ಮಾಧುಸ್ವಾಮಿಯನ್ನು ಸಚಿವ ಸ್ಥಾನದಿಂದ ಕೈ ಬಿಡಲು ಒತ್ತಾಯ

By Suvarna News  |  First Published Oct 10, 2021, 3:06 PM IST
  • ಸಚಿವ ಮಾಧುಸ್ವಾಮಿ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ 
  • ಸಚಿವ ಮಾಧುಸ್ವಾಮಿ ಫೋಟೋಗೆ ಬೆಂಕಿ ಹಚ್ಚಿ ಆಕ್ರೋಶ 

ಕೋಲಾರ (ಅ.10): ಸಚಿವ ಮಾಧುಸ್ವಾಮಿ (Minister Madhuswamy) ವಿರುದ್ಧ ಕೋಲಾರದಲ್ಲಿ (Kolar) ಪ್ರತಿಭಟನೆ ನಡೆಸಲಾಗಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಫೋಟೋಗೆ (Photo) ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. 

ಸಚಿವ ಸಂಪುಟದಿಂದ (Cabinet) ಕೈ ಬಿಡುವಂತೆ ಆಗ್ರಹಿಸಿ ಕೋಲಾರ (Kolar) ನಗರದ ಗಾಂಧಿ ವನದ ಬಳಿ ವಿವಿಧ ರೈತಪರ (Farmers) ಮತ್ತು ಕನ್ನಡ ಪರ (Pro kannada activist) ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿ ಅಸಮಾಧಾನ ಹೊರಹಾಕಿವೆ.  

Latest Videos

undefined

ನಿನ್ನೆ ಜಿಲ್ಲೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದು, ರೈತರ ಮನವಿ ಆಲಿಸದೆ ಕಾರು( Car) ಸಹ ನಿಲ್ಲಿಸದೆ ತೆರಳಿದ್ದರೆಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.  ಹಾರ ತುರಾಯಿ ಜೊತೆಗೆ ಸಚಿವರ ಆಗಮನಕ್ಕಾಗಿ ಕಾಯುತ್ತಿದ್ದ ರೈತ ಸಂಘಟನೆಗಳನ್ನು,  ರೈತರ ಮನವಿಯನ್ನು ಕಡೆಗಣಿಸಿ ಸೌಜನ್ಯಕ್ಕೂ ಮಾತನಾಡಿಸದೆ ತೆರಳಿದ್ದರು. 

ಕೋಲಾರ ಜಿಲ್ಲೆಯ ರಾಮಸಂದ್ರ (Ramasandra) ಗಡಿಯಲ್ಲಿ ಘಟನೆ ನಡೆದಿದ್ದು, ರೈತರ ಪರ ಕಾಳಜಿ ಇಲ್ಲದ ಸಚಿವ ಮಾಧುಸ್ವಾಮಿಯನ್ನ ಸಚಿವ ಸಂಪುದಿಂದ ಕೈಬಿಡುವಂತೆ ಒತ್ತಾಯಿಸಲಾಗಿದೆ. 

ಹಿಂದೆ ಜನಾಶೀರ್ವಾದ ಯಾತ್ರೆಯಲ್ಲೂ ಇದೇ ನಡೆ

 

ಒಂದೆಡೆ ಕರ್ನಾಟಕದಲ್ಲಿ (Karnataka) ಕೊರೋನಾ (Corona) ಮೂರನೇ ಅಲೆ ಬಗ್ಗೆ ಎಚ್ಚರದಿಂದ ಇರಿ ಎಂದು ಸಾರ್ವಜನಿಕರಿಗೆ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳುತ್ತಾರೆ. ಆದ್ರೆ, ಸರ್ಕಾರ (Government) ನಡೆಸುವವರೇ ಕೋವಿಡ್ ರೂಲ್ಸ್ ಪಾಲನೆ ಮಾಡುತ್ತಿಲ್ಲ.

ಹೌದು...ಕೊರೋನಾ ನಿಯಮಗಳನ್ನ ಗಾಳಿಗೆ ತೂರಿ ಬಿಜೆಪಿ ಜನಾಶಿರ್ವಾದ ಯಾತ್ರೆ ನಡೆಸುತ್ತಿದ್ದೆ. ಈ ಯಾತ್ರೆಯಲ್ಲಿ ಸಾವಿರಾರು ಜನ ಸೇರುತ್ತಿದ್ದಾರೆ. ಅದ್ಯಾವುದಕ್ಕೂ ಪೊಲೀಸರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಇನ್ನು ಈ ಬಗ್ಗೆ ಸಚಿವರೇ ಬೇಜವಾಬ್ದಾರಿ ಹೇಳಿಕೆಗಳನ್ನ ಕೊಟ್ಟಿದ್ದಾರೆ.

ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ ಜನ ಜಾತ್ರೆ: ಬೇಜವಾಬ್ದಾರಿ ಉತ್ತರ ಕೊಟ್ಟ ಸಚಿವ ಮಾಧುಸ್ವಾಮಿ

ಕೋವಿಡ್ ಸಂದರ್ಭದಲ್ಲೀ ಉಡಾಫೆ ಹೇಳಿಕೆ 

ಹಿಂದೆ ಇವರು ಹೆಸರಿಗಷ್ಟೇ ಜಿಲ್ಲಾ ಉಸ್ತುವಾರಿ. ಜವಾಬ್ದಾರಿ ಮಾತ್ರ ಬೇಡ ಎನ್ನುವಂತೆ ನಡೆದುಕೊಂಡಿದ್ದರು... ತುಮಕೂರಿನಲ್ಲಿ ಆಕ್ಸಿಜನ್ ಕೊರತೆಯಿದೆ. ಏನಾದ್ರೂ ವ್ಯವಸ್ಥೆ ಮಾಡಿ ಸರ್  ಅಂತ ಸಚಿವ ಮಾಧುಸ್ವಾಮಿಗೆ ಕರೆ ಮಾಡಿದರೆ, ಸಿಎಂಗೆ ಕೇಳಿ ಅಂತ ಉಢಾಫೆ ಉತ್ತರ ಕೊಟ್ಟಿದ್ದರು. ಹುದ್ದೆ ಮಾತ್ರ ಬೇಕು ಜವಾಬ್ದಾರಿ ಬೇಡ ಎನ್ನುವ ರೀತಿಯಲ್ಲಿ ಈ ಹಿಂದೆಯೂ ಸಚಿವ ಮಾಧುಸ್ವಾಮಿ ವರ್ತಿಸಿದ್ದರು. ಇದು ಅನೇಕ ಬಾರಿ ನಡೆದಿದ್ದು ಇದೀಗ ಕೋಲಾರದಲ್ಲಿ ನಡೆದ ಘಟನೆಯಿಂದ ರೈತ ಸಂಘಟನೆಗಳು ಹಾಗು ರೈತರು, ಮುಖಂಡರು ಸಚಿವ ಮಾಧುಸ್ವಾಮಿ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿವೆ.

ಆಕ್ಸಿಜನ್ ಇಲ್ಲ ಅಂದ್ರೆ ಸಿಎಂಗೆ ಕೇಳಿ ಅಂತಾರೆ ಮಾಧುಸ್ವಾಮಿ.! ಇದೆಂಥಾ ಉಡಾಫೆ ಸಚಿವರೇ..

click me!