
ಚೆನ್ನರಾಯಪಟ್ಟಣ(ಜ.06): ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಪಕ್ಕಕ್ಕೆ ಸರಿದ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ವೊಂದು ರಸ್ತೆ ಬದಿಯ ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದು ಮಗುಚಿ ಬಿದ್ದ ಘಟನೆ ಇಲ್ಲಿಯ ಗೌಡಗೆರೆ ಬಳಿ ನಡೆದಿದೆ. ಪರಿಣಾಮ ನಾಲ್ವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಗೌಡಗೆರೆ ಬಳಿ ಬಸ್ಸನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಮುಂದೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಯುವುದ ತಪ್ಪಿಸಲು ಹೋಗಿ ಬಸ್ ಅನ್ನು ಪಕ್ಕ ತಿರುಗಿಸಿದ ಪರಿಣಾಮ ಬಸ್ ರಸ್ತೆಯ ಎಡಬದಿಯಲ್ಲಿದ್ದ ಸಿಮೆಂಟ್ ಕಟ್ಟೆಗೆ ಡಿಕ್ಕಿ ಹೊಡೆದು ಮುಗುಚಿ ಬಿದ್ದಿದೆ. ಬಸ್‌ನಲ್ಲಿದ್ದ ಶಿಲ್ಪಾ ಅವರ ಬಲಕಾಲು, ಬಲಗೈ, ಮೈಕೈಗೆ ಪೆಟ್ಟಾಗಿದ್ದು, ಬಸ್‌ನಲ್ಲಿದ್ದ ಬಸವೇಗೌಡ, ಲೋಕೇಶ್, ಬಸ್ ಕಂಡಕ್ಟರ್ ಮಲ್ಲಪ್ಪ ಅವರಿಗೆ ಗಾಯಗಳಾಗಿವೆ.
Belagavi Accident: ಬೆಳಗಾವಿಯಲ್ಲಿ ಭೀಕರ ಅಪಘಾತ: 50ಮೀ ಮೇಲಿಂದ ಹಾರಿ ಬಿದ್ದ ಯುವತಿ..ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಸ್ಥಳೀಯ ಜನರು ಅವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತಕ್ಕೆ ಕಾರಣವಾದ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.