ಕಾಲುವೆ ಮೂಲಕ ಹಳ್ಳಕ್ಕೆ ನೀರು: ರೈತರ ಮೊಗದಲ್ಲಿ ಮಂದಹಾಸ

By Web DeskFirst Published Sep 22, 2019, 11:18 AM IST
Highlights

ಹುಣಶ್ಯಾಳ ಪಿ.ಬಿ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಹಳ್ಳಕ್ಕೆ ಹಾಗೂ ಹೂವಿನಹಿಪ್ಪರಗಿಯ ಹಳ್ಳಕ್ಕೆ ಕಾಲುವೆ ಮೂಲಕ ನೀರು| ನೀರು ಬರುತ್ತಿದ್ದಂತೆ ಸಂತಸಪಟ್ಟ ರೈತರು| ಹಳ್ಳಕ್ಕೆ ಬರುತ್ತಿದ್ದ ನೀರು ನೋಡಲು ಬಂದ ಗ್ರಾಮಸ್ಥರು| ಹಳ್ಳಕ್ಕೆ ನೀರು ಹರಿಸಿದ್ದರಿಂದ ಅಲ್ಲಲ್ಲಿ ನಿರ್ಮಿಸಿದ ಬಾಂದಾರನಲ್ಲಿ ನೀರು ನಿಲ್ಲುವುದರಿಂದ ಸಮೀಪದ ಜಮೀನುಗಳಿಗೆ ಅನುಕೂಲ| 

ಬಸವನಬಾಗೇವಾಡಿ:(ಸೆ.22) ತಾಲ್ಲೂಕಿನ ಹುಣಶ್ಯಾಳ ಪಿ.ಬಿ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ಹಳ್ಳಕ್ಕೆ ಹಾಗೂ ಹೂವಿನಹಿಪ್ಪರಗಿಯ ಹಳ್ಳಕ್ಕೆ ಕಾಲುವೆ ಮೂಲಕ ನೀರು ಹರಿಸಿದ್ದಾರೆ. ನೀರು ಬರುತ್ತಿದ್ದಂತೆ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಮಸಬಿನಾಳ ಜಾಕ್ವೆಲ್‌ನಿಂದ ಕುದರಿಸಾಲವಾಡಗಿ ಕಾಲುವೆ ಮೂಲಕ ಹಳ್ಳಕ್ಕೆ ಹರಿದು ಬರುತ್ತಿರುವ ನೀರು ನೋಡಲು ಗ್ರಾಮಸ್ಥರು ತಂಡೋಪ ತಂಡವಾಗಿ ತೆರಳುತ್ತಿರುವುದು ಕಂಡು ಬಂದಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಮರ್ಪಕ ಮಳೆಯಾಗದೆ ಇರುವುದರಿಂದ ಅಂತರ್ಜಲಮಟ್ಟ ಕುಸಿತದಿಂದಾಗಿ ತೋಟದ ಕೊಳವೆ ಬಾವಿ, ತೆರೆದ ಬಾವಿಯಲ್ಲಿ ನೀರಲ್ಲದೇ ಇರುವುದರಿಂದ ತೋಟದ ಬೆಳೆಗಳು ಒಣಗುತ್ತಿವೆ. ಹಳ್ಳಕ್ಕೆ ನೀರು ಹರಿಸಿದ್ದರಿಂದ ಅಲ್ಲಲ್ಲಿ ನಿರ್ಮಿಸಿದ ಬಾಂದಾರನಲ್ಲಿ ನೀರು ನಿಲ್ಲುವುದರಿಂದ ಸಮೀಪದ ಜಮೀನುಗಳಿಗೆ ಅನುಕೂಲವಾಗಲಿದೆ ಎಂದು ಹುಣಶ್ಯಾಳ ಪಿ.ಬಿ. ಗ್ರಾಮದ ಕೆಲ ರೈತರು ತಿಳಿಸಿದರು.ಶ 
ಕುಮಾರಗೌಡ ಪಾಟೀಲ, ಶಂಕರಗೌಡ ಪಾಟೀಲ, ಎನ್‌.ಎಂ. ದೇಶಮುಖ, ಶರಣಗೌಡ ಪಾಟೀಲ, ಬಸವರಾಜ ಕೊಲಕಾರ, ಉದಯಕುಮಾರ ಆಲೂರ, ಅಣ್ಣಪ್ಪ ಆಲೂರ, ಚಂದ್ರಶೇಖರಗೌಡ ಪಾಟೀಲ ಇದ್ದರು.

ಹೂವಿನಹಿಪ್ಪರಗಿ ವರದಿ:

ಗ್ರಾಮದ ಬಸ್‌ ನಿಲ್ದಾಣದ ಹತ್ತಿರದ ಹಳ್ಳ ಸೇರಿದಂತೆ ಕೆರೆಗೆ ಕಾಲುವೆ ಮುಖಾಂತರ ಶುಕ್ರವಾರ ನೀರು ಹರಿಸಲಾಯಿತು.

ಕೆಲ ವರ್ಷಗಳಿಂದ ಮಳೆಯಾಗದ್ದರಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳ ಸೇರಿದಂತೆ ವಿವಿಧೆಡೆ ಹಳ್ಳಕ್ಕೆ ನೀರು ಬಂದಿರಲಿಲ್ಲ. ಹಳ್ಳಕ್ಕೆ ನೀರು ಹರಿಸುವುದಲ್ಲದೇ ಗ್ರಾಮದ ಕೆರಗೆ ಎರಡನೇ ಸಲ ನೀರು ಹರಿಸುತ್ತಿರುವುದು ಸಂತಸ ತಂದಿದೆ.

ಅಂತರ್ಜಲ ಹೆಚ್ಚಳವಾಗಿ ಮುಂಬರುವ ದಿನಗಳಲ್ಲಿ ಅಲ್ಲಲ್ಲಿ ತೋಟದಲ್ಲಿ ಬೆಳೆದು ನಿಂತಿದ್ದ ಲಿಂಬೆ ಗಿಡಗಳು ಹಾಗೂ ಇತರ ತೋಟದ ಬೆಳೆಗಳಿಗೆ ಒಂದಷ್ಟುಆಸರೆಯಾಗಲಿದೆ ಎಂಬ ವಿಶ್ವಾಸವಿದೆ ಎಂದು ಹಳ್ಳಕ್ಕೆ ನೀರು ಹರಿಯುತ್ತಿರುವುದನ್ನು ವೀಕ್ಷಿಸುತ್ತಿದ್ದ ರೈತರು ತಿಳಿಸಿದರು.
 

click me!