ಕನಕಪುರ: ಕುರಿ ತೊಳೆಯಲು ಹೋಗಿ ಕೆರೆಯಲ್ಲಿ ಮುಳುಗಿ ತಂದೆ-ಮಗ ಸಾವು

By Kannadaprabha News  |  First Published Jan 6, 2024, 10:00 PM IST

ರಾಜು, ಪ್ರಸನ್ನ ಮೃತ ದುರ್ದೈವಿಗಳು. ಇವರಿಬ್ಬರು ಕುರುಬರಹಳ್ಳಿ ಗ್ರಾಮದ ಬಳಿಯ ಕೆರೆಯಲ್ಲಿ ಸಂಜೆ ಕುರಿಯ ಮೈತೊಳೆಯಲು ಹೋಗಿದ್ದಾರೆ. ಈ ವೇಳೆ ರಾಜು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ತಂದೆಯನ್ನು ಕಾಪಾಡಲು ಹೋದ ಮಗ ಸಹ ನೀರು ಪಾಲಾಗಿದ್ದಾನೆ.


ಕನಕಪುರ(ಜ.06):  ಕುರಿ ತೊಳೆಯಲು ಹೋಗಿ ತಂದೆ-ಮಗ ಕೆರೆಯಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತಾಲೂಕಿನ ಕುರುಬರಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಜು(50), ಪ್ರಸನ್ನ(22) ಮೃತ ದುರ್ದೈವಿಗಳು. ಇವರಿಬ್ಬರು ಕುರುಬರಹಳ್ಳಿ ಗ್ರಾಮದ ಬಳಿಯ ಕೆರೆಯಲ್ಲಿ ಸಂಜೆ ಕುರಿಯ ಮೈತೊಳೆಯಲು ಹೋಗಿದ್ದಾರೆ. ಈ ವೇಳೆ ರಾಜು ಕಾಲು ಜಾರಿ ಕೆರೆಗೆ ಬಿದ್ದಿದ್ದಾರೆ. ತಂದೆಯನ್ನು ಕಾಪಾಡಲು ಹೋದ ಮಗ ಸಹ ನೀರು ಪಾಲಾಗಿದ್ದಾನೆ. ಅಪ್ಪ ಮಗ ಇಬ್ಬರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Tap to resize

Latest Videos

ಶ್ರೀಕಾಂತ್ ಪೂಜಾರಿ ಒಬ್ಬನೇನ ಹಿಂದೂ?: ಸಚಿವ ಪರಮೇಶ್ವರ್

ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಸಾತನೂರು ಠಾಣಾ ಪೊಲೀಸರು ಅಗ್ನಿಶಾಮಕ ಸಿಬ್ಬಂದಿ ನೆರವಿನಿಂದ ಇಬ್ಬರ ಮೃತ ದೇಹವನ್ನು ಹೊರ ತೆಗೆದು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

click me!