ಮೇಲ್ಮನೆಗೆ ತೆರಳಲು ರೈತ ಸಂಘ ಸಿದ್ದತೆ : ಅಭ್ಯರ್ಥಿ ಆಯ್ಕೆ

Kannadaprabha News   | Asianet News
Published : Jul 28, 2021, 10:56 AM IST
ಮೇಲ್ಮನೆಗೆ ತೆರಳಲು ರೈತ ಸಂಘ ಸಿದ್ದತೆ : ಅಭ್ಯರ್ಥಿ ಆಯ್ಕೆ

ಸಾರಾಂಶ

ಮುಂಬರುವ ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ರಾಜ್ಯ ರೈತ ಸಂಘ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಿದ್ಧತೆ ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್‌ ಕೆಂಪೂಗೌಡ ಮಾಹಿತಿ

ಕೆ.ಆರ್‌ ಪೇಟೆ (ಜು.28): ಮುಂಬರುವ ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆಯಲ್ಲಿ ರಾಜ್ಯ ರೈತ ಸಂಘ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಎಲ್‌ ಕೆಂಪೂಗೌಡ ತಿಳಿಸಿದರು. 

ಪಟ್ಟಣದ ಬಿಜಿಎಸ್ ಸಂಸ್ಥೆ ಅವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಗ್ರಾಮದವರಾದ ಸಿವಿಲ್ ಎಂಜಿನಿಯರಿಂಗ್ ಒದವೀಧರ ಎನ್. ಪ್ರಸನ್ನ ರಯತಸಂಘದ ಅಭ್ಯರ್ಥಿಯಾಗಿದ್ದಾರೆ ಎಂದು ಪ್ರಕಟಿಸಿದರು.

ಸುಮಲತಾಗೆ ಸಿಕ್ತು ಮತ್ತೋರ್ವ ಮುಖಂಡನ ಬೆಂಬಲ : ಸಂಸದೆ ಕಾರ್ಯಕ್ಕೆ ಶ್ಲಾಘನೆ

ಮೇಲ್ಮನೆ ಎನ್ನುವುದು ಚಿಂತಕರ ಚಾವಡಿ. ಆದರೆ ಮೇಲ್ಮನೆಯಲ್ಲಿಂದು ರಾಜಕಾರನಿಗಳೇ ತುಂಬಿಕೊಂಡಿದ್ದಾರೆ. ಅಲ್ಲಿಯೂ ಕೇವಲ ರಾಜಕೀಯ ಚರ್ಚೆಗಳೇ ನಡೆಯುತ್ತಿವೆ. ನಾಡಿನ ರೈತರ, ಶೋಷಿತರ, ಶಿಕ್ಷಕರ ಮತ್ತು ನಿರುದ್ಯೋಗಿ ಪದವೀಧರರ ಸಮಸ್ಯೆಗಳ ನೈಜ ಅನಾವರಣವಾಗುತ್ತಿಲ್ಲ. 

ರಾಜಕೀಯ ಪಕ್ಷಗಳ ಪ್ರತಿನಿಧಿಗಳೇ ಶಿಕ್ಷಕರ ಮತ್ತು ಪದವೀಧರರ ಕ್ಚೇತ್ರವನ್ನು ಪ್ರತಿನಿಧಿಸುತ್ತಿರುವುದಿರಮ ಮೆಲ್ಮನೆ ಸಮಸ್ಯೆಗಳ ಹೋರಾಟದ ದವನಿಯಾಗಿ ಕೆಲಸ ಮಾಡುತ್ತಿಲ್ಲ. ಇದನ್ನು ಮನಗಂಡು ರಾಜ್ಯ ರೈತ  ಸಂಘ ರೈತ ಪ್ರತಿನಿಧಿಯೊಬ್ಬರನ್ನು ಮೇಲ್ಮನೆಗೆ ಕಳುಹಿಸಲು ನಿರ್ಧರಿಸಿದೆ ಎಂದರು.

PREV
click me!

Recommended Stories

ಇಂದು 20,000 ರೈತರ ಜತೆ ಬಿಜೆಪಿ ಸುವರ್ಣಸೌಧ ಮುತ್ತಿಗೆ
ಡ್ರಗ್‌ ಪೆಡ್ಲರ್‌ಗಳಿಗೆ ಬೆಂಗಳೂರೇ ದೊಡ್ಡ ಟಾರ್ಗೆಟ್‌: ಚಾಕೋಲೆಟ್‌, ಕಾಫಿ ಪುಡಿ ಹೆಸರಲ್ಲಿ ಡ್ರಗ್ಸ್‌ ಸಾಗಾಟ