ಬಸವನಬಾಗೇವಾಡಿ: SSLCಯಲ್ಲಿ ಶೇ.96 ಅಂಕ ಪಡೆದಿದ್ದ ಬಾಲಕ ಶವವಾಗಿ ಪತ್ತೆ

By Kannadaprabha NewsFirst Published Sep 25, 2020, 2:40 PM IST
Highlights

ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ| ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಸಮೀಪದ ಚನ್ನಿಹಳ್ಳದಲ್ಲಿ ಪತ್ತೆ| ಬಾಲಕನನ್ನ ಅಪಹರಣ ಮಾಡಲಾಗಿದೆ ಎಂದು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದ ಬಾಲಕನ ತಂದೆ| 

ಬಸವನಬಾಗೇವಾಡಿ(ಸೆ.25):ಕಳೆದ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಸಮೀಪದ ಚನ್ನಿಹಳ್ಳದಲ್ಲಿ ಗುರುವಾರ ಪತ್ತೆಯಾಗಿದ್ದಾನೆ.

ಬಸವನಬಾಗೇವಾಡಿ ತಾಲೂಕಿನ ನರಸಲಗಿ ತಾಂಡಾದ ಉಮೇಶ ನಾಮದೇವ ರಾಠೋಡ (16) ಮೃತ ಬಾಲಕ. ಸೆ.20ರಂದು ಶೌಚಕ್ಕೆ ಹೋಗುತ್ತೇನೆಂದು ಹೋದವ ತಿರುಗಿ ಬಂದಿರಲಿಲ್ಲ. ಈತ ನಾಲತವಾಡದ ಮೊರಾರ್ಜಿ ವಸತಿ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.96 ಅಂಕ ಪಡೆದಿದ್ದ. ಇದೀಗ ವಿಜಯಪುರದ ಮೊರಾರ್ಜಿ ವಸತಿ ಶಾಲೆಯಲ್ಲಿ ಪ್ರಥಮ ವರ್ಷದ ಪಿಯುಸಿಗೆ ಪ್ರವೇಶ ಪಡೆದಿದ್ದ. ಈತನನ್ನು ಅಪಹರಣ ಮಾಡಲಾಗಿದೆ ಎಂದು ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಬಾಲಕನ ತಂದೆ ನಾಮದೇವ ರಾಠೋಡ ದೂರು ನೀಡಿದ್ದರು. ಈತನ ಪತ್ತೆಗಾಗಿ ಪೊಲೀಸರು ಶೋಧ ನಡೆಸಿದ್ದರು. ಆದರೆ, ಗುರುವಾರ ತಾಂಡಾದ ಸಮೀಪದಲ್ಲಿರುವ ಚನ್ನಿಹಳ್ಳದ ಹತ್ತಿರ ಬೇವಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಸದನದಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್

ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ, ಸಿಪಿಐ ಸೋಮಶೇಖರ ಜುಟ್ಟಲ, ಪಿಎಸ್‌ಐ ಚಂದ್ರಶೇಖರ ಹೆರಕಲ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
 

click me!