Kolar, Milk Price: ಪ್ರತಿ ಲೀಟರ್ ಹಾಲಿನ ಬೆಲೆ 10 ರೂಪಾಯಿ ಹೆಚ್ಚಿಸಿ, ರೈತರಿಂದ ಬೃಹತ್ ಪ್ರತಿಭಟನೆ

Published : Aug 19, 2026, 04:45 PM IST
Kolar Farmers Protest

ಸಾರಾಂಶ

ಬರಗಾಲ ಮತ್ತು ಮೇವಿನ ಬೆಲೆ ಏರಿಕೆಯಿಂದ ಸಂಕಷ್ಟದಲ್ಲಿರುವ ಕೋಲಾರದ ರೈತರು, ಹಾಲಿನ ದರವನ್ನು ಲೀಟರ್‌ಗೆ 10 ರೂ. ಹಾಗೂ ಪ್ರೋತ್ಸಾಹಧನವನ್ನು 7 ರೂ.ಗೆ ಹೆಚ್ಚಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಈಗಿನ ದರ ಹಸುಗಳ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದು, ಸರ್ಕಾರದ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಕೋಲಾರ: ರಾಜ್ಯದಲ್ಲಿ ಮಳೆ ಕೈಕೊಟ್ಟಿರುವ ಕಾರಣ ಹೈನುಗಾರಿಕೆ ಮಾಡುವುದು ಕಷ್ಟವಾಗಿದೆ. ಸರ್ಕಾರ ಈಗ ಕೊಡುತ್ತಿರುವ ಹಾಲಿನ ಬೆಲೆಗೆ ಹಸುಗಳಿಗೆ ಮೇವು ಕೊಡಲು ಸಹ ಆಗುತ್ತಿಲ್ಲ. ಆದ್ದರಿಂದ ಹಾಲಿನ ಬೆಲೆಯನ್ನು ಲೀಟರ್‌ಗೆ 10 ರೂಪಾಯಿ ಹಾಗೂ ಸರ್ಕಾರ ಈ ನೀಡುತ್ತಿರುವ ಪ್ರೋತ್ಸಾಹ ದರವನ್ನು ಐದು ರೂಪಾಯಿಯಿಂದ 7 ರೂಪಾಯಿಗೆ ಹೆಚ್ಚಳ ಮಾಡುವಂತೆ ರೈತರು ಪ್ರತಿಭಟನೆ ನಡೆಸಿದ್ದಾರೆ.

ಕೋಲಾರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ್ದ ಸಾವಿರಾರು ರೈತರು, ಹಾಲಿನ ಬೆಲೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಸರ್ಕಾರ ಈಗ ಪ್ರತಿ ಲೀಟರ್ ಹಾಲಿಗೆ ಕೇವಲ 35.40 ರೂಪಾಯಿ ನೀಡುತ್ತಿದೆ. ಇದು ರೈತರಿಗೆ ಸಾಕಾಗುತ್ತಿಲ್ಲ. ಕೋಲಾರ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರದ ಸ್ಥಿತಿ ಎದುರಾಗಿದೆ. ಹಸುಗಳಿಗೆ ಮೇವು ಕೂಡ ಸಿಗುತ್ತಿಲ್ಲ. ಒಂದಡೆ ಬರ ಮತ್ತೊಂದಡೆ ಪಶು ಆಹಾರ ಬೆಲೆ ಗಗನಕ್ಕೇರಿದೆ. ಇದರಿಂದ ಹೈನೋದ್ಯಮ ಮಾಡಲು ಕಷ್ಟವಾಗುತ್ತಿದೆ ಎಂದು ಆಕ್ರೋಶ ತಮ್ಮ ಅಳಲು ತೊಡಿಕೊಂಡಿದ್ದಾರೆ.

