ಉಡುಪಿ: ತಡವಾದ ಮಳೆ, ಮಟ್ಟು ಗುಳ್ಳ ಉತ್ತಮ ಇಳುವರಿ, ರೈತರು ಫುಲ್ ಖುಷ್..!

By Girish Goudar  |  First Published May 17, 2023, 1:50 PM IST

ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಪರಿಸರದಲ್ಲಿ ಬೆಳೆಯಲಾಗುವ ಮಟ್ಟು ಗುಳ್ಳು ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ ಮಾನ್ಯತೆಯನ್ನು ಕೂಡ ಪಡೆದಿದೆ. ಮಟ್ಟು ಭಾಗದಲ್ಲಿ ಹೆಚ್ಚಿನ ಕೃಷಿಕರು ಮಟ್ಟು ಗುಳ್ಳು ಬೆಳೆಗಾರರು ತಮ್ಮ ಜೀವನಕ್ಕೆ ಈ ಕೃಷಿಯನ್ನು ಅವಲಂಭಿಸಿಕೊಂಡಿದ್ದಾರೆ.


ಉಡುಪಿ(ಮೇ.17): ಉಡುಪಿ ಜಿಲ್ಲೆಯಲ್ಲಿ ಮಾತ್ರ ಬೆಳೆಯುವ ಮಟ್ಟು ಗುಳ್ಳ ಎಂಬ ಬದನೆಯ ತಳಿ ಬಂಪರ್ ಇಳುವರಿ ಬಂದಿದೆ. ನಾಲ್ಕು ಶತಮಾನದ ಹಿಂದೆ ಬದುಕಿದ್ದ ಮತ್ತು ಅಷ್ಟ ಮಠಾಧೀಶರಲ್ಲಿ ಒಬ್ಬರಾದ ಸೋದೆ ಶ್ರೀ ವಾದಿರಾಜ ಸ್ವಾಮಿಗಳ ವರಪ್ರಸಾದವೆಂದೇ ಈ ಬದನೆಯ ತಳಿಯನ್ನು ನಂಬಲಾಗುತ್ತದೆ.

ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟು ಪರಿಸರದಲ್ಲಿ ಬೆಳೆಯಲಾಗುವ ಮಟ್ಟು ಗುಳ್ಳು ಜಿಯೋಗ್ರಾಫಿಕಲ್ ಐಡೆಂಟಿಫಿಕೇಶನ್ ಮಾನ್ಯತೆಯನ್ನು ಕೂಡ ಪಡೆದಿದೆ. ಮಟ್ಟು ಭಾಗದಲ್ಲಿ ಹೆಚ್ಚಿನ ಕೃಷಿಕರು ಮಟ್ಟು ಗುಳ್ಳು ಬೆಳೆಗಾರರು ತಮ್ಮ ಜೀವನಕ್ಕೆ ಈ ಕೃಷಿಯನ್ನು ಅವಲಂಭಿಸಿಕೊಂಡಿದ್ದಾರೆ.

Latest Videos

undefined

ಕರೆಂಟ್‌ ಬಿಲ್‌ ಕೊಡಬೇಡಿ, ನಾವು ಕಟ್ಟಲ್ಲ: ಮೆಸ್ಕಾಂ ಮೀಟರ್ ಬೋರ್ಡ್‌ಗೆ ಚೀಟಿ ಅಂಟಿಸಿದ ಉಡುಪಿ ನಾಗರಿಕ

ಅಕ್ಟೋಬರ್ ತಿಂಗಳಲ್ಲಿ ಗುಳ್ಳು ಬೀಜ ಬಿತ್ತನೆ ಮಾಡಲಾಗುತ್ತದೆ. ಆರಂಭದಲ್ಲಿ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 200ರೂ  ಕಿಂತಲೂ ಹೆಚ್ಚು ದರ ನಿಗದಿ ಪಡಿಸಿದ ಮಾರಾಟ ಮಾಡಲಾಗುತ್ತದೆ. ಈ ಬಾರಿ ಮೇ ತಿಂಗಳ ಕೊನೆಯ ವಾರದವರೆಗೂ ಮಾರುಕಟ್ಟೆಯಲ್ಲಿ ಮಟ್ಟು ಗುಳ್ಳು ಸಿಗುತ್ತಿದೆ. ಈ ಬಾರಿ ಉತ್ತಮ ವ್ಯವಹಾರ ನಡೆದಿದೆ ಎಂದು ಮಟ್ಟು ಗುಳ್ಳಬೆಳೆಗಾರರು ಹೇಳುತ್ತಾರೆ.

