ತಹಶೀಲ್ದಾರ್ ಚೇಂಬರ್ ಎದುರೆ ಏಕವಚನದಲ್ಲಿ ಬೈದಾಡಿಕೊಂಡ ಅನ್ನದಾತರು, ಅಧಿಕಾರಿಗಳ ವಿಳಂಭ ಧೋರಣೆಗೆ ಛೀಮಾರಿ ಹಾಕಿದ ರೈತರು, ಶಿರಸ್ತೆದಾರ ರಮೇಶ ಬಂಡಿ ಹೆಸರಲ್ಲಿ ಕಂಗಾಲಾದ ಮುರಗೇಶ
ವರದಿ: ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ಮೇ.30): ವಿದ್ಯಾಕಾಶಿ ಧಾರವಾಡದಲ್ಲಿ ಅಧಿಕಾರಿಗಳು ಮತ್ತು ಏಜಂಟರು ಮಾಡಿದ್ದೇ ಆಟವಾಗಿದೆ. ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಏನೆ ಕೆಲಸ ಆಗಬೇಕು ಎಂದರೆ ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರವೇ ಕೆಲಸಗಳು ಆಗುತ್ತಿವೆ ಎಂದು ರೈತರು ಧಾರವಾಡ ತಹಶೀಲ್ದಾರ್ ಕಚೇರಿ ಎದುರು ರೈತ ಮುರಗೆಪ್ಪ, ಏಜಂಟರೊಬ್ಬರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ(ಸೋಮವಾರ) ಸಂಜೆ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಧಾರವಾಡದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಪಹಣಿ ಪತ್ರದಲ್ಲಿ ಸರಕಾರ ಎಂದು ನಮೂದು ಇರುವ ಹಿನ್ನಲೆಯಿಂದ ಮುರಗೆಪ್ಪ ಸೇರಿದಂತೆ ಧಾರವಾಡ ತಾಲೂಕಿನ ಶಿಬಾರಗಟ್ಟಿ, ಮತ್ತು ಅಮ್ಮಿನಭಾವಿ ರೈತರು ಸರಕಾರಿ ಎಂದು ನಮೂದಾಗಿರುವ ಹೆಸರನ್ನು ಕಡಿಮೆ ಮಾಡಲು ಅಧಿಕಾರಿಗಳು ವಿಳಂಭ ದೋರಣೆ ಮಾಡುತ್ತಿದ್ದಾರೆ. ಇನ್ನು ಅಧಿಕಾರಿಗಳ ಕೈ ಬಿಸಿ ಮಾಡಿದಾಗ ಮಾತ್ರ ಅಧಿಕಾರಿಗಳು ಕೆಲಸವನ್ನ ಮಾಡುತ್ತಿದ್ದಾರೆ ಎಂದು ತಹಶೀಲ್ದಾರ್ ಕಚೇರಿ ಎದುರೇ ಒಬ್ಬರಿಗೊಬ್ಬರು ಏಕ ವಚನದಲ್ಲಿ ಬೈದಾಡಿಕೊಂಡಿದ್ದಾರೆ. ಅದರಲ್ಲೂ ಶಿರಸ್ತೆದಾರ ರಮೇಶ ಬಂಡಿ ಅವರು ಉದ್ದೇಶ ಪೂರ್ವಕವಾಗಿ ಈ ರೀತಿಯಾಗಿ ಮಾಡುತ್ತಿದ್ದಾರೆ. ಅಧಿಕಾರಿಗಳು ಯಾಕೆ ಈ ವಿಳಂಬ ಧೋರಣೆ ರೀತಿಯನ್ನ ಅನುಸರಿಸುತ್ತಿದ್ದಾರೆ. ಇದರಿಂದ ರೈತರಿಗೆ ತಹಶೀಲ್ದಾರ್ ಕಚೇರಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ ಎಂದು ಕೆಲ ಅನ್ನದಾತರು ತಹಶೀಲ್ದಾರ್ ಕೋಠಡಿಯ ಎದುರೇ ಶಿರಸ್ತೆದಾರ ರಮೇಶ ಬಂಡಿಯವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಶೆಟ್ಟರ್, ನಿರಾಣಿ ಕೈಗಾರಿಕೆ ಕನಸು ಎಂ.ಬಿ. ಪಾಟೀಲ್ ಹೆಗಲಿಗೆ..!