ಹಾಲಿನ ಬೆಲೆ 10 ರೂಪಾಯಿ, ಪ್ರೋತ್ಸಾಹಧನ 7 ರೂಪಾಯಿಗೆ ಹೆಚ್ಚಿಸಿ

ಕೋಮುಲ್ ಆಡಳಿತ ಮಂಡಳಿಯ ನಿರ್ದೇಶಕರು ಸೇರಿದಂತೆ ಸಾವಿರಾರು ರೈತರು ಪ್ರತಿಘಟನೆಯಲ್ಲಿ ಭಾಗಿಯಾಗಿ, ಹಾಲಿನ ದರ ಏರಿಕೆ ಮಾಡುವಂತೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿ ಲೀಟರ್ ಹಾಲಿನ ಮೇಲೆ 10 ರೂಪಾಯಿ ಮತ್ತು ಈಗಿರುವ 5 ರೂಪಾಯಿ ಪೋತ್ಸಾಹ ಧನ 7 ರೂಪಾಯಿ ಏರಿಕೆ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ಅವರು ಹಾಲಿನ ದರ ಏರಿಕೆಯನ್ನು ಸಮರ್ಥನೆ ಮಾಡಿಕೊಂಡು, ನನ್ನ ಪ್ರಕಾರ ಹಾಲಿನ ದರ ಇನ್ನು ಜಾಸ್ತಿ ಮಾಡಬೇಕು ಎಂದು ಹೇಳಿದ್ದರು. 2024ರ ಜೂನ್‌ನಲ್ಲಿ ಸರ್ಕಾರ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ಎರಡು ರೂಪಾಯಿ ಹೆಚ್ಚಳ ಮಾಡಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್ ಅವರು, ನೀರಿನ ಬೆಲೆ ಲೀಟರ್ಗೆ 25 ರೂಪಾಯಿ ಆಗಿದೆ. ಆದರೆ ಹಾಲಿನ ಬೆಲೆ ಮತ್ತಷ್ಟು ಹೆಚ್ಚಳ ಮಾಡಬೇಕು ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ರೈತರ ಒತ್ತಡ ಮೇಲೆ ಈಗ ಹಾಲಿನ ಬೆಲೆ ಏರಿಕೆ ಮಾಡಿದ್ದೇವೆ. ಕೆಎಂಎಫ್ ಎಂದರೆ ರೈತರ ಒಕ್ಕೂಟ, ನನ್ನ ಪ್ರಕಾರ ಹಾಲಿನ ದರ ಇನ್ನು ಜಾಸ್ತಿ ಮಾಡಬೇಕು. ಯಾರು ಏನೇ ಮಾತನಾಡಿ ಟೀಕೆ ಮಾಡಿದರೂ ರೈತರೆಲ್ಲರೂ ಹಸುಗಳನ್ನು ಮಾರಾಟ ಮಾಡುವ ಸ್ಥಿತಿಗೆ ಬಂದಿದ್ದಾರೆ ಎಂದು ಹೇಳಿದ್ದರು.

ಸದ್ಯ ಡಿಕೆ ಶಿವಕುಮಾರ್ ಅವರೇ ಸಿಎಂ ಆಗಿದ್ದು, ಡಿಕೆಶಿ ಅವರ ಸಹೋದರ, ಮಾಜಿ ಸಂಸದ ಡಿಕೆ ಸುರೇಶ್ ಬಮುಲ್ ಅಧ್ಯಕ್ಷರಾಗಿದ್ದಾರೆ. ಈ ಕಾರಣದಿಂದ ರೈತರ ಬೇಡಿಕೆಗೆ ಸಿಎಂ ಯಾವ ರೀತಿ ಸ್ಪಂಧನೆ ನೀಡುತ್ತಾರೆ ಅಂತ ಕಾದು ನೋಡಬೇಕಿದೆ.

