗಾ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದರು. ವಿಜಯಮ್ಮ (40) ಎಂಬಾಕೆಯನ್ನು ಬಂಧಿಸಿ ಮನೆಯಲ್ಲಿದ್ದ 960 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ತಂದೆ ಜಯಣ್ಣ (65) ಎಂಬವರನ್ನು ಬಂಧಿಸಲಾಗಿದೆ. ವಶಪಡಿಸಿಕೊಂಡ ಗಾಂಜಾ ಸೊಪ್ಪಿನ ಬೆಲೆ ಸುಮಾರು .22 ಸಾವಿರ ಎನ್ನಲಾಗಿದೆ.
ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್ .
ಪಟ್ಟಣದ ಈದ್ಗಾ ನಗರದಲ್ಲಿ ಗಾಂಜಾವನ್ನು ವ್ಯಕ್ತಿಯೊಬ್ಬ ಚಿಕ್ಕ ಚಿಕ್ಕ ಪ್ಯಾಕ್ ಮಾಡಲು ಗಾಂಜಾ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಸುಳಿವು ಸಿಕ್ಕಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಕಾದು ಆರೋಪಿಗಳನ್ನು ಮಾಲು ಸಮೇತ ದಸ್ತಗಿರಿ ಮಾಡಲಾಗಿದೆ. ಗಾಂಜಾ ಮತ್ತಿತರ ನಿಷೇಧಿತ ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕಾಗಿ ಪೊಲೀಸ್ ಸಿಬ್ಬಂದಿ ಸದಾ ಸಿದ್ಧ ಎಂದು ಪಿಎಸ್‌ಐ ವಿಶ್ವನಾಥ್ ತಿಳಿಸಿದರು.
ಸ್ಥಳ ಮಹಜರು ವೇಳೆ ಪತ್ರಾಂಕಿತ ಅಧಿಕಾರಿಯಾಗಿ ತಾಪಂ ಇಓ ಡಾ.ದೇವರಾಜ ನಾಯ್‌್ಕ, ಮಲ್ಲೇಶ್ವರ ಪಿಡಿಒ ಬಸವರಾಜ್ ನಾಯ್ಕ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.