ಮುಂದಿನ ಭತ್ತದ ಕೃಷಿಗೆ ತಯಾರಾಗುತ್ತಿರುವ ಕೃಷಿಕರು

ಮಟ್ಟು ಗುಳ್ಳ ಗಿಡಗಳನ್ನು ಕೀಳುತ್ತಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ, ಭತ್ತದ ಕೃಷಿ ಕಾರ್ಯ ಆರಂಭಗೊಳ್ಳುತ್ತದೆ. ಕೃಷಿಕರು ಮಳೆಯನ್ನು ಕಾಯದೆ ಕೆರೆಯ ನೀರುಗಳನ್ನು ಅವಲಂಬಿಸಿಕೊಂಡು ಬೀಜ ಬಿತ್ತನೆ ಮಾಡುತ್ತಿದ್ದಾರೆ.

Karnataka CM: ಡಿಕೆಶಿಯನ್ನು ಸಿಎಂ ಮಾಡುವಂತೆ ಉಡುಪಿ ಒಕ್ಕಲಿಗರ ಸಂಘ ಆಗ್ರಹ

ನೆರೆ ಮತ್ತು ಉಪ್ಪು ನೀರಿನ ಹಾವಳಿ ಕಡಿಮೆ

ಈ ಬಾರಿಯ ವಾತಾವರಣದಲ್ಲಿ ಯಾವುದೇ ಬದಲಾವಣೆ ಆಗದ ಹಿನ್ನೆಲೆ ಮಟ್ಟು ಗುಳ್ಳು ಕೃಷಿ ಯಾವುದೇ ತೊಂದರೆ ಆಗಿಲ್ಲ. ಆದ್ದರಿಂದ ರೈತರ ಮುಖದಲ್ಲಿ ಖುಷಿ ತಂದಿದೆ. ಪ್ರತಿ ವರ್ಷ ಹವಾಮಾನ ವೈಪರೀತ್ಯದಲ್ಲಿ ಮಳೆ ಆಗುತ್ತಿದ್ದು ಕೃಷಿ ಹಾನಿ ಆಗುತ್ತಿತ್ತು. ಆದರೆ ಈ ಬಾರಿ ಇನ್ನೂ ಮಳೆಯಾಗಿಲ್ಲ. ಮುಂಗಾರು ಪೂರ್ವ ಮಳೆಯ ಅಡ್ಡಿ ಆತಂಕ ಇರಲಿಲ್ಲ. ಹಾಗಾಗಿ ಉತ್ತಮ ಬೆಳೆ ಇಳುವರಿ ಸಿಕ್ಕಿದೆ.

ಈ ಬಾರಿ ಮುಂಗಾರು ವಿಳಂಬ ಸಾಧ್ಯತೆ

ಮುಂಗಾರು ಮಳೆ ಆಗಮನ ಸ್ವಲ್ಪ ವಿಳಂಬವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದ ಈ ಭಾಗದ ಕೃಷಿಕರು ಮಳೆಯನ್ನು ಅವಲಂಭಿಸದೆ, ಭತ್ತದ ಬಿತ್ತನೆ ಆರಂಭಿಸಿದ್ದಾರೆ. ಮಟ್ಟು ಗುಳ್ಳದ ಉತ್ತಮ ಇಳುವರಿಯ ಖುಷಿಯಲ್ಲಿ ರೈತರು ಭತ್ತದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

click me!