ನಮ್ಮ ಮೆಟ್ರೋ 3ನೇ ಹಂತದ ಭೂಸ್ವಾದೀನಕ್ಕೆ ಸಿದ್ಧತೆ, 100 ಎಕರೆ ಗುರುತಿಸಿದ ಬಿಎಂಆರ್‌ಸಿಎಲ್‌

By Kannadaprabha News  |  First Published Nov 29, 2023, 10:28 AM IST

ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್‌) ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ.


 ಬೆಂಗಳೂರು (ನ.29): ನಮ್ಮ ಮೆಟ್ರೋದ ಮೂರನೇ ಹಂತದ ಯೋಜನೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್‌ಸಿಎಲ್‌) ಭೂಸ್ವಾಧೀನ ಪ್ರಕ್ರಿಯೆಗೆ ಸಿದ್ಧತೆ ನಡೆಸಿದೆ. ಪ್ರಾಥಮಿಕ ಹಂತದಲ್ಲಿ ನೂರು ಎಕರೆ ಸ್ವಾಧೀನಕ್ಕೆ ಮುಂದಾಗಿದ್ದು, ಮುಂದಿನ ಆರು ತಿಂಗಳಲ್ಲಿ ಪೂರ್ಣ ಪ್ರಕ್ರಿಯೆ ಮುಗಿಸಿಕೊಳ್ಳುವುದಾಗಿ ನಿಗಮದ ಮೂಲಗಳು ತಿಳಿಸಿವೆ.

ಮೆಟ್ರೋ ಮೂರನೇ ಹಂತದ ಯೋಜನೆ ₹15,600 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. 32.1 ಕಿ.ಮೀ. ಉದ್ದದ ಕೆಂಪಾಪುರ-ಜೆಪಿ ನಗರ (ಹೊರವರ್ತುಲ ರಸ್ತೆ) ಹಾಗೂ 12.5 ಕಿ.ಮೀ. ಉದ್ದದ ಹೊಸಹಳ್ಳಿ-ಕಡಬಗೆರೆಯಲ್ಲಿ (ಮಾಗಡಿ ರಸ್ತೆ) ನಿರ್ಮಾಣ ಆಗಲಿದೆ. ಈಗಾಗಲೇ ರಾಜ್ಯ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರ ಈ ಯೋಜನೆಯ ಜಾರಿಗೆ ಕೆಲ ಬದಲಾವಣೆಗಳನ್ನು ಸೂಚಿಸಿದೆ. ಕೇಂದ್ರ ಒಪ್ಪಿಗೆ ಬಳಿಕವೇ ಭೂಸ್ವಾಧೀನ ನಡೆಯಲಿದೆ.

Tap to resize

Latest Videos

undefined

4 ಮಾರ್ಗಗಳಲ್ಲಿ ಮೆಟ್ರೋ ಫೀಡರ್‌ ಬಸ್‌ ಹೆಚ್ಚಳ, ಯಾವೆಲ್ಲ ಮಾರ್ಗದಲ್ಲಿ ಓಡಾಡಲಿದೆ?

ನಿಗಮವು ಪ್ರಾಥಮಿಕ ಹಂತದಲ್ಲಿ ಡಿಪೋ ನಿರ್ಮಾಣಕ್ಕೆ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಪೊಲೀಸ್‌ ಠಾಣೆ ಬಳಿ 75 ಎಕರೆ ಹಾಗೂ 25 ಎಕರೆಯನ್ನು ವೈಯಡಕ್ಟ್‌ ನಿರ್ಮಾಣಕ್ಕಾಗಿ ಗುರುತಿಸಿಕೊಂಡಿದೆ.

ಆರಂಭಿಕವಾಗಿ ಬಿಎಂಆರ್‌ಸಿಎಲ್‌ ಯೋಜನಾ ವಿಭಾಗ, ಪ್ರತಿ ಹತ್ತು ಕಿ.ಮೀನಲ್ಲಿ ಆಗಬೇಕಾದ ಭೂಸ್ವಾಧೀನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಅದರಂತೆ ಯೋಜನೆ ಪ್ರಗತಿಯ ಅನುಸಾರ ಪ್ರತಿ ಹತ್ತು ಕಿಮೀಗೆ ಭೂಸ್ವಾಧೀನದ ಅಧಿಸೂಚನೆ ಪ್ರಕಟವಾಗಲಿದೆ. 

ಮೊದಲ ಹಂತದಲ್ಲಿ, ಕಾರಿಡಾರ್‌ನ ಕೆಲವು ಭಾಗಗಳಲ್ಲಿ ಡಿಪೋ ಮತ್ತು ವಾಯಡಕ್ಟ್‌ಗಳನ್ನು ನಿರ್ಮಿಸಲು 100 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದರ ಜೊತೆಗೆ BMRCL ಮೂಲಗಳು ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರು ತಿಂಗಳ ಕಾಲಮಿತಿಯನ್ನು ಅಂದಾಜು ಮಾಡಿದೆ.

click me!