ಧಾರವಾಡ: ಸಚಿವ ಜಗದೀಶ್ ಶೆಟ್ಟರ್‌ ಕಾರ್‌ಗೆ ಮುತ್ತಿಗೆ ಹಾಕಿದ ರೈತರು

By Suvarna NewsFirst Published Dec 7, 2019, 1:30 PM IST
Highlights

ಕೆಡಿಪಿ ಸಭೆಗೆ ಒಂದು ಗಂಟೆ ತಡವಾಗಿ ಬಂದ ಜಗದೀಶ್ ಶೆಟ್ಟರ್‌| ಬ್ಯಾಂಕ್‌ನಲ್ಲಿ ಸಾಲ ನೀಡದ ವಿಚಾರದ ಬಗ್ಗೆ ಆಕ್ರೋಷಗೊಂಡ ರೈತರು| ಸಚಿವ ಶೆಟ್ಟರ್ ವಿರುದ್ಧ ಘೋಷಣೆ ಕೂಗಿದ ರೈತರು| ಈಶ್ವರಪ್ಪ ಹೇಳಿಕೆಗೆ ನಾನೇನೂ ಪ್ರತಿಕ್ರಿಯೆ ಕೊಡಲ್ಲ ಎಂದ ಶೆಟ್ಟರ್|  

ಧಾರವಾಡ(ಡಿ.07): ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್‌ ಅವರ ಕಾರಿಗೆ ರೈತರು ಮುತ್ತಿಗೆ ಹಾಕಿದ ಘಟನೆ ನಗರದಲ್ಲಿ  ಇಂದು (ಶನಿವಾರ) ನಡೆದಿದೆ. 

ಕೆಡಿಪಿ ಸಭೆಗೆ ಒಂದು ಗಂಟೆ ತಡವಾಗಿ ಬಂದ ಹಿನ್ನೆಲೆಯಲ್ಲಿ ಕೋಪಗೊಂಡ ರೈತರು ಜಗದೀಶ್ ಶೆಟ್ಟರ್‌ ಅವರಿಗೆ ಮುತ್ತಿಗೆ ಹಾಕಿದ್ದಾರೆ. 12 ಗಂಟೆಗೆ ಸಭೆಗೆ ಆಗಮಿಸಬೇಕಿದ್ದ ಸಚಿವ ಜಗದೀಶ್ ಶೆಟ್ಟರ್, ಒಂದು ಗಂಟೆಗೆ ಆಗಮಿಸಿದ್ದರು. ಬ್ಯಾಂಕ್ ನಲ್ಲಿ ಸಾಲ ನೀಡದ ವಿಚಾರದ ಬಗ್ಗೆ ಆಕ್ರೋಷಗೊಂಡ ಜಿಲ್ಲೆಯ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ರೈತರು ಸಚಿವ ಶೆಟ್ಟರ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. 

ಬಳಿಕ ರೈತರೊಂದಿಗೆ ಸಮಾಲೋಚನೆ ನಡೆಸಿ, ಬ್ಯಾಂಕ್‌ಗಳಲ್ಲಿ ಸಾಲು ಕೊಡಿಸುವ ಕುರಿತು ಆಶ್ವಾಸನೆ ನೀಡಿದ್ದಾರೆ. ಆದರೆ, ಶೆಟ್ಟರ್ ಆಶ್ವಾಸನೆಗೆ ಅಸಮಾಧಾನ ವ್ಯಕ್ತಪಡಿಸಿದ ರೈತರು ಸಮಸ್ಯೆ ಬಗೆಹರಿಸುವಂತೆ ಶೆಟ್ಟರ್ ಜೊತೆ ರೈತರ ವಾಗ್ವಾದಕ್ಕಿಳಿದಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶೆಟ್ಟರ್ ಅವರು, ಮಾಧ್ಯಮಗಳು ಎಕ್ಸಿಟ್ ಪೋಲ್ ಸಮೀಕ್ಷೆ ಮಾಡಿವೆ. 12 ಸೀಟುಗಳು ಬರುತ್ತೆ ಬಿಜೆಪಿ ಅಂತ ಹೇಳಿವೆ. 15 ಸೀಟುಗಳಲ್ಲಿ ಬಿಜೆಪಿ ಬಂದೆ ಬರುತ್ತದೆ. ಬಿಜೆಪಿಗೆ ಹೆಚ್ಚು ಸೀಟು ಬರುತ್ತೆ, ಸಮಿಕ್ಷೆಯಲ್ಲಿ ಬಿಜೆಪಿಗೆ ಹೆಚ್ಚು ಸೀಟು ಬರ್ತಾ ಇರೋದ್ರಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮಿಕ್ಷೆಗಳಲ್ಲಿ ನಂಬಿಕೆ ಇಲ್ಲ ಅಂತಿದ್ದಾರೆ ಎಂದು ಹೇಳಿದ್ದಾರೆ. ಡಿ. 9 ರಂದು ಇದರ ಬಗ್ಗೆ ಹೆಚ್ಚಿಗೆ ಚರ್ಚೆ ಮಾಡಲಾಗುವುದು. ಕಡಿಮೆ‌ ಸೀಟುಗಳು ಬಂದ್ರೆ ಆಮೇಲೆ ಮೈತ್ರಿ ಸರಕಾರದ ಬಗ್ಗರ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ. 

ಸಚಿವ ಈಶ್ವರಪ್ಪ ಅವರು ಎಲ್ಲರಿಗೂ ಐಶ್ವರ್ಯ ರೈ ಬೇಕು ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರ ಹೇಳಿಕೆಗೆ ನಾನೇನೂ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದ್ದಾರೆ. 
 

click me!