ಕೆಎಂಎಫ್ ಮೇಲೆ ಕಣ್ಣಿಟ್ಟ ಮಾಲೂರು ಶಾಸಕ

ಮಂಗಳವಾರ ಸಿಎಂ ಡಿಕೆ ಶಿವಕುಮಾರ್ ಅವರನ್ನು ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಶಾಸಕರು ಭೇಟಿ ಮಾಡಿದ್ದರು. ಈ ವೇಳೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ ಕೆಎಂಎಫ್ ಅಧ್ಯಕ್ಷ ಗಿರಿ‌ ಮೇಲೆ ಕಣ್ಣಿಟ್ಟಿರುವ ಮಾಲೂರು ಶಾಸಕ ನಂಜೇಗೌಡ ಅವರು, ಕೆಎಂಎಫ್ ಸ್ಥಾನ ಕೋಲಾರ ಜಿಲ್ಲೆಗೆ ಕೊಡುವಂತೆ ಒತ್ತಾಯ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವ ಮುನಿಯಪ್ಪ ವಿರುದ್ಧ ಶಾಸಕರ ದೂರು!

ಸಚಿವ ಸ್ಥಾನ ನಮ್ಮ ಜಿಲ್ಲೆಗೆ ಕೊಡಲಿಲ್ಲ ಎಂದು ಬೇಸರ ಹೊರ ಹಾಕಿದ ಶಾಸಕರು, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಬೇಡಿಕೆ ಇಟ್ಟಿದ್ದರಂತೆ. ಅದರಲ್ಲೂ ಶಾಸಕರು ಕೆಎಂಎಫ್ ಅಧ್ಯಕ್ಷರ ಸ್ಥಾನ ಶಾಸಕ ನಂಜೇಗೌಡಗೆ ಕೊಡಿ ಎಂದು ಒತ್ತಾಯಿಸಿದ್ದರಂತೆ. ಸಿಎಂ ಕೂಡ ಈ ವಿಚಾರವಾಗಿ ಚರ್ಚೆ ಮಾಡೋಣ ಎಂದು ಹೇಳಿದ್ದು, ಜೊತೆಗೆ ಶಾಸಕರಾದ ನಾರಾಯಣಸ್ವಾಮಿ, ಸುಬ್ಬಾರೆಡ್ಡಿಗೆ ನಿಗಮ ಮಂಡಳಿ ಅಧ್ಯಕ್ಷ ಹುದ್ದೆ ನೀಡಲು ಸಿಎಂ ನಿರ್ಧಾರ ಮಾಡಿದ್ದರಂತೆ. ಇದೇ ವೇಳೆ ಸಚಿವ ಕೆ ಎಚ್ ಮುನಿಯಪ್ಪ ಜಿಲ್ಲೆಯ ಹಸ್ತಕ್ಷೇಪದ ಬಗ್ಗೆಯೂ ಶಾಸಕರ ದೂರು ನೀಡಿದ್ದು, ಆಯಾ ಜಿಲ್ಲೆಯ ಉಸ್ತುವಾರಿಗಳು ಬಿಟ್ಟರೆ ಮೂರನೇಯವರಿಗೆ ಅವಕಾಶವಿಲ್ಲ ಎಂದು ಸಿಎಂ ಹೇಳಿದ್ದಾರಂತೆ.

PREV
Read more Articles on
click me!

Recommended Stories

ಯಾದಗಿರಿಯಲ್ಲಿ ಹೆತ್ತ ತಂದೆಯಿಂದಲೇ ರಾಕ್ಷಸೀ ಕೃತ್ಯ.. ಇಬ್ಬರು ಮಕ್ಕಳನ್ನ ಕಾಲುವೆಗೆ ಎಸೆದು ಜೀವ ತೆಗೆದ ಅಪ್ಪ..
15 ಲಕ್ಷ ಗಿಡ ನೆಡುವ ಗಿನ್ನೆಸ್‌ ದಾಖಲೆ ಮಾಡಲು ಹೋಗಿ 12.5 ಕೋಟಿ ಖರ್ಚು ಮಾಡಿದ ಬಿಡಿಎ!