Belagavi: ಕುಡಿಯುವ ನೀರಿಗಾಗಿ ನೀರಾವರಿ ಇಲಾಖೆ ಅಧಿಕಾರಿಗಳ ಕೂಡಿ ಹಾಕಿ ಅನ್ನದಾತರ ಆಕ್ರೋಶ

By Girish Goudar  |  First Published May 1, 2022, 9:26 AM IST

*   ಮಾಜಿ ಜಿ.ಪಂ.ಸದಸ್ಯ ನೇತೃತ್ವದಲ್ಲಿ ಮುತ್ತಿಗೆ ಹಾಕಿದ್ದ ರೈತರು
*   ಎಸಿಪಿ ಸದಾಶಿವ ಕಟ್ಟೀಮನಿ ಮನವೊಲಿಕೆ ಬಳಿಕ ಧರಣಿ ವಾಪಸ್
*  ನೀರು ಬಿಡದಿದ್ರೆ ಎಸಿಪಿ ಕಚೇರಿ ಎದುರೇ ಧರಣಿ ನಡೆಸುವ ಎಚ್ಚರಿಕೆ
 


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಮೇ.01): ಘಟಪ್ರಭಾ ಬಲದಂಡೆ ಕಾಲುವೆಗೆ ನೀರು(Water) ಹರಿಸುವಂತೆ ಆಗ್ರಹಿಸಿ ಮಾಜಿ ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ ನೇತೃತ್ವದಲ್ಲಿ ರೈತರು ಬೆಳಗಾವಿಯ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

Tap to resize

Latest Videos

ನಿನ್ನೆ(ಶನಿವಾರ) ಬೆಳಗಾವಿ(Belagavi) ನಗರದ ಕ್ಲಬ್ ರಸ್ತೆಯಲ್ಲಿರುವ ನೀರಾವರಿ ಇಲಾಖೆಗೆ(Department of Irrigation) ಮುತ್ತಿಗೆ ಹಾಕಿದ್ದ ರೈತರು(Farmers) ತಡರಾತ್ರಿವರೆಗೂ ನೀರಾವರಿ ಇಲಾಖೆ ಕಚೇರಿಯಲ್ಲಿಯೇ ಇಂಜಿನಿಯರ್‌ಗಳು ಸೇರಿ ಅಧಿಕಾರಿಗಳನ್ನು ಕೂಡಿ ಹಾಕಿ ಪ್ರತಿಭಟನೆ(Protest) ನಡೆಸಿದ್ದಾರೆ.

Belagavi: ನಾಪತ್ತೆಯಾಗಿದ್ದ ಬಾಲಕಿ 4 ದಿನದ ಬಳಿಕ ಅರಣ್ಯದಲ್ಲಿ ಪತ್ತೆ

ಘಟಪ್ರಭಾ ಬಲದಂಡೆ ಕಾಲುವೆಗೆ ಪ್ರತಿದಿನ ಎರಡು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪಟ್ಟು ಹಿಡಿದರು. ಸಮರ್ಪಕ ನೀರು ಇಲ್ಲದೆ ಗೋಕಾಕ್, ಮೂಡಲಗಿ ತಾಲೂಕಿನ ಜನ, ಜಾನುವಾರುಗಳಿಗೆ(Livestock) ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ. ಹೀಗಾಗಿ ತಕ್ಷಣವೇ ಕಾಲುವೆಗೆ(Canal) ನೀರು ಹರಿಸುವಂತೆ ಪಟ್ಟು ಹಿಡಿದರು. ಸ್ಥಳಕ್ಕೆ ಎಸಿಪಿ ಸದಾಶಿವ ಕಟ್ಟಿಮನಿ, ಸಿಪಿಐ ಮಂಜುನಾಥ ಹಿರೇಮಠ ಆಗಮಿಸಿ ಧರಣಿ ನಿರತರ ಮನವೊಲಿಸಲು ಹರಸಾಹಸ ಪಟ್ಟರು. ಬಳಿಕ ಅಧಿಕಾರಿಗಳು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತುಕತೆ ನಡೆಸಿ ಧರಣಿ ನಿರತರ ಮನವೊಲಿಸಿದರು. ಕಾಲುವೆಗೆ ನೀರು ಬಿಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ರೈತರು ವಾಪಸ್ ಆಗಿದ್ದಾರೆ. 

ನೀರು ಬಿಡದಿದ್ರೆ ಎಸಿಪಿ ಕಚೇರಿಗೆ ಮುತ್ತಿಗೆ ಹಾಕ್ತೀವಿ

ಘಟಪ್ರಭಾ ಬಲದಂಡೆ ಕಾಲುವೆಗೆ ಎರಡು ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾದೇಶಿಕ ಆಯುಕ್ತರಿಗೆ ಮನವಿ ಮಾಡಿದ್ದೆವು. ಏ.22ರಂದು ಜಿ.ಪಂ.ಸಿಇಒ ಸೇರಿ ಇತರ ಅಧಿಕಾರಿಗಳಿಗೂ ಮನವಿ ಮಾಡಿದ್ದೆವು. ಮನವಿ ನೀಡಿದರೂ ನೀರು ಬಿಡಲಿಲ್ಲ ಬಳಿಕ ಕಚೇರಿಗೆ ಆಗಮಿಸಿ ಒತ್ತಾಯಿಸಿದಾಗ ಎರಡು ದಿನ ನೀರು ಹರಿಸಿ ಈಗ ಮತ್ತೆ ಬಂದ್ ಮಾಡಿದ್ದಾರೆ. ಯಾದವಾಡ, ಕುಲಗೋಡ, ಕೌಜಲಗಿ, ಹೊನಕುಪ್ಪಿ ಸೇರಿ ಹಲವು ಗ್ರಾಮಗಳಲ್ಲಿ ಜನ ಜಾನುವಾರುಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದೆ‌. ಪ್ರತಿ ವರ್ಷ ಎರಡು ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿತ್ತು. ಅಧಿಕಾರಿಗಳು ಒಬ್ಬರೊಬ್ಬರ ಮೇಲೆ ಆರೋಪ ಮಾಡುತ್ತಾ ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದರು. 

ಇನ್ನು ಎಸಿಪಿ ಮನವೊಲಿಕೆ ಬಳಿಕ ಮಾತನಾಡಿದ ಮಾಜಿ ಜಿ.ಪಂ.ಸದಸ್ಯ ಗೋವಿಂದ ಕೊಪ್ಪದ, 'ಮೇ4. ರೊಳಗೆ ಕಾಲುವೆಗೆ ನೀರು ಬಿಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈಗ ಎಸಿಪಿ ಸದಾಶಿವ ಕಟ್ಟಿಮನಿ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಇಂದು(ಭಾನುವಾರ) ಪ್ರಾದೇಶಿಕ ಆಯುಕ್ತರ ಜೊತೆ ಚರ್ಚಿಸಿ ಕಾಲುವೆಗೆ ನೀರು ಹರಿಸಲು ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಎಸಿಪಿ ಸದಾಶಿವ ಕಟ್ಟಿಮನಿ ಮಾತು ನೀಡಿದ್ದರಿಂದ ಧರಣಿ ಹಿಂಪಡೆದಿದ್ದೇವೆ. ಮೇ. 4ರೊಳಗೆ ಕಾಲುವೆಗೆ ನೀರು ಹರಿಸದಿದ್ದರೆ ನೀರಾವರಿ ಇಲಾಖೆ ಕಚೇರಿ ಬಿಟ್ಟು ಎಸಿಪಿ ಸದಾಶಿವ ಕಟ್ಟಿಮನಿ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. 
 

click me!