ಏನಿದು ಪ್ರಕರಣ :
1986 ರಲ್ಲಿ ಇಂದಿರಾ ಗಾಂಧಿ ಕಾಲದಲ್ಲಿ ಉಳುವವನೆ ಒಡೆಯ ಎಂದು ಘೋಷಣೆ ಆದ ಬಳಿಕ ಕೆಲ ದೇಶಗತಿ ಮನೆಯನದವರು, ಧಣಿಗಳು ಕೆಲವೊಂದಿಷ್ಟು ಭೂಮಿಯನ್ನ ಬಿಟ್ಟು ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ರೈತರ ಹೆಸರಿಗೆ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್‌ನಲ್ಲಿ ರೈತರಂತೆ ಜಮೀನು ಆದವು. ಆದರೆ ಅಂದಿನಿಂದ ಇಂದಿನವರೆಗೆ ರೈತರ ಹೆಸರಲ್ಲಿ ಇರುವ ಪಹಣಿ ಪತ್ರದಲ್ಲಿ ಸರಕಾರ ಎಂದು ನಮೂದು ಇರುವ ಹಿನ್ನಲೆ ರೈತರು ಸರಕಾರಿ ಎಂಬ ಪದವನ್ನ ತೆಗೆಯಬೇಕು ಎಂದು ಕಳೆದ 10 ವರ್ಷದಿಂದ ಹೂರಾಟ ಮಾಡುತ್ತಲೆ ಬಂದಿದ್ದಾರೆ. ಆದರೆ ಅಧಿಕಾರಿಗಳಿಗೆ ಸರಕಾರ ಎಂಬ ಪದವನ್ನ ತೆಗೆದು ಹಾಕಲು ಮನವಿ ಮಾಡಿಕೊಂಡರೆ 9 ಎಕರೆಯಲ್ಲಿ ಕೇವಲ 4 ಎಕರೆ ಜಮೀನಿನ ಪಹಣಿಯಲ್ಲಿ ಮಾತ್ರ ತೆಗೆಯಲಾಗಿದೆ. ಇನ್ನುಳಿದ 5 ಎಕರೆ ಜಮೀನಿನಲ್ಲಿ ಸರಕಾರ ಇದೆ ಎಂದು ಅದನ್ನ ತೆಗೆಯಲು ಅಧಿಕಾರಿಗಳು ಹಿಂದೆಟು ಹಾಕುತ್ತಿದ್ದಾರೆ. ಅಧಿಕಾರಿಗಳು ಕೈ ಬಿಸಿ ಮಾಡಿದಾಗ ಮಾತ್ರ ಕೆಲಸ ಮಾಡ್ತಾರೆ ಎಂದು ಮುರಗೇಶ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.
ಇನ್ನು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರು ಧಾರವಾಡಕ್ಕೆ ಬಾರದೆ ಇರೋದಕ್ಕೆ ಅಧಿಕಾರಿಗಳಿಗೆ ಹೇಳೊರಿಲ್ಲ, ಕೇಳೋರಿಲ್ಲ, ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಅಧಿಕಾರಿಗಳು ಮಾಡಿದ್ದೇ ಆಟವಾಗಿದೆ ರೈತರು ಎಷ್ಟೇ ಬಾರಿ ತಹಶೀಲ್ದಾರ್ ಕಚೇರಿಗೆ ಅಲೆದಾಡಿ ಬೇಸತ್ತು ಹೋಗಿದ್ದಾರೆ. ಅಧಿಕಾರಿಗಳು ಹಿರಿಯ ಅಧಿಕಾರಿಗಳು ಹೇಳಿದರೆ ಮಾತ್ರ ಕೆಲಸ ಮಾಡುತ್ತಾರಾ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಇನ್ನು ಶಿರಸ್ತೆದಾರ ರಮೇಶ ಬಂಡಿ ಅವರು ಏಜಂಟರನ್ನಿಟ್ಡುಕೊಂಡು ಕೆಲಸವನ್ನ ಮಾಡುತ್ತಿದ್ದಾರೆ. ಇವರಿಗೆ ಯಾರು ಹೇಳೋರಿಲ್ಲ ಕೇಳೋರಿಲ್ಲ ಎಂದು ರೈತ, ಗ್ರಾಮ ಪಂಚಾಯತಿ ಸದಸ್ಯ ಮುರಗೇಪ್ಪ ಗಂಭೀರ ಆರೋಪವನ್ನ ಮಾಡಿದ್ದಾರೆ.
ತಹಶೀಲ್ದಾರ್ ಕಚೇರಿ ಎದುರೇ ರೈತರು ಈ ರೀತಿ ಒಬ್ಬರಿಗೊಬ್ಬರು ಏಕವನನದಲ್ಲಿ ಅವ್ಯಾವ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದಾರೆ. ಇನ್ನು ಈ ಕುರಿತು ಧಾರವಾಡ ತಹಶೀಲ್ದಾರ್ ಕಚೇರಿಯಲ್ಲಿ ಏನ್ ಆಗ್ತಾ ಇದೆ ಎಂಬುದನ್ನ ಜಿಲ್ಲಾಧಿಕಾರಿ ಗುರುದತ್ತ ಹಧಗಡೆ ಅವರು ಗಮನ ಹರಿಸಬೇಕು ಇಲ್ಲದಿದ್ದರೆ ತಹಶೀಲ್ದಾರ್ ಕಚೇರಿಗೆ ಅನ್ನದಾತರ ಬಂದು ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ತಪ್ಪಿತಸ್ಥ ಅಧಿಕಾರಿಗಳಿಗೆ ಕ್ರಮ ಕೈಗೊಂಡು ಸಮಸ್ಯೆ ಬಗೆ ಹರಿಸ್ತಾರಾ ಎಂಬುದು ಕಾದ ನೋಡಬೇಕಿದೆ.