Gadag: ಉಗ್ರ ಸ್ವರೂಪ ಪಡೆದ ಧರಣಿ: ರೈತರು ಪೊಲೀಸರ ಮಧ್ಯೆ ತಳ್ಳಾಟ, ನೂಕಾಟ!

By Govindaraj S  |  First Published Mar 16, 2023, 12:30 AM IST

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ರೈತರು ನಡೆಸ್ತಿದ್ದ ಹೋರಾಟದಲ್ಲಿ ತಳ್ಳಾಟ ನೂಕಾಟ ನಡೆದಿದ್ದು, ಗ್ರಾಮದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು, ರೈತರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿಯೂ ನಡೆದಿದೆ. 


ಗದಗ (ಮಾ.16): ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ರೈತರು ನಡೆಸ್ತಿದ್ದ ಹೋರಾಟದಲ್ಲಿ ತಳ್ಳಾಟ ನೂಕಾಟ ನಡೆದಿದ್ದು, ಗ್ರಾಮದಲ್ಲಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ಪೊಲೀಸರು, ರೈತರು ಹಾಗೂ ವಕೀಲರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಜಮೀನಿನಲ್ಲಿ ವಿಂಡ್‌ ಫ್ಯಾನ್‌ ಅಳವಡಿಸಿರುವ ಕಂಪನಿಗಳು, ಹಣದ ವಿಚಾರದಲ್ಲಿ ಮೋಸ ಮಾಡಿವೆ ಎಂದು ಆರೋಪಿಸಿ ಲಕ್ಕುಂಡಿ ಗ್ರಾಮದ ರೈತರು ಪವನ ಶಕ್ತಿ ಕಂಪನಿ ಅಧಿಕಾರಿಗಳನ್ನು ಮಂಗಳವಾರ ಗ್ರಾಮ ಪಂಚಾಯ್ತಿ ಆವರಣದಲ್ಲಿ ಕೂಡಿ ಹಾಕಿದ್ದರು. 

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮಾಂತರ ಠಾಣೆ ಪೊಲೀಸರು ಕೂಡಿ ಹಾಕಿರುವ ಸಿಬ್ಬಂದಿಯನ್ನು ಬಿಡಿಸಿ ಕರೆದೊಯ್ಯುವ ಸಂದರ್ಭದಲ್ಲಿ ರೈತರು ಅಡ್ಡಿಪಡಿಸಿದರು. ಆಗ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಹಾಗೂ ದೂಕಾಟ, ತಳ್ಳಾಟ ನಡೆದಿದೆ. ಗದ್ದಲದಲ್ಲಿ ಕಾಲರ್‌ ಹಿಡಿದು ಎಳೆದಾಡಿಕೊಂಡಿದ್ದಾರೆ. ರೈತರ ಪರ ವಕಾಲತ್ತು ವಹಿಸಿದ್ದ ವಕೀಲರನ್ನೂ ಪೊಲೀಸರು ದೂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. 'ಗ್ರಾಮ ಪಂಚಾಯ್ತಿಯಿಂದ ಎನ್‌ಒಸಿ ಪಡೆಯದೇ ವಿಂಡ್‌ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. 

Tap to resize

Latest Videos

undefined

ಒಕ್ಕಲಿಗ ಯುವಕನ ಮದುವೆಯಾದ ಐದೇ ದಿನಕ್ಕೆ ಮಸಣ ಸೇರಿದ ದಲಿತ ಯುವತಿ: ಕೊಡಗಿನಲ್ಲಿ ನಡೆಯಿತಾ ಮರ್ಯಾದ ಹತ್ಯೆ?

ಜಮೀನು ಗುತ್ತಿಗೆ ಪಡೆದಿರುವ ಕಂಪನಿ ರೈತರಿಗೂ ಮೋಸ ಮಾಡಿದೆ. ಇದಕ್ಕೆ ಮಧ್ಯವರ್ತಿಗಳೇ ಸೂತ್ರಧಾರರು' ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ. 'ಗುತ್ತಿಗೆ ಹಣದ ವಿಚಾರವಾಗಿ ರೈತರು ಪವನಶಕ್ತಿ ಕಂಪನಿಯ ಕೆಳದರ್ಜೆಯ ಅಧಿಕಾರಿಗಳನ್ನು ಕೂಡಿಹಾಕಿದ್ದರು. ನಾವು ಸಾಮಾನ್ಯ ಸಿಬ್ಬಂದಿ. ನಮ್ಮಿಂದ ನಿಮ್ಮ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ನಿಮ್ಮ ಯಾವುದೇ ಬೇಡಿಕೆಗಳಿದ್ದರೂ ಮೇಲಧಿಕಾರಿಗಳಿಗೆ ತಿಳಿಸಿ ಎಂದು ಅವರು ರೈತರಲ್ಲಿ ಮನವಿ ಮಾಡಿಕೊಂಡಿದ್ದರು. 

ದಾವಣಗೆರೆ ಜಿಲ್ಲೆಯಲ್ಲಿ ನರೇಗಾ ಕಾಮಗಾರಿಯನ್ನು ಹೆಚ್ಚಿಸಿ: ಸಂಸದ ಜಿ.ಎಂ.ಸಿದ್ದೇಶ್ವರ

ನಾವು ಕೂಡ ಈ ವಿಷಯವನ್ನೇ ರೈತರಿಗೆ ಹೇಳಿ ಅವರನ್ನು ಕರೆದೊಯ್ಯುವ ಸಂದರ್ಭದಲ್ಲಿ ಮಾತಿನ ಚಕಮಕಿ, ತಳ್ಳಾಟ ನಡೆಯಿತು'  ಅಂತಾ ಪೊಲೀಸರು ತಿಳಿಸಿದ್ದಾರೆ. '30 ವರ್ಷಗಳ ಗುತ್ತಿಗೆ ಹಣವನ್ನು ಒಮ್ಮೆಲೆ ಕೊಡಬೇಕು ಎಂಬುದು ರೈತರ ಸದ್ಯದ ಬೇಡಿಕೆ ಆಗಿದೆ. ಆದರೆ, ಒಪ್ಪಂದದಲ್ಲಿನ ನಿಯಮಗಳಂತೆ ಅದಕ್ಕೆ ಅವಕಾಶವಿಲ್ಲ. ಸದ್ಯಕ್ಕೆ ಪರಿಸ್ಥಿತಿ ತಿಳಿಯಾಗಿದ್ದು, ರೈತರು ಹಾಗೂ ಕಂಪನಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ' ಅಂತಾ ಪೊಲೀಸರು ತಿಳಿಸಿದ್ದಾರೆ.

click me!